Horse Or Elephant For Home Success And Peace
- ಯಶಸ್ಸು ಹಾಗೂ ನೆಮ್ಮದಿಗಾಗಿ ಆನೆ ಅಥವಾ ಓಡುವ ಕುದುರೆ ಯಾವುದಿಟ್ಟರೆ ಸೂಕ್ತ?.
- ಆನೆ ಮತ್ತು ಕುದುರೆ ಫೋಟೋಗಳು ತಮ್ಮದೇ ಪ್ರತ್ಯೇಕ ವಿಚಾರಗಳಲ್ಲಿ ಉತ್ತಮವಾಗಿದೆ.
- ಮನೆಯಲ್ಲಿ ಶಾಂತಿ ನೆಲೆಸಲು ಕುದರೆ ಹಾಗೂ ಆನೆಯ ಫೋಟೋ ಯಾವ ದಿಕ್ಕಿನಲ್ಲಿ ಇಡುವುದು ಉತ್ತಮ
Horse Or Elephant For Home Success And Peace:
ಜೋತಿಷ್ಯ ಶಾಸ್ತ್ರ, ವಾಸ್ತು ನಂಬುವವರ ನಿವಾಸ, ಕಚೇರಿಗಳಲ್ಲಿ ಓಡುವ 7 ಕುದುರೆಗಳ ಫೋಟೊ ಇರುವುದು ಸಾಮಾನ್ಯ. ಇದು ವಾಸ್ತು ಪ್ರಕಾರ ಅದೃಷ್ಟ ಮತ್ತು ಸಂಪತ್ತು ತರುತ್ತದೆ. ಈ ಕುದುರೆಗಳು ಶಕ್ತಿ ಮತ್ತು ಪ್ರಗತಿಯ ಸಂಕೇತ. ಇದರಿಂದ ಮನೆಯಲ್ಲಿ ಶಾಂತಿ ಇರುತ್ತದೆ. ಹಣಕಾಸಿನ ಸಮಸ್ಯೆ ಕಾಡೋದಿಲ್ಲ ಎನ್ನುವುದು ಹಲವರ ನಂಬಿಕೆ. ಆದರೆ ಹೆಚ್ಚಿನ ಜನಕ್ಕೆ ಕಾಡುವ ಸಂಶಯ ಎಂದರೆ ಓಡುವ ಕುದುರೆ ಅಥವಾ ಆನೆಯ ವರ್ಣ ಚಿತ್ರ ಇಡೋದು. ಯಾವುದು ಶುಭ ಅಥವಾ ಲಾಭ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಹಾಗಾದ್ರೆ ಇಂದು ಈ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
ಓಡುವ ಕುದುರೆ ಫೋಟೋ ಎಲ್ಲಿ, ಯಾವ ದಿಕ್ಕಲ್ಲಿರಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಓಡುವ ಏಳು ಕುದುರೆಗಳು ಹಣಕಾಸು, ವೇಗ, ಪ್ರಗತಿ ವೇಗದ ಸಂಕೇತ ಎಂಬುವ ನಂಬಿಕೆ ಇದೆ. ಇದನ್ನು ಕೆಲಸ ಮಾಡುವ ಜಾಗದಲ್ಲಿ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಹಾಕಿದರೆ ಇದು ಉದ್ಯೋಗದಲ್ಲಿ ಯಶಸ್ಸು, ಕೀರ್ತಿ ಮತ್ತು ಪ್ರಗತಿಯನ್ನು ತರುತ್ತದೆ. ಓಡುವ ಕುದುರೆಯ ಪಟವನ್ನು ಮನೆಯಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿನ ಗೋಡೆಯ ಮೇಲೆ ಹಾಕಬಹುದು. ಇದು ಆರ್ಥಿಕ ಪ್ರಗತಿ ಮತ್ತು ಜೀವನದಲ್ಲಿ ಹೊಸ ಅವಕಾಶಗಳನ್ನು ತರುತ್ತದೆ.
ಫೋಟೋ ಹಿನ್ನೆಲೆ ಹೇಗಿರಬೇಕು?
ನೀವು ಮನೆ ಅಥವಾ ಕಚೇರಿಯಲ್ಲಿ ಅಳವಡಿಸುವ ಓಡುವ ಕುದುರೆ ಫೋಟೋ ಹಿಂದೆ ಸಮುದ್ರದ ಅಲೆ ಅಥವಾ ಸಮುದ್ರದ ಬ್ಯಾಗ್ರೌಂಡ್ ಇರಬಾರದು. ವಾಸ್ತು ಪ್ರಕಾರ, ಬೆಂಕಿ (ಕುದರೆಯ ಶಕ್ತಿ) ನೀರು ಒಟ್ಟಿಗೆ ಸೇರಿದರೆ ನಕಾರಾತ್ಮಕ ಪರಿಣಾಮ ಬೀರಬಹುದು. ಸರಳವಾದ ಎನ್ನಲಾಗಿದೆ. ಕುದುರೆ ಪಟದಲ್ಲಿ ಸೂರ್ಯೋದಯ ಅಥವಾ ಮರುಭೂಮಿಯ ಹಿನ್ನೆಲೆ ಇದ್ದರೆ ಒಳಿತು ಎನ್ನಲಾಗಿದೆ.
ಕುದುರೆಗಳು ಸಂತೋಷವಾಗಿರುವ ಫೋಟೋವನ್ನೇ ನೀವು ಕೊಂಡುಕೊಂಡು ನಿಮ್ಮ ಮನೆಯ ಗೋಡೆ ಮೇಲೆ ಅಳವಡಿಸಬೇಕು. ಕೋಪ ಅಥವಾ ಆಕ್ರಮಣ ಶೈಲಿಯಲ್ಲಿ ಇರಕೂಡದು.ಈ ಚಿತ್ರವನ್ನು ಎಂದಿಗೂ ಮಲಗುವ ಕೋಣೆ ಅಥವಾ ಪೂಜಾ ರ್ಯಾಕ್ನಲ್ಲಿ ಇಡಬಾರದು. ಇದನ್ನು ಲಿವಿಂಗ್ ರೂಮ್ ಅಥವಾ ಕಚೇರಿಯ ಮುಖ್ಯ ಕೋಣೆಯಲ್ಲಿ ಮಾತ್ರ ಹಾಕಬೇಕು ಎನ್ನಲಾಗಿದೆ.
ಆನೆಯ ವರ್ಣಚಿತ್ರ ಏನು ಹೇಳುತ್ತೆ?
ಸಾಂಪ್ರದಾಯಿಕ ಮತ್ತು ವಾಸ್ತು ಪ್ರಕಾರ, ಆನೆಯು ಶಕ್ತಿ, ಸ್ಥಿರತೆ, ಬುದ್ಧಿವಂತಿಕೆ ಹಾಗೂ ವೈಭವದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಆನೆ ತನ್ನ ಸೊಂಡಿಲನ್ನು ಮೇಲಕ್ಕೆತ್ತಿ ಶುಭ ಹಾರೈಸುತ್ತಿರುವುದನ್ನು ಶುಭ ಸಂಕೇತ ಎಂದು ಕರೆಯಲಾಗುತ್ತದೆ. ಇದು ಮನೆಯಲ್ಲಿ ಸುಖ-ಶಾಂತಿಯನ್ನು ತರುತ್ತದೆ.
ಯಾವ ಪಟ ಸೂಕ್ತ?
ಎರಡು ಚಿತ್ರಗಳು ನಿಮ್ಮ ಬದುಕಿಗೆ ಬೇಕಾಗಬಹುದು. ಹಣಕಾಸಿನ ಸಮಸ್ಯೆಗೆ ಓಡುವ ಏಳು ಕುದುರೆ ಫೋಟೋ ಆದರೆ, ಇನ್ನೂ ಸುಖ, ನೆಮ್ಮದಿಗಾಗಿ ಸೊಂಡಿಲೆತ್ತಿರುವ ಆನೆ ಫೋಟೋ ಬೇಕಾಗಬುಹುದು. ಹೀಗಾಗಿ ನಿಮ್ಮ ಅವಶ್ಯಕತೆಗೆ ತಕ್ಕಂತೆ ಫೋಟೋಗಳನ್ನು ಬಳಸಿಕೊಳ್ಳಿ, (ಏಜೆನ್ಸೀಸ್).