Benefits Of Meditating Inside Temple
- ದೇವಸ್ಥಾನದಲ್ಲಿ ಕುಳಿತು ಧ್ಯಾನ ಮಾಡುವುದರಿಂದ ಏನೆಲ್ಲ ಪ್ರಯೋಜನಗಳಿದೆ ಗೊತ್ತಾ?
- ಗೊಂದಲಕ್ಕೆ ಕಾರಣವಾಗುವ 'ಬೀಟಾ' ತರಂಗಗಳುನ್ನು ತೊಡೆದು ಆಲ್ಫಾ ತರಂಗ ಉದ್ಭವಕ್ಕೆ ಕಾರಣವಾಗತ್ತೆ ಈ ಧ್ಯಾನ
- ದೇವರ ರೂಪ ಅಥವಾ ಉಸಿರಾಟದ ಮೇಲೆ ಗಮನವಿಟ್ಟು ದೇವಸ್ಥಾನದಲ್ಲಿ ಧ್ಯಾನ ಮಾಡಿ
Benefits Of Meditating Inside Temple: ಸಾಮಾನ್ಯವಾಗಿ ಜನರು ದೇವಸ್ಥಾನಕ್ಕೆ ಮನಶಾಂತಿ ಹಾಗೂ ನೆಮ್ಮದಿ, ಕಷ್ಟ ಕಾರ್ಪಣ್ಯವನ್ನು ದೇವರ ಬಳಿ ಹೇಳಿಕೊಳ್ಳಲು, ಸುಖದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಹೋಗುತ್ತಾರೆ. ದೇವರಿಗೆ ದೀಪ ಹಚ್ಚಿ, ತೀರ್ಥ ಕುಡಿದು, ಸಾಮ್ರಾಣಿ, ಧೂಪದ ಘಮಲನ್ನು ಎಳೆದುಕೊಂಡು ಒಂದಷ್ಟು ಹೊತ್ತು ಅಲ್ಲಿಯೇ ಕುಳಿತು ವಾಪಸ್ ಆಗೋದು ಮಾಮೂಲು ಆದರೆ, ಅಲ್ಲಿಯೇ ಕುಳಿತು ಧ್ಯಾನ ಮಾಡೋದರಿಂದ ಎಷ್ಟು ಲಾಭ ಸಿಗುತ್ತೆ ಎನ್ನುವುದು ನಿಮಗೆ ಗೊತ್ತಿದೆಯೇ?.
ಹೌದು ಜ್ಯೋತಿಷ್ಯ ಶಾಸ್ತ್ರ ಹಾಗೂ ವಿಜ್ಞಾನದ ಪ್ರಕಾರ ದೇವಸ್ಥಾನದಲ್ಲಿ ಪದ್ಮಾಸನದಲ್ಲಿ ಕುಳಿತು, ಮಂತ್ರ ಪಠಿಸುತ್ತಾ ಧ್ಯಾನ ಮಾಡುವುದರಲ್ಲಿ ತಲ್ಲೀನರಾಗುವುದರಿಂದ ನಿಮ್ಮ ಮನಸ್ಸಿನಲ್ಲಿ ಉಂಟಾಗುವ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಬದಲಾವಣೆ ಹಾಗೂ ಏಕಾಗ್ರತೆ ಹೆಚ್ಚಾಗುವ ಬಗ್ಗೆ ಆಧ್ಯಾತ್ಮಿಕ ಗುರುಗಳು ವಿವರಿಸಿದ್ದಾರೆ. ಇದು ನಮ್ಮ ಆಲೋಚನಾ ವಿಧಾನವನ್ನು ಹೇಗೆ ಬದಲಾಯಿಸುತ್ತದೆ ಎನ್ನುವುದರ ಮಾಹಿತಿ ಇಂದು ತಿಳಿದುಕೊಳ್ಳೋಣ.
ದೇವಸ್ಥಾನದಲ್ಲಿ ಧ್ಯಾನ ಮುಖ್ಯ ಯಾಕೆ?
ಇತಿಹಾಸದಲ್ಲಿ ದೇವಾಲಯಗಳನ್ನು ಪೂಜೆಗೆ ಮಾತ್ರವಲ್ಲ ಬದಲಾಗಿ ಎಲ್ಲಿ ಹೆಚ್ಚು ಬೆಳಕಿನ ಶಕ್ತಿ ಇರುತ್ತದೆಯೋ, ಭೂಮಿಯ ಕಾಂತಿಯು ಕಂಡು ಬರುತ್ತದೆಯೋ ಅಲ್ಲಿ ಕಟ್ಟಲಾಗುತ್ತಿತ್ತು. ದೇವರು ನೆಲೆಸಿರುವ ಜಾಗದಿಂದ ಕೊಂಚ ದೂರ ಕುಳಿತು ಧ್ಯಾನ ಮಾಡುವುದರಿಂದ ಸಕರಾತ್ಮ ಶಕ್ತಿಯು ನಮ್ಮನ್ನು ಆವರಿಸಿಕೊಳ್ಳುತ್ತದೆ. ಬ್ರಹ್ಮಾಂಡದಲ್ಲಿ ಲಭ್ಯವಿರುವ ಅದೃಶ್ಯ ಮತ್ತು ಪ್ರಬಲವಾದ ಜೀವ ಶಕ್ತಿಯಾದ ಕಾಸ್ಮಿಕ್ ಶಕ್ತಿಯು ನಮ್ಮನ್ನು ಆವರಿಸಿಕೊಳ್ಳಳುತ್ತದೆ.
ಎಷ್ಟೇ ಇಕ್ಕಟ್ಟಿನಲ್ಲಿದ್ದರೂ ಶಾಂತಗೊಳಿಸುವ ಸಾಮರ್ಥ್ಯವುಂಟು
ದೇವಸ್ಥಾನದಲ್ಲಿ ಹಚ್ಚಿರುವ ಧೂಪ, ಸುಗಂಧ ಕಡ್ಡಿ ಹಾಗೂ ಆಲದ ಮರದ ಗಾಳಿ ಇವು ಕಣ್ಣಿಗೆ ಕಾಣದೆ ಆವಿಯಾದರೂ ಸಹ ಪರೋಕ್ಷವಾಗಿ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಎಷ್ಟೇ ಕಷ್ಟ ಎಂದು ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳನ್ನು ಹೊತ್ತು ದೇವಸ್ಥಾನಕ್ಕೆ ತೆರಳಿ ಧ್ಯಾನಕ್ಕೆ ಕುಳಿತರೆ ಸಾಕು ಆತಂಕವನ್ನು ಉಂಟುಮಾಡುವ 'ಬೀಟಾ' ತರಂಗಗಳು ಕಡಿಮೆಯಾಗುತ್ತವೆ. ಶಾಂತಿಯನ್ನು ನೀಡುವ 'ಆಲ್ಫಾ' ತರಂಗಗಳು ತಕ್ಷಣವೇ ಸಕ್ರಿಯಗೊಳ್ಳುತ್ತವೆ.
ಭವಿಷ್ಯಕ್ಕಾಗಿ ಧ್ಯಾನಿಸೋದು ಮುಖ್ಯ
ಭವಿಷ್ಯದಲ್ಲಿ ಏನಾಗಬೇಕು, ಏನು ಮಾಡಬೇಕು ಎನ್ನುವ ಗೊಂದಲ ಕಾಡುತ್ತಿದ್ದರೆ, ನಿತ್ಯ ದೇವಸ್ಥಾನದಲ್ಲಿ ಧ್ಯಾನ ಮಾಡೋದನ್ನು ಶುರು ಮಾಡಿ. ಇದರಿಂದ ಕಾಡುವ ನೂರಾರು ಆತಂಕವನ್ನು ದೂರ ಮಾಡಿ ಹೊಸದಾಗಿ ಯೋಚನೆ ಮಾಡುವುದನ್ನು ಕಲಿಸುತ್ತದೆ. ಇದರಿಂದ ನಕರಾತ್ಮಕ ರೀತಿಯ ಆಲೋಚನೆ, ಖಿನ್ನತೆಗಳು ಕೊಂಚ ಕೊಂಚವೇ ನಿಮ್ಮಿಂದ ದೂರಾಗಲು ಶುರುವಾಗುತ್ತದೆ.
ಗಮನಿಸಿ
ನೀವು ಧ್ಯಾನ ಮಾಡುವಾಗ ದೇವರ ರೂಪವನ್ನು ಮನಸ್ಸಿನಲ್ಲಿಯೇ ಚಿತ್ರಿಸಿಕೊಂಡು ಧ್ಯಾನಿಸಿ. ಇಲ್ಲವಾದಲ್ಲಿ ನಿಮ್ಮ ಉಸಿರಾಟದ ಮೇಲೆ ಗಮನವಿರಿಸಿ, ಧ್ಯಾನ ಹದಿನೈದರಿಂದ 20 ನಿಮಿಷ ಧ್ಯಾನ ಮಾಡುವುದರಿಂದ ನಿಮ್ಮನ್ನು ಹಲವು ವರ್ಷಗಳಿಂದ ಕಾಡುತ್ತಿರುವ ತೊಡಕು ದೂರಾಗುತ್ತದೆ, (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.