Parijata Plant Vastu Direction 
ಧಾರ್ಮಿಕ

ಮನೆಯ ಅಂಗಳದ ಈ ದಿಕ್ಕಿನಲ್ಲಿ ಪಾರಿಜಾತ ಗಿಡ ನೆಟ್ಟರೆ ಸಿಗುವ ಧನಾತ್ಮಕ ಲಾಭಗಳಿವು!.. Parijata Vastu Direction

Parijata Plant Vastu Direction:
ವಾಸ್ತು ಮತ್ತು ಆರ್ಥಿಕ ತೊಂದರೆಗಳಿದ್ದಾಗ
ಮನೆಯ ಬಳಿ ನೆಡುವುದು ವಾಸ್ತು ತಜ್ಞರ ಪ್ರಕಾರ ಒಳ್ಳೆಯದು ಎನ್ನಲಾಗಿದೆ. ನಿಮ್ಮ ಮನೆಯ ಅಂಗಳದಲ್ಲಿ ಸರಿಯಾದ ದಿಕ್ಕಿನಲ್ಲಿ ಪಾರಿಜಾತ ಹೂವನ್ನು ನೆಟ್ಟರೆ ನಕರಾತ್ಮಕ ಶಕ್ತಿ ದೂರವಾಗಿ ಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ,
ಹಾಗಾದರೆ ಪಾರಿಜಾತ ಗಿಡವನ್ನು ಯಾವ ದಿಕ್ಕಿನಲ್ಲಿ ನೆಟ್ಟರೆ ನಿಮ್ಮ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗೆ ಮುಕ್ತಿ ನೀಡುತ್ತದೆ. ಯಾವ ನಿಯಮ ಅನುಸರಿಸಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ

ಈ ದಿಕ್ಕಿನಲ್ಲಿ ಸಸಿ ನೆಡಿ

ಪಾರಿಜಾತ ಹೂವಿನ ಗಿಡವನ್ನು ನಿಮ್ಮ ಮನೆಯ ಉತ್ತರ ಅಥವಾ ಪೂರ್ವದಿಕ್ಕಿನಲ್ಲಿ ನೆಟ್ಟು ಪೋಷಿಸಿ. ಈ ದಿಕ್ಕಿನಲ್ಲಿ ಸಸಿ ನೆಡುವುದರಿಂದ ಧನಾತ್ಮಕ ಶಕ್ತಿಯು ನಿಮ್ಮ ಮನೆಯನ್ನು ಪಸರಿಸುತ್ತದೆ ಎನ್ನಲಾಗಿದೆ. ಈಶಾನ್ಯ ಮೂಲೆಯನ್ನು ದೈವಿಕ ಮೂಲೆ ಎಂದು ಕರೆಯಲಾಗಿದ್ದು, ಅಲ್ಲಿ ಪಾರಿಜಾತ ಹೂ ಇಡುವುದರಿಂದ ಮನೆಯಲ್ಲಿ ಸಮಸ್ಯೆ, ಚಿಂತೆ, ಮಾನಸಿಕ ತೊಂದರೆ ದೂರವಾಗಿ ಶಾಂತಿ ಉಳಿಯುವಂತೆ ಮಾಡುತ್ತದೆ.
ಪಾರಿಜಾತ ಹೂವಿನ ಸುವಾಸನೆಯು ಒತ್ತಡ ನಿವಾರಕ ಗುಣವನ್ನು ಹೊಂದಿದೆ. ಆಯುರ್ವೇದ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಬಳಿ ಬೀಳುವ ಪಾರಿಜಾತ ಸುತ್ತಲಿರುವ ಜನರ ಮನಸ್ಸನ್ನು ತಿಳಿಗೊಳಿಸಿತ್ತದೆ. ಮರದಲ್ಲಿರುವ ಹೂವನ್ನು ಎಂದಿಗೂ ಕೀಳಬಾರದು. ಪಾರಿಜಾತ ನಿಮ್ಮಲ್ಲಿರುವ ಕೋಪವನ್ನು ಕಡಿಮೆ ಮಾಡುತ್ತದೆ.

ಪಾರಿಜಾತ ಬಳಕೆ ಮಾಡೋದು ಹೇಗೆ?

ದೇವರಿಗೆ ಪೂಜೆಗೆಂದು ಹೂವಿಡುವ ಮುನ್ನ ನಾವು ಮರದಿಂದ ಕಿತ್ತ ಹೂ ಇಡುತ್ತೇವೆ, ಎಂದಿಗೂ ಮುಡಿದ ಅಥವಾ ನೆಲದಲ್ಲಿ ಬಿದ್ದ ಹೂವನ್ನು ಇಡುವುದಿಲ್ಲ. ಆದರೆ, ಪಾರಿಜಾತದ ಹೂವಿನ ವಿಚಾರದಲ್ಲಿ ಲೆಕ್ಕಾಚಾರ ಬೇರೆ. ನೆಲಕ್ಕೆ ಬಿದ್ದ ಪಾರಿಜಾತ ಹೂವನ್ನು ಮಾತ್ರ ಬಳಕೆ ಮಾಡಬೇಕು. ಗಿಡದಿಂದ ಕೀಳುವಂತಿಲ್ಲ.
  • ಪಾರಿಜಾತ ಗಿಡ ಮನೆಯ ದಕ್ಷಿಣದಲ್ಲಿ ನೆಡಕೂಡದು.
  • ಇದು ನಕರಾತ್ಮಕ ಫಲಿತಾಂಶವನ್ನು ನೀಡಬಾರದು.
  • ಪಾರಿಜಾತ ಗಿಡನಕ್ಕೆ ಹೆಚ್ಚಿನ ನೀರಿನ ಅಗತ್ಯವಿಲ್ಲ. ಆದರೆ, ಇದರ ಪೋಷಣೆ ಅಗತ್ಯ