ಸಾಂದರ್ಭಿಕ ಚಿತ್ರ 
ಧಾರ್ಮಿಕ

ನವರಾತ್ರಿ ಹಬ್ಬದಲ್ಲಿ ಮನೆಗೆ ತರಬೇಕಾದ ಶುಭ ವಸ್ತುಗಳಿವು! ಇವುಗಳಿಂದ ನಿಮ್ಮ ಅದೃಷ್ಟವೇ ಬದಲಾಗಲಿದೆ...Navaratri 2026

ನಿಮ್ಮ ಮನೆಯಲ್ಲೂ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಬಯಸುವಿರಾದರೆ, ನವರಾತ್ರಿ ಸಮಯದಲ್ಲಿ ಮನೆಗೆ ತರಬೇಕಾದ ಈ ಶುಭ ವಸ್ತುಗಳ ಕುರಿತು ಮಾಹಿತಿ ಇಲ್ಲಿದೆ.

Navaratri 2026 : ನವರಾತ್ರಿ ಹಬ್ಬವೆಂದರೆ ಎಲ್ಲರ ಮನೆಯಲ್ಲೂ ದುರ್ಗಾ ದೇವಿಯ ಆರಾಧನೆ, ಭಕ್ತಿ ಮತ್ತು ಸಂಭ್ರಮದ ವಿಶೇಷ ಹಬ್ಬ. ನವರಾತ್ರಿ ಎಂದರೆ ಒಂಬತ್ತು ದಿನಗಳಲ್ಲಿ ದೇವಿಯನ್ನು ವಿವಿಧ ರೂಪಗಳಲ್ಲಿ ಪೂಜಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನೆಲೆಸುತ್ತದೆ ಎಂದು ನಂಬಲಾಗುತ್ತದೆ. ಅದರಲ್ಲೂ ನವರಾತ್ರಿ ಸಂದರ್ಭದಲ್ಲಿ ಕೆಲವು ಮಂಗಳಕರ ವಸ್ತುಗಳನ್ನು ಮನೆಗೆ ತರುವುದು ಶುಭದ ಸಂಕೇತವೆಂದು ಹೇಳಲಾಗುತ್ತದೆ. ಹಾಗಾದರೆ ಈ ನವರಾತ್ರಿಯಲ್ಲಿ ಮನೆಗೆ ಯಾವ ವಸ್ತುಗಳನ್ನು ತಂದರೆ ಅದೃಷ್ಟ ಒಲಿಯುತ್ತದೆ? ನಿಮ್ಮ ಮನೆಯಲ್ಲೂ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಬಯಸುವಿರಾದರೆ, ನವರಾತ್ರಿ ಸಮಯದಲ್ಲಿ ಮನೆಗೆ ತರಬೇಕಾದ ಈ ಶುಭ ವಸ್ತುಗಳ ಕುರಿತು ಮಾಹಿತಿ ಇಲ್ಲಿದೆ.

ಬೆಳ್ಳಿ ನಾಣ್ಯ – ಸಂಪತ್ತು ಮತ್ತು ಸಮೃದ್ಧಿಯ ಸಂಕೇತ

ಹಿಂದೂ ಸಂಪ್ರದಾಯದಲ್ಲಿ ಬೆಳ್ಳಿಯನ್ನು ಶುಭದ ಸಂಕೇತವೆಂದು ಹೇಳುತ್ತಾರೆ. ನವರಾತ್ರಿ ಸಮಯದಲ್ಲಿ ಬೆಳ್ಳಿ ನಾಣ್ಯವನ್ನು ಖರೀದಿಸಿ ಲಕ್ಷ್ಮಿ ದೇವಿಯ ಮುಂದೆ ಇಟ್ಟು ಪೂಜಿಸುವ ಪದ್ಧತಿ ಕೆಲವು ಮನೆಗಳಲ್ಲಿದೆ. ಬೆಳ್ಳಿ ನಾಣ್ಯದ ಮೇಲೆ ಲಕ್ಷ್ಮಿ ದೇವಿ ಅಥವಾ ಗಣೇಶನ ಚಿತ್ರವಿದ್ದರೆ ಅದನ್ನು ಪೂಜೆಸುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎನ್ನುವುದು ಹಲವರ ನಂಬಿಕೆ. ಇದು ಮನೆಯಲ್ಲಿ ಆರ್ಥಿಕ ಸ್ಥಿರತೆ ನೆಲೆಸಲಿ, ಕುಟುಂಬದ ಸದಸ್ಯರಿಗೆ ಸುಖ-ಸಮೃದ್ಧಿ ದೊರೆಯಲಿ ಎಂಬ ಭಕ್ತರ ಆಶಯವನ್ನು ಹೊಂದಿರುತ್ತದೆ.

ಲಕ್ಷ್ಮಿ ದೇವಿಯ ಪಾದದ ಗುರುತು – ಶುಭದ ಸ್ವಾಗತ

ಲಕ್ಷ್ಮಿ ದೇವಿಯ ಪಾದದ ಗುರುತುಗಳನ್ನು ಮನೆಯ ಪ್ರವೇಶದ್ವಾರದಲ್ಲಿ ರಂಗೋಲಿಯಲ್ಲಿ ಬಿಡಿಸುವುದು ಅಥವಾ ಅಲಂಕಾರಿಕ ಪಾದದ ಗುರುತುಗಳನ್ನು ತರುವುದು ಅನೇಕ ಮನೆಗಳಲ್ಲಿ ಕಂಡುಬರುತ್ತದೆ, ಇದರಿಂದ ಮನೆಗೆ ದೇವಿಯ ಮನೆಗೆ ಆಗಮನವಾಗುತ್ತದೆ ಎಂಬ ಭಾವನೆಯನ್ನು ಈ ಗುರುತುಗಳು ಸಂಕೇತಿಸುತ್ತವೆ. ನವರಾತ್ರಿ ಸಂದರ್ಭದಲ್ಲಿ ಮನೆಯ ಬಾಗಿಲನ್ನು ಸ್ವಚ್ಛಗೊಳಿಸಿ, ಹೂವು ಮತ್ತು ರಂಗೋಲಿಯಿಂದ ಅಲಂಕರಿಸಿ, ವಿಶೇಷವಾಗಿ ಹಬ್ಬದ ದಿನಗಳಲ್ಲಿ ಮನೆಯ ಪ್ರವೇಶದ್ವಾರವನ್ನು ಸುಂದರವಾಗಿ ಅಲಂಕರಿಸುವುದರಿಂದ ಹಬ್ಬಕ್ಕೆ ಮತ್ತಷ್ಟು ಮೆರಗು ತರುತ್ತದೆ.

ಹೊಸ ಮಣ್ಣಿನ ದೀಪ – ಕತ್ತಲೆಯನ್ನು ದೂರ ಮಾಡುವ ಬೆಳಕು

ನವರಾತ್ರಿ ಹಬ್ಬದಲ್ಲಿ ದೀಪ ಬೆಳಗಿಸುವುದಕ್ಕೆ ವಿಶೇಷ ಮಹತ್ವವಿದೆ. ದೀಪವು ಬೆಳಕು, ಜ್ಞಾನ ಮತ್ತು ಸಕಾರಾತ್ಮಕತೆಯ ಸಂಕೇತ. ಹಾಗಾಗಿ ನವರಾತ್ರಿ ಸಂದರ್ಭದಲ್ಲಿ ಹೊಸ ಮಣ್ಣಿನ ದೀಪಗಳನ್ನು ಮನೆಗೆ ತಂದು ದೇವಿಯ ಮುಂದೆ ಬೆಳಗಿಸಬೇಕು. ಬೆಳಿಗ್ಗೆ ಮತ್ತು ಸಂಜೆ ಪೂಜೆಯ ಸಮಯದಲ್ಲಿ ದೀಪ ಬೆಳಗಿಸಿ, ದೇವಿಗೆ ಹೂವುಗಳನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸುವ ಪದ್ದತಿಯಿಂದ ಮನೆಯಲ್ಲಿ ಜ್ಯೋತಿ ನಿರಂತರವಾಗಿ ಬೆಳಗುತ್ತದೆ ಎನ್ನುವ ಮನೋಭಾವನೆ ಅನೇಕರಲ್ಲಿದೆ.

ಅರಿಶಿನ ಮತ್ತು ಕುಂಕುಮ – ಮಂಗಳದ ಸಂಕೇತ

ಅರಿಶಿನ ಮತ್ತು ಕುಂಕುಮಕ್ಕೆ ಹಿಂದೂ ಸಂಪ್ರದಾಯಲ್ಲಿ ವಿಶೇಷ ಹಿನ್ನೆಲೆ ಇದೆ. ಪೂಜೆ, ಹಬ್ಬ, ಮದುವೆ ಸೇರಿದಂತೆ ಹಲವು ಶುಭಕಾರ್ಯಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ. ನವರಾತ್ರಿ ಸಂದರ್ಭದಲ್ಲಿ ಅರಿಶಿನ ಮತ್ತು ಕುಂಕುಮದಿಂದ ಪೂಜೆ ಸಲ್ಲಿಸಬೇಕು. ನವರಾತ್ರಿ ಸಮಯದಲ್ಲಿ ಮಹಿಳೆಯರನ್ನು ಮನೆಗೆ ಆಹ್ವಾನಿಸಿ ಅರಿಶಿನ, ಕುಂಕುಮ ನೀಡಿ ಗೌರವಿಸುವ ಸಂಪ್ರದಾಯವೂ ಇದೆ. ಇದು ಪರಸ್ಪರ ಪ್ರೀತಿ, ಗೌರವ ಮತ್ತು ಸೌಹಾರ್ದವನ್ನು ಹಂಚಿಕೊಳ್ಳುವ ಸುಂದರ ಆಚರಣೆಯಾಗಿದೆ. ಪೂಜೆಯ ನಂತರ ಕುಟುಂಬದವರು ಮತ್ತು ಅತಿಥಿಗಳೊಂದಿಗೆ ಹಬ್ಬದ ಸಂತೋಷವನ್ನು ಹಂಚಿಕೊಳ್ಳಲು ಇದು ಒಂದು ಉತ್ತಮ ಅವಕಾಶವಾಗಿದೆ.

ತಾಮ್ರ ಅಥವಾ ಹಿತ್ತಾಳೆಯ ಕಲಶ

ನವರಾತ್ರಿ ದಿನದಲ್ಲಿ ಕಲಶ ಸ್ಥಾಪನೆ ಮಾಡುವ ಪದ್ಧತಿ ಹಲವು ಕುಟುಂಬಗಳಲ್ಲಿ ಕಂಡುಬರುತ್ತದೆ. ಕಲಶ ಪವಿತ್ರತೆ, ಪೂರ್ಣತೆ ಮತ್ತು ಶುಭದ ಸಂಕೇತವಾಗಿದೆ. ಹೀಗಾಗಿ ತಾಮ್ರ ಅಥವಾ ಹಿತ್ತಾಳೆಯ ಕಲಶವನ್ನು ಮನೆಗೆ ತಂದು ಪೂಜೆಗೆ ಬಳಸಬಹುದು. ಕಲಶದಲ್ಲಿ ನೀರು ತುಂಬಿ, ಮಾವಿನ ಎಲೆಗಳು ಮತ್ತು ತೆಂಗಿನಕಾಯಿಯನ್ನು ಇರಿಸಿ ಅಲಂಕಾರ ಮಾಡಲಾಗುತ್ತದೆ.

ತೆಂಗಿನಕಾಯಿ – ಪೂಜೆ ಮತ್ತು ಶುಭಾರಂಭದ ಸಂಕೇತ

ತೆಂಗಿನಕಾಯಿಯನ್ನು ಹಿಂದೂ ಧಾರ್ಮಿಕ ಪೂಜೆಗಳಲ್ಲಿ ಪ್ರಮುಖ ವಸ್ತುವಾಗಿ ಬಳಸಲಾಗುತ್ತದೆ. ನವರಾತ್ರಿ ಹೊಸ ಕೆಲಸ ಆರಂಭಿಸುವಾಗ ಅಥವಾ ವಿಶೇಷ ಪೂಜೆ ಮಾಡುವಾಗಲೂ ತೆಂಗಿನಕಾಯಿಗೆ ಮಹತ್ವ ನೀಡಲಾಗುತ್ತದೆ. ತೆಂಗಿನಕಾಯಿಯನ್ನು ಭಕ್ತಿ, ಸಮರ್ಪಣೆ ಮತ್ತು ಶುಭಾರಂಭದ ಸಂಕೇತವಾಗಿ ಕಾಣಲಾಗುತ್ತದೆ. ನವರಾತ್ರಿ ಪೂಜೆಗೆ ಬೇಕಾದ ವಸ್ತುಗಳನ್ನು ಖರೀದಿಸುವಾಗ ಉತ್ತಮವಾದ ತೆಂಗಿನಕಾಯಿಯನ್ನು ತರಬಹುದು. ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ಅದನ್ನು ಕಲಶದ ಮೇಲಿಡಬಹುದು ಅಥವಾ ದೇವಿಗೆ ನೈವೇದ್ಯವಾಗಿ ಅರ್ಪಿಸಬಹುದು.

ತುಳಸಿ ಗಿಡ – ಪವಿತ್ರತೆ ಮತ್ತು ಹಸಿರಿನ ಸಂಕೇತ

ತುಳಸಿ ಗಿಡಕ್ಕೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಸ್ಥಾನವಿದೆ. ಅನೇಕ ಮನೆಗಳಲ್ಲಿ ತುಳಸಿಯನ್ನು ಪವಿತ್ರವೆಂದು ಭಾವಿಸಿ ಪ್ರತಿದಿನ ಪೂಜಿಸಲಾಗುವ ಪದ್ದತಿ ಇದೆ. ನವರಾತ್ರಿ ಸಮಯದಲ್ಲಿ ತುಳಸಿ ಗಿಡವನ್ನು ಮನೆಗೆ ತರುವುದು ಅಥವಾ ಈಗಾಗಲೇ ಇರುವ ಗಿಡವನ್ನು ಚೆನ್ನಾಗಿ ಆರೈಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ತುಳಸಿ ಗಿಡವು ಮನೆಯ ಪರಿಸರಕ್ಕೆ ಹಸಿರು ಸೌಂದರ್ಯವನ್ನು ನೀಡುತ್ತದೆ, (ಏಜೆನ್ಸೀಸ್).