ಧಾರ್ಮಿಕ

ಸಾಲ ಬಾಧೆಯಿಂದ ತತ್ತರಿಸಿ ಹೋಗಿದ್ದೀರಾ?: ಧಾರ್ಮಿಕ ಆಚರಣೆಗೆ ಬಳಸುವ ಈ ವಸ್ತುವನ್ನು ಫ್ರಿಜ್​​ ಮೇಲೆ ಇಡಿ..Vastu Tips

  • ಸಾಲದ ಬಾಧೆಯಿಂದ ಬಳಲುತ್ತಿರುವವರಿಗೆ ರೆಫ್ರಿಜಿರೇಟರ್ ವಾಸ್ತು ಪರಿಹಾರ.

  • ಫ್ರಿಜ್ ಮೇಲೆ ಕರ್ಪೂರ ಇಡುವುದರಿಂದ ಮನೆಯಲ್ಲಿರುವ ನೆಗೆಟಿವ್ ಎನರ್ಜಿ ಹೆಚ್ಚಾಗುವ ಸಾಧ್ಯತೆ.

  • ರೆಫ್ರಿಜಿರೇಟರ್ ಅನ್ನು ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿಡಬೇಕು, ಈಶಾನ್ಯ ದಿಕ್ಕಿನಲ್ಲಿಡಬೇಕು.

ಇಎಂಐ, ಬಡ್ಡಿಗಳಿಲ್ಲದೆ ಯಾರು ಇಲ್ಲ. ಸಾಲಗಾರರಿಂದ ಹಲವರು ನಿತ್ಯ ಸಮಸ್ಯೆಗೆ ಒಳಗಾಗಿರುತ್ತಾರೆ. ನೀವು ಈ ಲಿಸ್ಟ್​​ನಲ್ಲಿದ್ದರೆ ನಿಮ್ಮ ಮನೆಯಲ್ಲಿ ಬಳಕೆ ಮಾಡುವ ರೆಫ್ರಿಜರೇಟರ್​ ಅಂದರೆ ಫ್ರಿಜ್​​ ಮೇಲೆ ಇಡುವ ವಸ್ತುಗಳ ವಿಚಾರದಲ್ಲಿ ವಾಸ್ತು ನಿಯಮ ಪಾಲನೆ ಮಾಡಿ. ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಇರುವುದಿಲ್ಲ ಎನ್ನುತ್ತಾರೆ ಜ್ಯೋತಿಷಿಗಳು.

ಮನೆಯಲ್ಲಿ ನೀವು ಉಳಿದ ಆಹಾರ ಸ್ಟೋರ್ ಮಾಡಲು, ಕಾಯಿ, ಹಣ್ಣು ಇಡಲು ಬಳಕೆ ಮಾಡುವ ಫ್ರಿಜ್​​​​​​​ನಿಂದಲೇ ನಿಮಗೆ ಆರ್ಥಿಕ ಸಮಸ್ಯೆ ಕಾಡಬಹುದು. ಹೀಗಾಗಿ ನಿಮ್ಮ ಫ್ರಿಜ್​ ಮೇಲೆ ಕೆಲವು ವಸ್ತುಗಳನ್ನು ಇಡದಂತೆ ನೋಡಿಕೊಳ್ಳಿ.

ಸಾಲದ ಬಾಧೆಗಳಿಂದ ಪರದಾಡುವವರು ಫ್ರಿಜ್ ಮೇಲೆ ಕರ್ಪೂರವನ್ನು ಇಡುವುದು ಬಹಳ ಒಳ್ಳೆಯದು. ಇದು ವಾಸ್ತು ದೋಷಗಳನ್ನು ನಿವಾರಿಸಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಮಾಡುತ್ತದೆ ಎಂದು ಹೇಳುತ್ತಾರೆ ಧಾರ್ಮಿಕ ತಜ್ಞರು.

ನೆಗಟಿವಿಟಿ ಹರಡಲು ಈ ವಸ್ತು ಕಾರಣ

ಭಾರವಾದ ವಸ್ತುಗಳನ್ನು ಎಂದಿಗೂ ಫ್ರಿಜ್​ ಮೇಲೆ ಇಡದಂತೆ ನೋಡಿಕೊಳ್ಳಿ. ಅನೇಕರು ಫ್ರಿಜ್ ಮೇಲೆ ಭಾರವಾದ ವಸ್ತುಗಳನ್ನು ಇಡುತ್ತಿರುತ್ತಾರೆ. ಆದರೆ ರೆಫ್ರಿಜಿರೇಟರ್ ಮೇಲೆ ಭಾರವಾದ ವಸ್ತುಗಳು, ಎಲೆಕ್ಟ್ರಾನಿಕ್ಸ್ ಮತ್ತು ಉಷ್ಣತೆಯನ್ನು ಹೊರಹಾಕುವ ವಸ್ತುಗಳನ್ನು ಇಡುವುದು ಅಸ್ವಸ್ಥತೆ ಹಾಗೂ ನೆಗೆಟಿವಿಟಿಗೆ ಕಾರಣವಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಇದನ್ನೂ ಓದಿ: ಪೂಜೆ, ಶುಭಕಾರ್ಯಗಳಲ್ಲಿ ಇರಲೇ ಬೇಕು ಬಾಳೆ ಎಲೆ, ಗಿಡ; ಅಷ್ಟೊಂದು ಪ್ರಾಮುಖ್ಯತೆ ಕೊಡೋದ್ಯಾಕೆ?..Banana Tree

ಫ್ರಿಜ್ ಮೇಲೆ ಕರ್ಪೂರ ಇಟ್ಟರೆ ಸಿಗುವ ಲಾಭ

ಫ್ರಿಜ್ ಮೇಲೆ ಕರ್ಪೂರ ಇಡುವುದರಿಂದ ಇದು ಮನೆಯಲ್ಲಿ ಧನಾತ್ಮಕತೆಯನ್ನು ಹೆಚ್ಚಿಸಿ, ಎಲ್ಲ ರೀತಿಯಲ್ಲೂ ಅನುಕೂಲವಾಗುವಂತೆ ಮಾಡುತ್ತದೆ. ವಾಸ್ತು ತಜ್ಞರ ಪ್ರಕಾರ ಕರ್ಪೂರವು ಸಂಪತ್ತು ಮತ್ತು ಸಮೃದ್ಧಿಯೊಂದಿಗೆ ನಂಟು ಹೊಂದಿದೆ. ಮನೆಯ ಆರ್ಥಿಕ ಸಮಸ್ಯೆಗಳನ್ನು ದೂರಮಾಡಿ, ಆರ್ಥಿಕವಾಗಿ ಹಾಗೂ ಆರೋಗ್ಯದ ದೃಷ್ಟಿಯಿಂದ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಆದರೆ, ನೆನಪಿಡಿ ಕರ್ಪೂರವನ್ನು ಹಚ್ಚಿ ಫ್ರಿಡ್ಜ್​​ ಮೇಲೆ ಇಡುವುದು ಸರಿಯಾದ ವಿಧಾನವಲ್ಲ.

ಫ್ರಿಜ್ ಮೇಲೆ ಕರ್ಪೂರ ಇಡುವುದರಿಂದ ಮನೆಯಲ್ಲಿನ ನೆಗೆಟಿವ್ ಎನರ್ಜಿ ಕಡಿಮೆಯಾಗಿ ವಾತಾವರಣ ಸುಧಾರಿಸುತ್ತದೆ. ಅಲ್ಲದೆ ಮನೆಯಲ್ಲಿ ಸಂತೋಷ, ಸಮೃದ್ಧಿ ಹಾಗೂ ಐಶ್ವರ್ಯ ನೆಲೆಸುತ್ತದೆ.

ರೆಫ್ರಿಜಿರೇಟರ್ ಅನ್ನು ಸರಿಯಾದ ದಿಕ್ಕಿನಲ್ಲಿಟ್ಟಾಗ ಮಾತ್ರ ಉತ್ತಮ ಫಲಿತಾಂಶಗಳು ಸಿಗುತ್ತವೆ. ಇದನ್ನು ಯಾವಾಗಲೂ ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿಡಬೇಕು. ಕೆಲವರು ಉತ್ತರ ದಿಕ್ಕಿನಲ್ಲಿಯೂ ಇಡುತ್ತಾರೆ. ಆದರೆ ರೆಫ್ರಿಜಿರೇಟರ್ ಅನ್ನು ಈಶಾನ್ಯ ಮೂಲೆಯಲ್ಲಿ ಮಾತ್ರ ಎಂದಿಗೂ ಇಡಬಾರದು, (ಏಜೆನ್ಸೀಸ್).

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.