Vastu tips for keys 
ಧಾರ್ಮಿಕ

ಮನೆಯಲ್ಲಿ ಕೀ ಎಲ್ಲೆಂದರಲ್ಲಿ ಇಡುತ್ತೀರಾ?; ನಕರಾತ್ಮಕ ಶಕ್ತಿಗೆ ಕಾರಣವಾಗ್ಬೋದು ಎಚ್ಚರ..Vastu tips for keys

ಮಮತಾ

Vastu tips for keys:

ವಾಸ್ತು ಶಾಸ್ತ್ರದ ಪ್ರಕಾರ ಕೀಲಿಗಳು ಭದ್ರತೆಯ ಸಂಕೇತ. ಹೀಗಾಗಿ ಇದನ್ನು ಅಸ್ತವ್ಯಸ್ತಗೊಂಡ ಸ್ಥಳಗಳಲ್ಲಿ ಇಡದಂತೆ ಸೂಚನೆ ನೀಡಲಾಗುತ್ತದೆ. ಕೀಲಿಯನ್ನು ಪ್ರವೇಶ ದ್ವಾರದ ಬಳಿ ಇಡುವುದು ಶನಿ ಮತ್ತು ಬುಧದಂತಹ ಸಂಘರ್ಷದ ಗ್ರಹಗಳ ಶಕ್ತಿಯನ್ನು ಬೆರೆಸಿ ಮನೆಯಲ್ಲಿ ಮಾನಸಿಕ, ಆರ್ಥಿಕ ಹಾಗೂ ಕುಟುಂಬದ ಮಧ್ಯೆ ಭಿನ್ನಾಭಿಪ್ರಾಯ ಉಂಟು ಮಾಡುತ್ತದೆ.

ಮನೆಯಲ್ಲಿ ಬೀಗದ ಕೈಗಳನ್ನು ಯಾವ ಜಾಗದಲ್ಲಿ ಇಡಬೇಕು. ಎಲ್ಲಿಟ್ಟರೆ ನಕರಾತ್ಮಕ ಶಕ್ತಿ ಕಾಡುತ್ತೆ ಎಂದು ವಾಸ್ತು ಶಾಸ್ತ್ರದ ಮಾಹಿತಿ ತಿಳಿಸುತ್ತದೆ. ಈ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ.

ವಾಸ್ತು ಶಾಸ್ತ್ರದ ಪ್ರಕಾರ ಎಲ್ಲಿ ಕೀ ಇಡಬೇಕು?

ಪೂಜಾ ಕೋಠಡಿಯಲ್ಲಿಡಬೇಡಿ
  • ಪೂಜಾ ಕೋಠಡಿಯು ಅತ್ಯಂತ ಪವಿತ್ರವಾದ ಸ್ಥಳ. ಇಲ್ಲಿ ಕೀಲಿಗಳನ್ನು ಇಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು.

ಅಡುಗೆಮನೆಯಲ್ಲಿಟ್ಟರೆ ಅಗ್ನಿ ತತ್ವದ ಮೇಲೆ ಪ್ರಭಾವ ಸಾಧ್ಯತೆ

  • ಅಡುಗೆ ಮನಯಲ್ಲಿ ಬೀಗದ ಕೀಲಿ ಇಟ್ಟರೆ ಇದರಿಂದ ಅಗ್ನಿ ತತ್ವದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಅಲ್ಲದೆ ಇದು ಕುಟುಂಬದ ಆರೋಗ್ಯ ಮತ್ತು ಆಹಾರದ ಶುದ್ಧತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಕೀಲಿಗಳನ್ನು ಯಾವ ಸ್ಥಳದಲ್ಲಿ ಇಟ್ಟರೆ ಶುಭ

ಪಶ್ಚಿಮ ದಿಕ್ಕು ಉತ್ತಮ
  • ಬೀಗದ ಕೀಲಿಯನ್ನು ಪಶ್ಚಿಮ ದಿಕ್ಕಿನಲ್ಲಿಡಲು ಸರಿಯಾದ ಸ್ಥಳ. ಇದು ಮಂಗಳಕರ ಸೂಚನೆಯನ್ನು ನೀಡುತ್ತದೆ. ಪಶ್ಚಿಮ ದಿಕ್ಕಿನಲ್ಲಿರುವ ಒಂದು ಸುಸಜ್ಜಿತವಾದ 'ಕೀ-ಸ್ಟ್ಯಾಂಡ್' ಇಟ್ಟು ಅದರಲ್ಲಿ ಕೀಲಿ ಇಡುವುದರಿಂದ ಮನೆಯಲ್ಲಿ ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿ ನೆಲೆಸುತ್ತದೆ.

ಕೀಲಿಗಳ ನಿರ್ವಹಣೆ ಹೀಗಿರಲಿ

ಬಳಕೆಯಲ್ಲಿಲ್ಲದ ಅಥವಾ ತುಕ್ಕು ಹಿಡಿದ ಬೀಗದ ಕೀಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ವಾಸ್ತು ಪ್ರಕಾರ ಸರಿಯಾದ ಕ್ರಮವಲ್ಲ. ತುಕ್ಕು ಹಿಡಿದ ಕೀಲಿಗಳು ಶನಿ ದೋಷಕ್ಕೆ ಕಾರಣವಾಗಬಹುದು. ಇದು ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಅಶಾಂತಿಯನ್ನು ತರಬಹುದು. ಇಂತಹ ಕೀಲಿಗಳನ್ನು ಸ್ವಚ್ಛಗೊಳಿಸಿ ಬಳಸುವ ಬದಲು ವಿಲೇವಾರಿ ಮಾಡುವುದು ಉತ್ತಮ.
ಅಗತ್ಯವಿಲ್ಲದ ಕೀ ಎತ್ತಿಡಬೇಡಿ
ಮುಂದಿನ ದಿನಗಳಲ್ಲಿ ಈ ಕೀ ಬಳಕೆಗೆ ಬರಬಹುದು ಎಂದು ಯೋಜಿಸಿ ಕೀಗಳನ್ನು ಎತ್ತಿಡಬೇಡಿ. ಇವು ಅಸ್ಥಿರ ಶಕ್ತಿಯನ್ನು ಉತ್ಪಾದಿಸುತ್ತವೆ ಮತ್ತು ಪ್ರಗತಿಗೆ ಅಡ್ಡಿಯಾಗಬಹುದು.ಮನೆಯಲ್ಲಿ ಕೀಲಿಗಳನ್ನು ಎಲ್ಲಂದರಲ್ಲಿ ಎಸೆಯುವ ಅಭ್ಯಾಸ ಮಾಡಿಕೊಳ್ಳಬೇಡಿ. ಸರಿಯಾದ ಕೀ-ಸ್ಟ್ಯಾಂಡ್‌ ಬಳಸಿ ಮತ್ತು ಅನಗತ್ಯವಾದ ಹಳೆಯ ಕೀಲಿಗಳನ್ನು ಮನೆಯಿಂದ ಹೊರಹಾಕುವುದು ಮನೆಯ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ನಿಗದಿತ ಸ್ಥಳದಲ್ಲಿ ಕೀ ಇಡೋದು ಮುಖ್ಯ ಯಾಕೆ?

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಕೀಲಿ ವಿಶಿಷ್ಟ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗುತ್ತದೆ. ಕೀಲಿಗಳು ಭದ್ರತೆ, ಹೊಣೆಗಾರಿಕೆ ಮತ್ತು ಹೊಸ ಸಾಧ್ಯತೆಗಳನ್ನು ಪ್ರತಿನಿಧಿಸುತ್ತವೆ. ಕೀಲಿಯು ಬಾಗಿಲನ್ನು ಅನ್ಲಾಕ್ ಮಾಡಿದಂತೆ, ಕೀಲಿಗಳನ್ನು ಸರಿಯಾದ ಸ್ಥಳದಲ್ಲಿ ಇಡುವುದರಿಂದ ಪ್ರಗತಿ ಮತ್ತು ಹೊಸ ಅವಕಾಶಗಳಿಗೆ ದಾರಿ ತೆರೆಯುತ್ತದೆ ಎಂದು ಭಾವಿಸಲಾಗಿದೆ. ಆದ್ದರಿಂದ, ಅವುಗಳನ್ನು ಗೊತ್ತುಪಡಿಸಿದ ಪ್ರದೇಶದಲ್ಲಿ ಗೌರವಯುತವಾಗಿ ಸಂಗ್ರಹಿಸುವುದು ಸೂಕ್ತ, (ಏಜೆನ್ಸೀಸ್).