Rukminikalyana-1 
ಧಾರ್ಮಿಕ

ರುಕ್ಮಿಣಿಕಲ್ಯಾಣ-1

ಬಾಬುಪ್ರಸಾದ್​ ಮೋಡಿಸ್​
ವಿದರ್ಭದೇಶದಲ್ಲಿ ಭೀಷ್ಮಕ ಎಂಬ ರಾಜನಿದ್ದ. ಇವನು ಮಿತ್ರ ಎಂಬ ದೇವತೆಯ ಅವತಾರ. ಇವನಲ್ಲಿ ರಾಹುವಿನ ಆವೇಶ ಇತ್ತು. ಭೀಷ್ಮಕನಿಗೆ ರುಕ್ಮಿ, ರುಕ್ಮರಥ, ರುಕ್ಮಬಾಹು, ರುಕ್ಮಕೇಶ, ರುಕ್ಮಮಾಲೀ ಎಂಬ ಐದು ಜನ ಗಂಡು ಮಕ್ಕಳು. ಇವರಿಗೆ ಅನುಜಳಾಗಿ ರುಕ್ಮಿಣಿ ಅವತರಿಸಿದ್ದಾಳೆ. ಭೀಷ್ಮಕನ ಗಂಡು ಮಕ್ಕಳು ಅಯೋಗ್ಯರಾಗಿದ್ದರೂ ರುಕ್ಮಿಣಿದೇವಿ ಮಾತ್ರ ನಿರ್ದುಷ್ಟಳಾಗಿದ್ದಳು. ಭೀಷ್ಮಕನ ಮಕ್ಕಳಲ್ಲಿ ಹಿರಿಯನಾದ ರುಕ್ಮಿ ಮಹಾದುಷ್ಟ. ಇಲ್ವಲ ಎಂಬ ದೈತ್ಯನ ಅವತಾರ. ವಾತಾಪಿ ಇಲ್ವಲ ಎಂಬ ಇಬ್ಬರು ದೈತ್ಯರು. ವಾತಾಪಿ ಬ್ರಾಹ್ಮಣರ ಹೊಟ್ಟೆಯನ್ನು ಏನೋ ಒಂದು ನಿಮಿತ್ತದಿಂದ ಪ್ರವೇಶಿಸುತ್ತಿದ್ದ. ಇಲ್ವಲ ಹೊರಗಡೆ ಇದ್ದು ವಾತಾಪಿಯನ್ನು ಕರೆಯುತ್ತಿದ್ದ.
ಅವನು ಬ್ರಾಹ್ಮಣರ ಹೊಟ್ಟೆ ಹರಿದು ಅವರನ್ನು ಸಂಹರಿಸಿ ಹೊರಗೆ ಬರುತ್ತಿದ್ದ. ಒಂದು ದಿನ ಅಗಸ್ಱರ ಹತ್ತಿರ ಬಂದು ನಾಟಕ ಆರಂಭಿಸಿದರು. ಅಗಸ್ಱರು ವಾತಾಪಿಯನ್ನು ತಿನ್ನುವ ಹಾಗೆ ಏನೋ ತಿಂದರು. ಆಮೇಲೆ ಇಲ್ವಲ ವಾತಾಪಿಯನ್ನು ಹೊರಗೆ ಬಾ ಎಂದು ಕರೆದ. ಅಷ್ಟರೊಳಗೆ ಅಗಸ್ಱರು ’ವಾತಾಪಿ ಜೀಣೋ ಭವ’ ಎಂದು ಹೊಟ್ಟೆಯ ಮೇಲೆ ಕೈಯಾಡಿಸಿದರು. ಅವನು ಜೀರ್ಣವಾಗಿ ಹೋದ. ಹೊರಗೆ ಬರಲೇ ಇಲ್ಲ. ಇಲ್ವಲ ಕೇಳುತ್ತಾನೆ. ವಾತಾಪಿ ಎಲ್ಲಿ ಇದ್ದಾನೆ ಎಂದು. ಅದಕ್ಕೆ ಅಗಸ್ಱರು ‘ವಾತಾಪಿ ನನ್ನೊಳಗೆ ಇಲ್ವಲ’ ಎಂದುಉತ್ತರ ನೀಡಿದರು. ಆ ಇಲ್ವನೇ ಈಗ ರುಕ್ಮಿನಾಗಿ ಹುಟ್ಟಿದ್ದಾನೆ. ರುಕ್ಮಿಣಿಯನ್ನು ಶ್ರೀಕೃಷ್ಣನಿಗೆ ಕೊಟ್ಟು ಮದುವೆ ಮಾಡಬೇಕು ಎಂದು ಹೇಳಿದರೆ ಈ ರುಕ್ಮಿಮಾತ್ರ ಇಲ್ವಲ ಎನ್ನುತ್ತಿದ್ದ. ಶ್ರೀಕೃಷ್ಣನಿಗೆ ನಮ್ಮ ರುಕ್ಮಿಣಿಯನ್ನು ಸರ್ವಥಾ ಕೊಡಕೂಡದು ಎಂದು ಹೇಳುತ್ತಿದ್ದ.