Palmistry M Mark 
ಧಾರ್ಮಿಕ

ನಿಮ್ಮ ಕೈನಲ್ಲಿ ಈ ಇಂಗ್ಲಿಷ್​ ಅಕ್ಷರ ಕಾಣ್ತಿದ್ಯಾ?; ಎಷ್ಟೇ ಕಷ್ಟದಲ್ಲಿದ್ದರೂ ಮುಂದೆ ಶ್ರೀಮಂತರಾಗುವ ಯೋಗ ನಿಮ್ಗಿದೆ!

ಪ್ರಮುಖ ಮುಖ್ಯಾಂಶಗಳು

  • ಅಕ್ಷರ ಕೈನಲ್ಲಿದ್ದರೆ ಹಣ ಸಂಪಾದನೆಯಲ್ಲಿ ಯಾವುದೇ ಸಮಸ್ಯೆಯಿಲ್ಲ
  • ಎಂ ಅಕ್ಷರ ಅಂಗೈನಲ್ಲಿದ್ದವರು ನಾಯಕತ್ವದ ಗುಣ ಹೊಂದಿರುತ್ತಾರೆ.
  • ತಲೆ, ಹೃದಯ ಮತ್ತು ಜೀವ ರೇಖೆಗಳು ಒಂದಕ್ಕೊಂದು ಸೇರಿದರೆ M ಆಕಾರ ಸೃಷ್ಟಿ
Palmistry M Mark: ಹಸ್ತಾಮುದ್ರಿಕ ಶಾಸ್ತ್ರದ ಪ್ರಕಾರ ನಮ್ಮ ಕೈ, ಅಂಗೈ ಮತ್ತು ಪಾದದ ಮಲಕ ನಮ್ಮ ಭವಿಷ್ಯವನ್ನು, ಸ್ವಭಾವ ಹಾಗೂ ಆರೋಗ್ಯವನ್ನು ತಿಳಿದುಕೊಳ್ಳಬಹುದು. ಹಾಗೆಯೇ ಅಂಗೈನಲ್ಲಿ ಕಂಡು ಬರುವ ಕೆಲವು ರೇಖೆಗಳು ಆರ್ಥಿಕ ಭವಿಷ್ಯ, ಮಾನಸಿಕ ಒತ್ತೆ ಹಾಗೂ ಹೊಂದುವ ಮಕ್ಕಳ ಹೊಂದುವ ಪ್ರಮಾಣ, ವೈವಾಹಿಕ ಜೀವನದ ಬಗ್ಗೆ ನಿಖರವಾದ ಮುನ್ಸೂಚನೆಯನ್ನು ನೀಡುತ್ತದೆ.
ನಿಮ್ಮ ಅಂಗೈನಲ್ಲಿ ಇಂಗ್ಲಿಷ್​​ ಅಕ್ಷರ ಎಮ್​ ಕಾಣಿಸಿಕೊಂಡರೆ ಇದು ನಿಮ್ಮ ಅದೃಷ್ಟದ ಸಂಕೇತ. ತಲೆ, ಹೃದಯ ಮತ್ತು ಜೀವ ರೇಖೆಗಳು ಒಂದಕ್ಕೊಂದು ಸೇರಿ ಈ ಆಕಾರವನ್ನು ಸೃಷ್ಟಿ ಮಾಡುತ್ತದೆ. ಇದು ನಿಮ್ಮಲ್ಲಿರುವ ಅದೃಷ್ಟ ಮತ್ತು ನಾಯಕತ್ವ ಹಾಗೂ ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ ಎನ್ನುವುದು ನಂಬಿಕೆಯಾಗಿದೆ.

ನಾಯಕತ್ವದ ಗುಣವುಳ್ಳವರು

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈನಲ್ಲಿ M ಅಕ್ಷರ ಕಂಡುಬಂದರೆ ಅಂತವರಿಗೆ ಹಣದ ಸಮಸ್ಯೆ ಅಷ್ಟಾಗಿ ಕಾಡೋದಿಲ್ಲ. ಅವರು ಅದೃಷ್ಟವಂತರು. ಮಹಿಳೆಯರಿಗೆ ಬಲಗೈನಲ್ಲಿ ಎಂ ಅಕ್ಷರವಿದ್ದರೆ ಅವರು ಎಲ್ಲ ಕ್ಷೇತ್ರದಲ್ಲಿ ಭಾಗಿಯಾಗುತ್ತಾರೆ. ಎಲ್ಲರೊಂದಿಗೆ ಒಟ್ಟಾಗಿ ಬೆರೆಯಲು ಇಚ್ಛಿಸುತ್ತಾರೆ. ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ.

ಅಂಗೈನಲ್ಲಿ M ಎಲ್ಲಿರುತ್ತದೆ?

ಅಂಗೈನಲ್ಲಿರುವ ಜೀವನ ರೇಝೆ ಮತ್ತು ಮೆದುಳಿನ ಹಾಗೂ ಹೃದಯದ ರೇಖೆಯೇ ಎಂ ಅಕ್ಷರ. ಈ ಮೂರು ರೇಖೆಗಳು ಒಟ್ಟಾದ ಮಾತ್ರ ಈ ಅಕ್ಷರ ಕಾಣಿಸುತ್ತದೆ. ಇದನ್ನು ಹೊಂದಿರುವ ಜನರು ಅದೃಷ್ಟವಂತರು ಎಂದು ಶಾಸ್ತ್ರ ಪುರಾಣಗಳ ಮೂಲಕ ಪರಿಗಣಿಸಲಾಗಿದೆ.
ಕೈನಲ್ಲಿ ಎಂ ರೇಖೆ ಇರುವವರು ರಾಜಕೀಯವಾಗಿ ಏನನ್ನಾದರೂ ಸಾಧಿಸುತ್ತಾರೆ. ವ್ಯವಹಾರದ ವಿಚಾರದಲ್ಲಿ ಅವರ ಮುಂದೆ ಸ್ಪರ್ಧೆಗೆ ನಿಲ್ಲೋರಿಲ್ಲ. ಸಾಕಷ್ಟು ದೂರದೃಷ್ಟಿ ಹೊಂದಿರುವ ಇವರು ಬುದ್ಧಿವಂತರೂ ಹೌದು. ಸುಶಿಕ್ಷಿತರು. ಹಣದ ವಿಚಾರವಾಗಿ ಸಾಕಷ್ಟು ಯೋಚಿಸಿ ಖರ್ಚು ಮಾಡುತ್ತಾರೆ. ಎಷ್ಟೇ ಬಡವರಾಗಿದ್ದರೂ ಶ್ರೀಮಂತರಾಗಿ ಹಣ ಮಾಡುವ ಗತ್ತು ಅವರಲ್ಲಿರುತ್ತದೆ, (ಏಜೆನ್ಸೀಸ್)