Shankha pushpa plant benefits
- ಶಂಖ ಪುಷ್ಪ ಹೂ ಆರೋಗ್ಯಕ್ಕೆ ಮಾತ್ರವಲ್ಲ ಧನಾತ್ಮಕವಾಗಿಯೂ ಪ್ರಯೋಜನಕಾರಿ
- ವಿಷ್ಣು ಮತ್ತು ಲಕ್ಷ್ಮಿ ಮುಂದೆ ಶಂಖ ಪುಷ್ಪ ಹೂವನ್ನಿಟ್ಟು ಪೂಜೆ ಮಾಡುವುದರಿಂದ ಧನ ಹೆಚ್ಚಾಗುವ ನಂಬಿಕೆ
- ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಶಂಖ ಪುಷ್ಪ ಹೂವನ್ನು ಬೆಳೆಯುವುದು ಒಳ್ಳೆಯದು
Shankha pushpam plant benefits: ದೇವರ ಪೂಜೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಮಲ್ಲಿಗೆ, ಕಾಕಡ, ಕನಕಾಂಬರ, ಗುಲಾಬಿ ಹೀಗೆ ಕೆಲವು ಸೀಮಿತ ಹೂಗಳನ್ನು ಮಾತ್ರ ಇಡುತ್ತೇವೆ. ಆದರೆ, ವಿಶೇಷ ಏನೆಂದರೆ, ಆರೋಗ್ಯದ ವಿಚಾರಕ್ಕೆ ಮಾತ್ರ ಬಳಕೆ ಮಾಡಿಕೊಳ್ಳುವ ಶಂಖ ಪುಷ್ಪ ಹೂಗಳು ಹಿಂದೂ ಶಾಸ್ತ್ರದ ಪ್ರಕಾರ ದೈವಿಕ ಶಕ್ತಿ ಮತ್ತು ಆರೋಗ್ಯಕಾರಿ ಪ್ರಯೋಜನಗಳನ್ನು ನೀಡುತ್ತದೆ ಎನ್ನಲಾಗಿದೆ.
ಶಂಖ ಪುಷ್ಪ ಹೂ ಆರೋಗ್ಯಕ್ಕೆ ಟಾನಿಕ್
ಶಂಖ ಪುಷ್ಪ ಹೂವಿನಲ್ಲಿ ಔಷಧೀಯ ಗುಣಗಳಿವೆ ಇದನ್ನು ಬಿಸಿ ನೀರಿಗೆ ಹಾಕಿ, ಅದಕ್ಕೊಂದಿಷ್ಟು ಜೇನು ತುಪ್ಪ ಬೆರಸಿ ಕುಡಿಯುವುದರಿಂದ ಆರೊಗ್ಯಕ್ಕೆ ಒಳ್ಳೆಯದು ಎನ್ನಲಾಗುತ್ತದೆ. ಇದು ಜೀರ್ಣಕ್ರಿಯೆಗೆ, ಉತ್ಕರ್ಷಣ ನಿಯಂತ್ರಣಕ್ಕೆ ಮದ್ದು. ಮೆದುಳಿನ ಸಮಸ್ಯೆಗೆ ಟಾನಿಕ್. ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ಕೇಳಿಯೇ ಇದ್ದೇವೆ. ಆದರೆ ಇದರಿಂದ ಧಾರ್ಮಿಕವಾಗಿ ಎಷ್ಟೊಂದು ಲಾಭವಿದೆ. ದೇವರ ಕೋಣೆಯಲ್ಲಿ ಇದಕ್ಕೆ ನೀಡಬೇಕಾದ ಸ್ಥಾನ ಮತ್ತು ಬಳಸಿಕೊಳ್ಳುವ ವಿಧಾನವನ್ನು ಇಂದು ತಿಳಿದುಕೊಳ್ಳೋಣ.
ಲಕ್ಷ್ಮೀ, ಶನೇಶ್ವರನ ಅನುಗ್ರಹ ನಿಶ್ಚಿತ
ಹಿಂದೂ ಧರ್ಮದ ಪ್ರಕಾರ ಶಂಖ ಪುಷ್ಪವನ್ನು ಲಕ್ಷ್ಮಿ ಮತ್ತು ವಿಷ್ಣುವಿನ ಆರಾಧನೆಗೆ ಬಳಕೆ ಮಾಡಲಾಗುತ್ತದೆ ಎನ್ನಲಾಗುತ್ತದೆ. ಅಷ್ಟೇ ಅಲ್ಲದೆ ಶನೀಶ್ವರನ ಅನುಗ್ರಹ ಇರುತ್ತದೆ ಎನ್ನಲಾಗುತ್ತದೆ. ನೀವೇನಾದರೂ ಶ್ರೀಮಂತರಾಹಲು ಬಯಸಿದರೆ ನಿಮ್ಮ ಮನೆಯಲ್ಲಿಯೂ ಒಂದು ಶಂಖ ಪುಷ್ಪ ಹೂವನ್ನು ನೆಡಬೇಕು.
ನಕರಾತ್ಮಕ ಶಕ್ತಿಗೆ ಮುಕ್ತಿ
ಶಂಖದ ಆಕಾರದಲ್ಲಿ ಕಾಣಿಸುವ ಈ ನೀಲಿ ಹೂವು ನೋಡಲು ಆಕರ್ಷಕ ಒಂದೇ ಒಂದು ಬೀಜ ಅತವಾ ಬಳ್ಳಿಯನ್ನು ನೆಟ್ಟು, ಅದನ್ನು ಸಾಕಿದರೆ ಸಾಕು ಹೆಮ್ಮರದಂತೆ ಬೆಳೆಯುತ್ತಾ ಹೋಗುತ್ತದೆ. ಆಗಾಗ ಪೋಷಣೆ, ಕತ್ತರಿಸುವುದು ಇದರ ಬೆಳವಣಿಗೆಗೆ ಇರುವ ಉತ್ತಮ ವಿಧಾನ, ಇದನ್ನು ಬೆಳೆಯುವುದರಿಂದ ನಿಮ್ಮ ಮನೆಯ ಮುಂದಣವು ಆಕರ್ಷಣೆಯಾಗಿ ಕಾಣುತ್ತದೆ. ಅಷ್ಟೇ ಅಲ್ಲದೇ ನಿಮಗೆ ಕಾಡುವ ನಕರಾತ್ಮಕ ಶಕ್ತಿಗಳು ದೂರಾಗುತ್ತದೆ ಎನ್ನುವುದು ಹಿಂದೂ ಧರ್ಮದ ಪ್ರಕಾರವಿರುವ ನಂಬಿಕೆ.
ಶಿವ, ಶನೇಶ್ವರನ, ವಿಷ್ಣು ದೇವರನ್ನು ಆರಾಧಿಸಿ
ಹೇಗೆ ಶಿವನಿಗೆ ತುಂಬೆ ಹೂ ನೆಚ್ಚಿನದ್ದು ಎನ್ನುತ್ತಾರೆಯೋ ಹಾಗೆಯೇ ಲಕ್ಷ್ಮಿ ಮತ್ತು ವಿಷ್ಣುವಿಗೂ ಶಂಖ ಪುಷ್ಪ ಹೂ ಎಂದರೆ ಪ್ರಾಣ. ಇದನ್ನು ದೇವರ ಕೋಣೆಯಲ್ಲಿಟ್ಟು ಪೂಜಿಸುವುದರಿಮದ ದೇವರ ಆಶೀರ್ವಾದ ಎಂದು ನಮ್ಮ ಮೇಲೆ ಇರುತ್ತದೆ ಎನ್ನುವ ನಂಬಿಕೆ ಇದೆ. ಅದರಲ್ಲೂ ಶನಿವಾರ ಮತ್ತು ಸೋಮವಾರ ಹೂಗಳನ್ನಿಟ್ಟು ಶಿವ ಮತ್ತು ಶನೇಶ್ವರನನ್ನು ಪೂಜಿಸುವುದರಿಂದ ಕಾಡುತ್ತಿರುವ ಜನ್ಮದೋಷ, ಹಣದ ಸಮಸ್ಯೆ ದೂರವಾಗುತ್ತದೆ ಎನ್ನುವ ನಂಬಿಕೆ ಇದೆ.
ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಎಂದರೆ ಹೀಗೆ ಮಾಡಿ
ಎಷ್ಟೇ ಹಣ ಸಂಪಾದನೆ ಮಾಡಿದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲ. ಸಾಲ ಹೆಚ್ಚಾಗುರತ್ತಿದೆ ಎಂದು ಕೊಡಗುತ್ತಿದ್ದರೆ, ಈ ಹೂವನ್ನು ಮಂಗಳವಾರ ಹನುಮಂತನ ಪಾದದಡಿ ಇಟ್ಟು, ವ್ಯಾಪರದ ಅಂಗಡಿಯಲ್ಲಿಟ್ಟು ಪೂಜೆ ಮಾಡಿದರೆ, ಲಕ್ಷ್ಮೀ ಕೃಪಾಕಟಾಕ್ಷ ನಮ್ಮ ಮೇಲೆ ಇರಲಿದೆ ಎನ್ನಲಾಗಿದೆ. ಈಶ್ಯಾನ ಅಥವಾ ಉತ್ತರ ದಿಕ್ಕಿನಲ್ಲಿ ನೆಟ್ಟು ಪೋಷಣೆ ಮಾಡುವುದರಿಂದ ಸಂಪತ್ತು ವೃದ್ದಿಯಾಗುತ್ತದೆ. ಶನಿ ದೋಷ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ, (ಏಜೆನ್ಸೀಸ್).