Dronagiri Village Hanuman Ban
- ಹನುಮಾನ್ನನ್ನು ಪೂಜಿಸಿದ ಗ್ರಾಮ ಉತ್ತರಾಖಂಡದಲ್ಲಿದೆ
- ಸಂಜೀವಿನಿ ಪರ್ವತ ಹೊತ್ತು ತಂದಿರುವುದೇ ಇಲ್ಲಿನ ಗ್ರಾಮಸ್ಥರಿಗಿರುವ ಸಿಟ್ಟು
- ದ್ರೋಣಗಿರಿಯಲ್ಲಿ ಹನುಮನ ಪೂಜಿಸುವುದು, ಆರಾಧಿಸುವುದು ನಿಷಿದ್ಧ
Hanuman Ban: ಅಂಜನಾದೇವಿ ಮತ್ತು ಕೇಸರಿಯ ಮಗನಾಗಿ ಜನಿಸುವ ಹನುಮಂತ. ವಾಯುವದೇವನ ಅನುಗ್ರಹದಿಂದ ಹುಟ್ಟಿದವ. ಹೀಗಾಗಿ ವಾಯುಪುತ್ರ ಎಂತಲೂ ಕರೆಯುತ್ತಾರೆ. ಹನುಮನನ್ನು ನೆಚ್ಚಿಕೊಳ್ಳದೆ ಇರುವ ಭಕ್ತರಿಲ್ಲ. ಮಾರುತಿ ಎಂದರೆ, ಶಕ್ತಿ, ಧೈರ್ಯ ಎಂತಲೇ ಅರ್ಥ. ಬಾಲ್ಯದಲ್ಲಿ ಹಣ್ಣೆಂದು ತಿಳಿದು ಸೂರ್ಯನನ್ನು ಹಿಡಿಯಲು ಪಟ್ಟು ಬಿಡದೆ ಹೋಗಿದ್ದ. ಇಂತಹ ಶಕ್ತಿಶಾಲಿ ಬ್ರಹ್ಮಚಾರಿಯಾದ ಹನುಮನನ್ನು( Hanuman Ban) ಪೂಜಿಸದ ಊರು, ಹೆಸರನ್ನು ಹೇಳಲು ಬಿಡದ ಜಾಗ ಇದೆ ಎಂದರೆ ನಂಬೋಕೆ ಸಾಧ್ಯವೇ.
ಹೌದು, ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಸಮುದ್ರ ಮಟ್ಟದಿಂದ 14 ಸಾವಿರ ಅಡಿ ಎತ್ತರದಲ್ಲಿರುವ, ದ್ರೋಣಗಿರಿ ಗ್ರಾಮದಲ್ಲಿ ಹನುಮಂತನ ಹೆಸರನ್ನು ಉಚ್ಛಾರ ಮಾಡೋದಾಗಲಿ. ಆತನ ಆರಾಧನೆ ಮಾಡೋದಾಗಲಿ ನಿಷಿದ್ಧ. ಇದಕ್ಕೆ ಕಾರಣ ಏನೂ ಎಂದು ಹುಡುಕ ಹೊರಟಾಗ ಸಿಕ್ಕಿದ್ದು, ಸುಮಾರು 2000 ವರ್ಷಗಳ ಹಿಂದಿನ ರಾಮಾಯಣ ಕಾಲದ ಒಂದು ರೋಚಕ ಪುರಾಣ ಕತೆ. ಹಾಗಾದ್ರೆ ಈ ಗ್ರಾಮದ ಜನ ಹನುಮನನ್ನು ಪೂಜಿಸದೆ ಇರಲು ಕಾರಣ ಏನು, ಪೌರಾಣಿಕ ಹಿನ್ನೆಲೆ ಏನು ಎಂಬುದು ಈ ಲೇಖನದಲ್ಲಿ ವಿವರಿಸಲಾಗಿದೆ.
ಹನುಮನ ಪೂಜಿಸದಿರಲು ಕಾರಣ ಏನು?
ಅಂದು ಲಂಕಾ ಯುದ್ಧ ಭೂಮಿಯಾಗಿ ಮಾರ್ಪಟ್ಟಿತ್ತು. ರಾಮ ಮತ್ತು ರಾವಣನನ ನಡುವೆ ಭೀಕರ ಹೋರಾಟ ನಡೆಯುತ್ತಿತ್ತು. ಈ ಮಧ್ಯೆ ರಾಮನ ತಮ್ಮ ಲಕ್ಷ್ಮಣ ಮೇಘನಾದನ ಅಸ್ತ್ರದಿಂದ ಲಕ್ಷ್ಮಣ ಮೂರ್ಛೆ ಹೋಗುತ್ತಾನೆ. ಯುದ್ಧದ ಮಧ್ಯೆ ನಡೆದ ಇಂತಹ ಅಘಾತಕರ ಸಂಗತಿಯಿಂದಾಗಿ ನೊಂದ ರಾಮನು, ಮುಂದೇನೂ ಮಾಡುವುದು ಎಂದು ತೋಷದೆ ಅಚಕ್ಕಾಗಿ ಕುಳಿತು ಬಿಡುತ್ತಾನೆ.
ಆಗ ಋಷಿಯೊಬ್ಬರ ಸಲಹೆಯಂತೆ ಲಕ್ಷ್ಮಣನ ಪ್ರಾಣ ಉಳಿಸಲು ಸಂಜೀವಿನಿ ಮೂಲಿಕೆಯ ಅಗತ್ಯವಿತ್ತು. ಹನುಮಂತನು ಸಂಜೀವಿನಿ ಹುಡುಕುತ್ತಾ ದ್ರೋಣಗಿರಿಗೆ ಬಂದನು. ಆದರೆ, ಹನುಮನಿಗೆ ಮಾತ್ರ ಸಂಜೀವಿನಿ ಗಿಡ ಮೂಲಿಕೆ ಯಾವುದು ಎಂದು ಗುರುತಿಸಲು ಸಾಧ್ಯವಾಗಲೇ ಇಲ್ಲ. ಅವನ ಪರದಾಟ ಕಂಡ ಅಜ್ಜಿಯೊಬ್ಬರು ಕಂಡು ಹನುಮನಿಗೆ ಬೆಟ್ಟವನ್ನು ತೋರಿಸುತ್ತಾರೆ.
ಅಲ್ಲಿ ಮೂಲಿಕೆಗಾಗಿ ಹುಡುಕಾಡುತ್ತಾನೆ ಯಾವುದು ಎಂದು ತಿಳಿಯೋದಿಲ್ಲ, ತಡವಾದರೆ ಅಪಾಯ ಹೆಚ್ಚು ಎಂದು ಹನುಮಂತನು ಇಡೀ ಪರ್ವತದ ಒಂದು ಭಾಗವನ್ನೇ ಕಿತ್ತುಕೊಂಡು ಲಂಕೆಗೆ ಹಾರಿದನು. ಲಕ್ಷ್ಮಣನಿಗೆ ಸಂಜೀವಿನಿ ಕೊಟ್ಟು ಬದುಕಿಸಿಕೊಂಡರು. ಅತ್ತ ಯುದ್ಧ ಕೊನೆಕಂಡ ಸಂತೋಷ ಮತ್ತು ತಮ್ಮ ಬದುಕಿದ ಸಂಭ್ರಮ. ಆದರೆ ದ್ರೋಣಗಿರಿಯಲ್ಲಿ ವಿಷಾದದ ಅಲೆ ಎದ್ದಿತ್ತು.
ಸಂಜೀವಿನಿ ವಿಶೇಷತೆ ಏನು?
ಏಕೆಂದರೆ, ಈ ಬೆಟ್ಟವನ್ನು ಅಂದು ಜನರು ದೇವ ಪರ್ವತ ಎಂದು ಆರಾಧಿಸುತ್ತಿದ್ದರು . ಪೂಜೆ ಮಾಡುತ್ತಿದ್ದರು. ಪುರಾಣಪ್ರಸಿದ್ಧ ದೈವಿಕ ಗಿಡಮೂಲಿಕೆಯಾದ ಸಂಜೀವಿನಿ, ಇದು ಒಣಗಿದರೂ ನೀರು ಬಿದ್ದರೆ ಮತ್ತೆ ಹಸಿರಾಗುವ 'ಪುನರುಜ್ಜೀವನ' ಶಕ್ತಿ ಹೊಂದಿದೆ. ಇದು ಹಿಮಾಲಯ ಮತ್ತು ಅರಾವಳಿ ಬೆಟ್ಟಗಳಲ್ಲಿ ಕಂಡುಬರುತ್ತದೆ.
ಆರಾಧ್ಯ ದೈವಕ್ಕೆ ಹಾನಿ
ಹನುಮಂತನು ಇಲ್ಲಿನ ಜನರಿಗೆ ತಿಳಿಸದೆ ತಮ್ಮ ಆರಾಧ್ಯ ದೈವವಾದ ಪರ್ವತದ ಬಲ ಭಾಗವನ್ನು ಕಿತ್ತುಕೊಂಡು ಹೋದದ್ದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಯಿತು. ತಮ್ಮ ದೈವಕ್ಕೆ ಹಾನಿ ಮಾಡಿದ ಕಾರಣಕ್ಕಾಗಿ ಅವರು ಅಂದಿನಿಂದ ಹನುಮಂತನ ಮೇಲೆ ಕೋಪಗೊಂಡಿದ್ದಾರೆ. ಅವರ ಹೆಸರು ಎತ್ತುವುದಾಗಲಿ ಆರಾಧನೆಯೂ ನಿಷಿದ್ಧ
ಪರ್ವತ ತೋರಿಸಿದ ಅಜ್ಜಿಗೂ ಶಿಕ್ಷೆ
ಹನುಮಂತನಿಗೆ ಮಾತ್ರವಲ್ಲ ಸಂಜೀವಿನಿ ಪರ್ವತ ಎಲ್ಲಿದೆ ಎಂದು ತೋರಿಸಿದ್ದ ಮುದುಕಿಗೂ ಶಿಕ್ಷೆಯನ್ನು ವಿಧಿಸಿದ್ದರು. ವೃದ್ಧೆ ತೋರಿಸಿದ್ದರಿಂದಲೇ ಪರ್ವತವನ್ನು ಹೊತ್ತೊಯ್ದ ಎಂದು ಆಕೆಯನ್ನು ಸಮಾಜದಿಂದ ಬಹಿಷ್ಕರಿಸಿದರು. ಆ ಗ್ರಾಮದ ಮಹಿಳೆಯರು ಆ ವೃದ್ಧೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಪರ್ವತ ದೇವತೆಯ ಪೂಜೆಯ ಸಮಯದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಾರೆ.
ಇಂದಿಗೂ ಇರುವ ಸಂಪ್ರದಾಯವೇನು?
ದ್ರೋಣಗಿರಿ ಗ್ರಾಮದಲ್ಲಿ ಇಂದಿಗೂ ಸಹ ಯಾರು ಹನುಮಂತನಿಗಾಗಿ ಯಾವುದೇ ದೇವಸ್ಥಾನ ನಿರ್ಮಿಸಿಲ್ಲ. ಹನುಮಂತನ ಸಂಕೇತವಾದ ಕೆಂಪು ಧ್ವಜಗಳನ್ನು ಹಾರಿಸುವುದನ್ನು ಇಲ್ಲಿ ನಿಷೇಧಿಸಲಾಗಿದೆ. ವಿಶೇಷ ಪೂಜೆಯ ದಿನಗಳಲ್ಲಿ ಪುರುಷರು ಮಾತ್ರ ಪರ್ವತ ದೇವತೆಯನ್ನು ಆರಾಧಿಸುತ್ತಾರೆ ಮತ್ತು ಮಹಿಳೆಯರು ಅಂದು ಅಡುಗೆ ಮಾಡುವುದಿಲ್ಲ ಅಥವಾ ಪೂಜೆಯಲ್ಲಿ ಪಾಲ್ಗೊಳ್ಳುವುದಿಲ್ಲ, (ಏಜೆನ್ಸೀಸ್).