Lizard vastu signs in house
- ಮನೆಯ ಈಶಾನ್ಯಾ ಭಾಗದಲ್ಲಿ ಹಲ್ಲಿ ಕಾಣಿಸಿಕೊಂಡರೆ ರಾಜಯೋಗದ ಮುನ್ಸೂಚನೆಯೇ?
- ಇನ್ನು ಮುಂದೆ ಹಲ್ಲಿ ಕಂಡರೆ ಭಯ ಪಡುವುದು ಬೇಡ ಇದು ಲಕ್ಷ್ಮಿ ಮನೆ ಪ್ರವೇಶದ ಸಂಕೇತ
- ವಾಸ್ತು ಶಾಸ್ತ್ರದ ಪ್ರಕಾರ ಹಲ್ಲಿಯನ್ನು ಲಕ್ಷ್ಮೀ ದೇವಿಗೆ ಹೋಲಿಕೆ ಮಾಡಲಾಗುತ್ತದೆ
Lizard vastu signs in house: ಸಾಮಾನ್ಯವಾಗಿ ಮನೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಕೆಲವರಿಗೆ ಹಿಂಸೆ ಎನಿಸುತ್ತದೆ. ಅದನ್ನು ಅಲ್ಲಿಂದ ಓಡಿಸಲು ನಾನಾ ಪ್ರಯತ್ನ ಮಾಡುತ್ತಾರೆ. ಗೋಡೆಯ ಮೂಲೆಯಲ್ಲಿ ಮೊಟ್ಟೆಯ ಮೇಲ್ಪದರವನ್ನು ಇಡುವುದು. ಇಲ್ಲವಾದಲ್ಲಿ ಆಲೋವೆರಾ ಗಿಡ ಬಾಗಿಲಿಗೆ ನೇತು ಹಾಕುವುದು ಸೇರಿದಂತೆ ನಾನಾ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಆದರೆ ಇನ್ಮುಂದೆ ಹಾಗೆ ಮಾಡಬೇಡಿ ಮನೆಯ ಈ ಭಾಗದಲ್ಲಿ ಹಲ್ಲಿ ಕಾಣಿಸಿಕೊಂಡರೆ ಅದು ಶುಭ ಸೂಚನೆ ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ.
ಪ್ರಾಚೀನ ಕಾಲದ ಪ್ರಕಾರ ನಮ್ಮ ಮನೆಗೆ ಬರುವ ಪ್ರತಿ ಕೀಟ ಮತ್ತು ಜೀವಚರಗಳು ಶುಭ ಮತ್ತು ಕೆಡಕು ಸೂಚನೆಯನ್ನು ಕೊಡುತ್ತದೆ. ಗುಬ್ಬಿ ಗೂಡು ಕಟ್ಟುವುದು, ಜೇಡ ಬಲೆ ಕಟ್ಟುವುದು, ಗೂಬೆ, ಬಾವಲಿ ಹೀಗೆ ಒಂದೊಂದಕ್ಕೂ ಒಂದು ಆಚಾರ ವಿಚಾರ ಇದೆ.. ಹಾಗೆಯೇ ಹಲ್ಲಿ ಮನೆಯ ಕೆಲವು ಭಾಗದಲ್ಲಿ ಕಾಣಿಸಿಕೊಂಡರೆ ಅದು ಅಶುಭ ಸೂಚನೆಯಲ್ಲ ಎಂದು ವಾಸ್ತು ಶಾಸ್ತ್ರದ ಪ್ರಕಾರ ಹೇಳಲಾಗುತ್ತದೆ. ಹಾಗಾದ್ರೆ ಮನೆಯ ಯಾವ ಭಾಗದಲ್ಲಿ ಹಲ್ಲಿ ಕಾಣಿಸಿಕೊಂಡರೆ ಶುಭ ಸೂಚನೆ ಎಂದು ತಿಳಿದುಕೊಳ್ಳೋಣ.
ಈಶಾನ್ಯ ದಿಕ್ಕಿನಲ್ಲಿ ಹಲ್ಲಿ ಕಂಡಿತ್ತಾ?
ಇತಿಹಾಸದಲ್ಲಿ ಹಲ್ಲಿಯನ್ನು ಲಕ್ಷ್ಮಿ ದೇವಿಯಂದು ಕರೆಯಲಾಗುತ್ತದೆ. ಇದು ದೀಪಾವಳಿ ಹಬ್ಬದ ರಾತ್ರಿ ಹಲ್ಲಿ ಕಾಣಿಸಿಕೊಂಡರೆ, ಅದು ಅಧಿಕೃತವಾಗಿ ಲಕ್ಷ್ಮಿ ಗೃಹ ಪ್ರವೇಶಿಸಿದ್ದಾಳೆ ಎಂದು ಅರ್ಥವಂತೆ. ವಾಸ್ತು ಶಾಸ್ತ್ರದ ಪ್ರಕಾರ ಹಲ್ಲಿ ಈಶಾನ್ಯ ಭಾಗದಲ್ಲಿ ಅಥವಾ ಈಶಾನ್ಯ ಭಾಗದ ಗೋಡೆ ಮೇಲೆ ಕಾಣಿಸಿಕೊಂಡರೆ ಶುಭ ಎನ್ನಲಾಗುತ್ತದೆ. ಈ ದಿಕ್ಕು ಶಕ್ತಿ, ಜ್ಞಾನದ ಭಾಗ ಎನ್ನಲಾಗುತ್ತದೆ. ಉದ್ಯೋಗ, ವ್ಯವಹಾರದಲ್ಲಿ ಲಾಭ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ. ಆದರೆ, ಹಲ್ಲಿ ಒಂದೇ ಕಡೆ ನಿಲ್ಲದೆ ಕೆಳಕ್ಕೆ ಬಿದ್ದು ಮೇಲಕ್ಕೆ ಹತ್ತುವ ಸರ್ಕಸ್ ಮಾಡುತ್ತಿದ್ದರೆ ಇದು ಅನಗತ್ಯ ಖರ್ಚಿನ ಸೂಚನೆ ಎಂದು ಹೇಳಲಾಗಿದೆ.
ಪೂಜಾ ಕೋಣೆಯಲ್ಲಿ ಈ ಭಾಗದಲ್ಲಿ ಹಲ್ಲಿ ಕಂಡಿತ್ತಾ?
ನಿಮ್ಮ ಪೂಜಾ ಕೋಣೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಹಲ್ಲಿ ಕಾಣಿಸಿಕೊಂಡರೆ ಅದನ್ನು ಹೊರದಬ್ಬಬೇಡಿ. ಇದು ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಎಂದಿಗೂ ಇಟ್ಟಿದೆ ಎನ್ನುವ ಸೂಚನೆಯನ್ನು ನೀಡುತ್ತಿದೆ. ಇನ್ನು ಮುಂದಿನ ದಿನದಲ್ಲಿ ಹಲ್ಲಿ ಕಂಡರೆ ಭಯ ಪಡಬೇಡಿ ಅದು ಯಾವ ಜಾಗದಲ್ಲಿ ಕಾಣಿಸಿಕೊಂಡಿದೆ ಎನ್ನುವುದನ್ನು ಗಮನಿಸಿ ಆರ್ಥಿಕ ಮಟ್ಟ ಹೆಚ್ಚಾಗುವ ಬಗ್ಗೆ ತೃಪ್ತಿ ಪಡಿ, (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.