ಸಾಂದರ್ಭಿಕ ಚಿತ್ರ 
ಧಾರ್ಮಿಕ

2026ರ ಮೊದಲ ಸೂರ್ಯಗ್ರಹಣ: ಫೆಬ್ರವರಿ 17ರಂದು ಆಕಾಶದಲ್ಲಿ ಸಂಭವಿಸಲಿದೆ ಅಚ್ಚರಿ, ಮಿಸ್ ಮಾಡ್ಬೇಡಿ! Solar eclipse

ಪ್ರಮುಖ ಮುಖ್ಯಾಂಶಗಳು

  • 2026 ರ ಮೊದಲ ಸೂರ್ಯಗ್ರಹಣ ಫೆಬ್ರವರಿ 17 ರಂದು ಮಂಗಳವಾರ ಸಂಭವಿಸಲಿದೆ
  • ಗ್ರಹಣವು ಕುಂಭ ರಾಶಿಯಲ್ಲಿ ನೆಲೆಸುತ್ತದೆ. ಈ ಸಮಯದಲ್ಲಿ ಸೂರ್ಯನು ಕುಂಭ ರಾಶಿಯಲ್ಲಿ ನೆಲೆಗೊಳ್ಳುತ್ತಾನೆ
  • ಈ ಗ್ರಹಣದಿಂದ ಭಯಪಡಬೇಕಾದುದ್ದು ಇದೆಯೇ? ಯಾವುದೇ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆಯೇ?
Solar eclipse: 2026 ರ ಮೊದಲ ಸೂರ್ಯಗ್ರಹಣ ಫೆಬ್ರವರಿ 17 ರಂದು ಮಂಗಳವಾರ ಸಂಭವಿಸಲಿದೆ. ಜ್ಯೋತಿಷ್ಯದ ಪ್ರಕಾರ, ಗ್ರಹಣವು ಕುಂಭ ರಾಶಿಯಲ್ಲಿ ನೆಲೆಸುತ್ತದೆ. ಈ ಸಮಯದಲ್ಲಿ ಸೂರ್ಯನು ಕುಂಭ ರಾಶಿಯಲ್ಲಿ ನೆಲೆಗೊಳ್ಳುತ್ತಾನೆ. ಆದರಿಂದ ಈ ವರ್ಷದ ಮೊದಲ ಸೂರ್ಯ ಗ್ರಹಣವು ಮೂರು ದೃಷ್ಟಿಕೋನಗಳಾದ ಜ್ಯೋತಿಷ್ಯ, ವೈಜ್ಞಾನಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮಹತ್ವದ್ದಾಗಿದೆ ಎಂದು ತಿಳಿಸಲಾಗಿದೆ.

ಈ ಗ್ರಹಣವು ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆಯೇ?

ಈ ಗ್ರಹಣದಿಂದ ಭಯಪಡಬೇಕಾದುದ್ದು ಇದೆಯೇ? ಯಾವುದೇ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆಯೇ ಎಂಬ ಅನುಮಾನಗಳು ಬರುವುದು ಸಹಜ. ಹಾಗಾಗಿ ಈ ಗ್ರಹಣದ ಬಗ್ಗೆ ಜ್ಯೋತಿಷ್ಯ ಮತ್ತು ವೈಜ್ಞಾನಿಕ ವಿವರಣೆಗಳ ಆಧಾರದ ಮೇಲೆ ವಿಷಯಗಳನ್ನು ಪರಿಶೀಲಿಸೋಣ.

ಸೂರ್ಯಗ್ರಹಣ ಸಮಯಗಳು

ಭಾರತೀಯ ಕಾಲಮಾನದ ಪ್ರಕಾರ, ಗ್ರಹಣವು ಮಧ್ಯಾಹ್ನ 3:26ಕ್ಕೆ ಪ್ರಾರಂಭವಾಗಿ ಸುಮಾರು ಸಂಜೆ 7:57 ರವರೆಗೆ ಇರುತ್ತದೆ. ಇದರ ಒಟ್ಟು ಅವಧಿ ಸುಮಾರು 4 ಗಂಟೆ 30 ನಿಮಿಷಗಳಾಗಿರುತ್ತದೆ. ಆದಾಗ್ಯೂ, ಇದರ ಗೋಚರತೆಯು ವಿವಿಧ ದೇಶಗಳಲ್ಲಿ ಬದಲಾಗಬಹುದು ಎಂದು ಜ್ಯೋತಿಷ್ಯ ತಿಳಿಸಿದೆ.

ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುತ್ತದೆಯೇ?

ಈ ಸೂರ್ಯ ಗ್ರಹಣವು ಭಾರತದಿಂದ ಗೋಚರಿಸುವುದಿಲ್ಲ. ಬದಲಾಗಿ ಅಂಟಾರ್ಕ್ಟಿಕಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗೋಚರಿಸುತ್ತದೆ. ಇದು ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಕೆಲವು ಪ್ರದೇಶಗಳಲ್ಲಿ ಕಂಡುಬರುವುದರಿಂದ ಭಾರತದ ಮೇಲೆ ಯಾವುದೇ ಪರಿಣಾಮಗಳು ಬೀಳುವುದಿಲ್ಲ ಎಂದು ತಿಳಿಸಲಾಗಿದೆ.

ಸೂತಕ ಅವಧಿಯ ನಿಯಮಗಳೇನು?

ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣ ಯಾವ ಪ್ರದೇಶದಲ್ಲಿ ಗೋಚರಿಸುತ್ತದೆಯೋ, ಅಲ್ಲಿ ಮಾತ್ರ ಸೂತಕವನ್ನು ಆಚರಿಸಲಾಗುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸದ ಕಾರಣ ಈ ದೇಶಕ್ಕೆ ಸೂತಕ ಆವರಿಸಿಕೊಳ್ಳುವುದಿಲ್ಲ. ಹಾಗಾಗಿ ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಬಹುದು ಜೊತೆಗೆ ಆಚರಣೆಗಳನ್ನು ಕೂಡಾ ಮಾಡಬಹುದು.

ರಾಶಿಚಕ್ರ ಚಿಹ್ನೆಗಳ ಪ್ರಕಾರ ಫಲಿತಾಂಶಗಳು

ಜ್ಯೋತಿಷ್ಯದ ಪ್ರಕಾರ, ಈ ಗ್ರಹಣವು ಕುಂಭ ಮತ್ತು ಶತಭಿಷ ನಕ್ಷತ್ರದಲ್ಲಿ ಸಂಭವಿಸುವುದರಿಂದ ಈ ರಾಶಿಯವರ ಮೇಲೆ ಪರಿಣಾಮ ಬೀರಬಹುದು. ಆದಾಗ್ಯೂ, ಕುಂಭ ರಾಶಿಯವರಿಗೆ ಆತ್ಮಾವಲೋಕನ ಮತ್ತು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಸಮಯ ಇದಾಗಿದ್ದು, ಕೆಲವರ ಜೀವನವನ್ನು ಬದಲಾಯಿಸುವುದರ ಜೊತೆಗೆ ಒಳ್ಳೆಯ ಆರಂಭವು ಉಂಟಾಗಬಹುದು (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.