ಭಯ, ಒತ್ತಡ ದೂರವಾಗಿ ವಿಜಯ ಸಾಧಿಸಲು 'ಹುಂ ಹನುಮತೇ ನಮಃ' ಮಂತ್ರ ಪಠಿಸಿ.
ಕಷ್ಟಕಾಲದಲ್ಲಿ ಆತ್ಮಬಲ ಹೆಚ್ಚಿಸುವ ಹನುಮಂತನ ಮಂತ್ರ ಎಂದೆಂದು ಪಠಿಸಬೇಕು?
ಆತಂಕ, ಸೋಲು ಮರೆಸುವ 'ಹುಂ' ಮಂತ್ರದ ಶಕ್ತಿ ಬಗ್ಗೆ ನಿಮಗೆ ಗೊತ್ತೇ?
ಜೀವನದಲ್ಲಿ ಕಷ್ಟ ಎದುರಾದಾಗ, ಕಷ್ಟಗಳು ನಮ್ಮನ್ನು ಒಕ್ಕಾಗ, ಮುಂದೇನು ಮಾಡಬೇಕು ಎಂದು ತೋಚದಿದ್ದಾಗ ಯಾರಾದರೂ ನಮ್ಮೊಟ್ಟಿಗೆ ಇರಬೇಕು ಎನ್ನುವ ಭಾವನೆ ಮೂಡುತ್ತದೆ. ಆದರೆ, ಯಾರು ಇರುವುದಿಲ್ಲ. ಹೀಗಾಗಿ ಕೆಲವರು ರಕ್ಷಣೆ, ವಿಜಯ, ಧೈರ್ಯ ಮತ್ತು ಶಕ್ತಿಗಾಗಿ ಭಗವಾನ್ ಹನುಮಂತನ ಆಶೀರ್ವಾದವನ್ನು ಬೇಡುತ್ತಾರೆ.
ಆಂಜನೇಯನನ್ನು ಆತ್ಮಸಂಯಮ, ಶಿಸ್ತು, ನಿರ್ಭೀತಿ ಮತ್ತು ಭಕ್ತಿಯ ಆದರ್ಶ ಎಂದು ಪರಿಗಣಿಸಲಾಗಿದೆ. ಹನುಮಂತನ ಶಕ್ತಿಯು ಜನರಿಗೆ ಭಯವನ್ನು ಎದುರಿಸಲು, ನಕಾರಾತ್ಮಕ ಆಲೋಚನೆಗಳನ್ನು ಮೆಟ್ಟಿನಿಲ್ಲಲು ಮತ್ತು ಕಠಿಣ ಪರಿಸ್ಥಿತಿಗಳನ್ನು ಆತ್ಮವಿಶ್ವಾಸದಿಂದ ನಿಭಾಯಿಸಲು ಪ್ರೇರಣೆ ನೀಡುತ್ತದೆ.
ನೀವು ಜೀವನದಲ್ಲಿ ಅಡೆತಡೆ, ದೌರ್ಬಲ್ಯ, ಗೊಂದಲ ಅಥವಾ ಒತ್ತಡವನ್ನು ಅನುಭವಿಸುತ್ತಿದ್ದರೆ, ಒಂದು ನಿರ್ದಿಷ್ಟ ಶಬ್ದವನ್ನು ಪಠಿಸುವುದರಿಂದ ಹನುಮಂತನ ಮಹಾಶಕ್ತಿಯೊಂದಿಗೆ ಮರುಸಂಪರ್ಕ ಸಾಧಿಸಬಹುದು. ಆ ಶಕ್ತಿಶಾಲಿ ಶಬ್ದವೇ "ಹುಂ" ಇದನ್ನು ಯಾವಾಗ ಪಠಿಸಬೇಕು, ಇದರಿಂದ ಸಿಗುವ ಲಾಭವೇನು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.
ಆಧ್ಯಾತ್ಮಿಕ ಆಚರಣೆಗಳಲ್ಲಿ ಶಕ್ತಿಯ ಶುದ್ಧೀಕರಣ, ಧೈರ್ಯ ಮತ್ತು ರಕ್ಷಣೆಯನ್ನು ಹೆಚ್ಚಿಸಲು 'ಹುಂ' ಶಬ್ದವನ್ನು ಬಳಸಲಾಗುತ್ತದೆ. ಇದು ತೀಕ್ಷ್ಣವಾದ ಮತ್ತು ಬಲವಾದ ಶಬ್ದವಾಗಿದ್ದು, ಆಂತರಿಕ ಶಕ್ತಿಯನ್ನು ನಿರ್ಮಿಸುತ್ತದೆ ಹಾಗೂ ಮನಸ್ಸನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
ಹನುಮಂತನ ಆರಾಧನೆಯಲ್ಲಿ, ಧೈರ್ಯವನ್ನು ತುಂಬಲು ಮತ್ತು ಆತಂಕವನ್ನು ಕಡಿಮೆ ಮಾಡಲು ಈ ಶಬ್ದವನ್ನು ಬಳಸಬಹುದು. ವಿಶೇಷವಾಗಿ ಪ್ರತಿಸ್ಪರ್ಧಿಗಳು, ವಿರೋಧಿಗಳು, ಕಚೇರಿ ರಾಜಕೀಯ, ಕಾನೂನು ಒತ್ತಡ, ಪರೀಕ್ಷೆಯ ಭಯ ಅಥವಾ ಭಾವನಾತ್ಮಕ ದೌರ್ಬಲ್ಯವನ್ನು ಎದುರಿಸುತ್ತಿರುವಾಗ ಇದು ಅತ್ಯಂತ ಉಪಯುಕ್ತವಾಗಿದೆ. 'ಹುಂ' ಎಂಬುದು ಕೇವಲ ಒಂದು ಪದವಲ್ಲ, ಅದೊಂದು ಕಂಪನ. ನಂಬಿಕೆಯಿಂದ ಪಠಿಸಿದರೆ ಇದು ಅಪಾರ ಆಂತರಿಕ ಶಕ್ತಿಯನ್ನು ನೀಡುತ್ತದೆ.
ಸ್ವಚ್ಛ ಮತ್ತು ಶಾಂತವಾದ ಸ್ಥಳದಲ್ಲಿ ಕುಳಿತುಕೊಳ್ಳಿ. ಸಾಧ್ಯವಾದರೆ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಿ.
ನಿಮ್ಮೊಂದಿಗೆ ಶ್ರೀ ಹನುಮಂತನ ವಿಗ್ರಹ ಅಥವಾ ಫೋಟೋವನ್ನು ಇಟ್ಟುಕೊಳ್ಳಿ.
ದೀಪವನ್ನು ಹಚ್ಚಿ ಅಥವಾ ನಿಮ್ಮ ತೊಡೆಯ ಮೇಲೆ ಕೈಗಳನ್ನು ಜೋಡಿಸಿ ಕುಳಿತುಕೊಳ್ಳಿ.
ಕಣ್ಣುಗಳನ್ನು ಮುಚ್ಚಿ, ಮೂರು ಬಾರಿ ನಿಧಾನವಾಗಿ ಉಸಿರಾಡಿ. ನಂತರ "ಹುಂ ಹನುಮತೇ ನಮಃ" ಎಂದು ಪಠಿಸಿ.
ಪಠಿಸುವಾಗ ನಿಮ್ಮ ಉದ್ದೇಶವು ಶುದ್ಧ ಮತ್ತು ಸರಳವಾಗಿರಲಿ. ಒಂದೇ ಸಮಯದಲ್ಲಿ ಹಲವು ವಿಷಯಗಳ ಬಗ್ಗೆ ಯೋಚಿಸಬೇಡಿ. ನೀವು ಗೆಲ್ಲಲು ಬಯಸುವ ಒಂದು ಸಮಸ್ಯೆಯ ಭಯ, ವಿಳಂಬ, ಸಂಘರ್ಷ, ಸೋಮಾರಿತನ, ಅನಾರೋಗ್ಯ, ಪರೀಕ್ಷೆಯ ಒತ್ತಡ ಅಥವಾ ವೃತ್ತಿಜೀವನದ ಅಡೆತಡೆಮೇಲೆ ಮಾತ್ರ ಗಮನಹರಿಸಿ.
ಮಂಗಳವಾರ ಮತ್ತು ಶನಿವಾರಗಳಂದು ಹನುಮಂತನನ್ನು ಪ್ರಾರ್ಥಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಪ್ರಮುಖ ಕೆಲಸಗಳನ್ನು ಪ್ರಾರಂಭಿಸುವ ಮೊದಲು ಬೆಳಗಿನ ಸಮಯದಲ್ಲೂ ಈ ಮಂತ್ರವನ್ನು ಪಠಿಸಬಹುದು. ಇದಲ್ಲದೆ, ಹಠಾತ್ ಭಯ ಅಥವಾ ಒತ್ತಡ ಎದುರಾದಾಗ ಮನಸ್ಸಿನಲ್ಲೇ ಮೌನವಾಗಿ 11 ಬಾರಿ ಪಠಿಸುವುದರಿಂದ ಆತಂಕ ದೂರವಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ.
ಸೇಡು, ಕೋಪ ಅಥವಾ ಅಹಂಕಾರದ ಮನಸ್ಸಿನಿಂದ ಈ ಮಂತ್ರವನ್ನು ಪಠಿಸಬೇಡಿ. ಹನುಮಂತನು ಧೈರ್ಯ, ಸೇವೆ ಮತ್ತು ಶಿಸ್ತಿನ ಮೂಲಕ ವಿಜಯ ತಂದುಕೊಡುತ್ತಾನೆ.
ಮಂತ್ರ ಪಠಿಸಿದ ನಂತರ ನಕಾರಾತ್ಮಕ ಮಾತುಗಳು, ಅಗೌರವ, ಸೋಮಾರಿತನ ಅಥವಾ ಸುಳ್ಳು ಹೇಳುವುದರಲ್ಲಿ ತೊಡಗಬೇಡಿ.
ಯಾವುದೇ ಪ್ರಯತ್ನ ಮಾಡದೆ ತಕ್ಷಣದ ತೀರ್ಮಾನಗಳಿಗೆ ಬರಬೇಡಿ. ಹನುಮಂತನ ಶಕ್ತಿಯು ಧೈರ್ಯಶಾಲಿ ಪ್ರಯತ್ನಗಳಿಗೆ ಪೂರಕವಾಗಿರುತ್ತದೆ, (ಏಜೆನ್ಸೀಸ್).