Zodiac Signs  
ಧಾರ್ಮಿಕ

Zodiac Signs: ಜೂನ್ 2 ರಿಂದ ಗುರು ಗೋಚಾರ: ಈ ಅದೃಷ್ಟದ ರಾಶಿಗಳಿಗೆ ಒಲಿಯಲಿದೆ ಅಪಾರ ಧನಲಾಭ, ಲಕ್ಷ್ಮಿ ಕಟಾಕ್ಷ!

ಬೆಂಗಳೂರು: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜನೂ, ದೇವಗುರುವೂ ಆದ ಬೃಹಸ್ಪತಿ (ಗುರು ಗ್ರಹ) ಜೂನ್ 2ರಂದು ರಾಶಿ ಪರಿವರ್ತನೆ (Zodiac Signs) ಮಾಡಲಿದ್ದಾನೆ. ಮಿಥುನ ರಾಶಿಯಿಂದ ಹೊರಟು ತನ್ನ ಉಚ್ಚ ರಾಶಿಯಾದ ಕರ್ಕ ರಾಶಿಗೆ ಗುರು ಗ್ರಹವು ಪ್ರವೇಶಿಸಲಿದ್ದಾನೆ. ಜೂನ್ 2ರ ಮಂಗಳವಾರ ಮುಂಜಾನೆ 02:25ಕ್ಕೆ ನಡೆಯಲಿರುವ ಈ ಮಹಾ ಗೋಚಾರವು ಜ್ಯೋತಿಷ್ಯ ಜಗತ್ತಿನಲ್ಲಿ ಅತ್ಯಂತ ಪ್ರಮುಖ ಬದಲಾವಣೆ ತರಲಿದೆ. ದೇವಗುರು ಬೃಹಸ್ಪತಿಯ ಈ ಶುಭ ದೃಷ್ಟಿಯಿಂದಾಗಿ ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದ್ದು, ಆರ್ಥಿಕ ಸಮೃದ್ಧಿ ಹಾಗೂ ತಿರುಗುಬಾಣವಿಲ್ಲದ ಯಶಸ್ಸು ಸಿಗಲಿದೆ ಎಂದು ಜ್ಯೋತಿಷ್ಯ ತಜ್ಞರು ಹೇಳಿದ್ದಾರೆ.
ಗುರು ಗ್ರಹವನ್ನು ಜ್ಞಾನ, ಸಂಪತ್ತು, ವಿವಾಹ, ಸಂತಾನ ಮತ್ತು ಸುಖ-ಸಮೃದ್ದಿಯ ಕಾರಕ ಎಂದು ಪರಿಗಣಿಸಲಾಗುತ್ತದೆ. ಕರ್ಕ ರಾಶಿಯಲ್ಲಿ ಗುರು ಗ್ರಹವು ಅತ್ಯಂತ ಬಲಿಷ್ಠನಾಗಿರುವುದರಿಂದ, ಈ ಗೋಚಾರವು ಪ್ರಮುಖವಾಗಿ ಮೂರು ರಾಶಿಗಳ ಜನರಿಗೆ ಕೋಟ್ಯಧಿಪತಿಯಾಗುವ ಸುವರ್ಣ ಅವಕಾಶಗಳನ್ನು ಸೃಷ್ಟಿಸಲಿದೆ. ಆ ಅದೃಷ್ಟದ ರಾಶಿಗಳ ವಿವರ ಇಲ್ಲಿದೆ.

1. ಕರ್ಕ ರಾಶಿ (Karka Rashi)

ಗುರು ಭಗವಾನನು ನಿಮ್ಮ ಸ್ವಂತ ರಾಶಿಗೇ (ಲಗ್ನ ಭಾವ) ಪ್ರವೇಶಿಸುತ್ತಿರುವುದರಿಂದ ಕರ್ಕ ರಾಶಿಯವರ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸರ್ಕಾರಿ ಕೆಲಸಗಳು ಅಥವಾ ಕೋರ್ಟ್ ಕಚೇರಿ ಪ್ರಕರಣಗಳು ನಿಮಗೆ ಅನುಕೂಲಕರವಾಗಿ ಮುಕ್ತಾಯಗೊಳ್ಳಲಿವೆ. ಉದ್ಯೋಗದ ಹುಡುಕಾಟದಲ್ಲಿರುವ ನಿರುದ್ಯೋಗಿಗಳಿಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ (MNC) ಉತ್ತಮ ಕೆಲಸದ ಅವಕಾಶಗಳು ಸಿಗಲಿವೆ. ಅವಿವಾಹಿತರಿಗೆ ಯೋಗ್ಯ ಜೀವನ ಸಂಗಾತಿ ಸಿಗುವ ಮೂಲಕ ಕಲ್ಯಾಣ ಯೋಗ ಕೂಡಿಬರಲಿದೆ.

2. ಸಿಂಹ ರಾಶಿ (Simha Rashi)

ಸಿಂಹ ರಾಶಿಯವರಿಗೆ ಈ ಗುರು ಗೋಚಾರವು ಆದಾಯದ ಮೂಲಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಿದೆ. ಲಾಟರಿ, ಶೇರ್ ಮಾರ್ಕೆಟ್ ಅಥವಾ ಪಿತ್ರಾರ್ಜಿತ ಆಸ್ತಿಯ ಮೂಲಕ ಅನಿರೀಕ್ಷಿತ ಧನಲಾಭ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ನೀವು ಕೈಗೆತ್ತಿಕೊಳ್ಳುವ ಹೊಸ ಪ್ರಾಜೆಕ್ಟ್‌ಗಳು ಹಾಗೂ ವ್ಯಾಪಾರ ಒಪ್ಪಂದಗಳು ಅತ್ಯಂತ ಯಶಸ್ವಿಯಾಗಿ ಮುನ್ನಡೆಯಲಿವೆ. ಸಮಾಜದ ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದ್ದು, ಅದು ನಿಮ್ಮ ವೃತ್ತಿಬದುಕಿನ ಬೆಳವಣಿಗೆಗೆ ನೆರವಾಗಲಿದೆ. ಕುಟುಂಬದಲ್ಲಿ ಮದುವೆ, ಮುಂಜಿ ಮುಂತಾದ ಶುಭ ಕಾರ್ಯಗಳು ಜರುಗಲಿವೆ.

3. ತುಲಾ ರಾಶಿ (Tula Rashi)

ತುಲಾ ರಾಶಿಯವರಿಗೆ ಭಾಗ್ಯ ಸ್ಥಾನದಲ್ಲಿ ಗುರು ಇರಲಿದ್ದು, ಅದೃಷ್ಟವು ನಿಮ್ಮ ಹೆಜ್ಜ ಹೆಜ್ಜೆಗೂ ಸಾಥ್ ನೀಡಲಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳ ಕನಸು ನನಸಾಗುವ ಸಮಯ ಬಂದಿದೆ. ಈ ಅವಧಿಯಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಯಾತ್ರೆಗಳನ್ನು ಕೈಗೊಳ್ಳುವಿರಿ. ತಂದೆಯ ಕಡೆಯಿಂದ ಆಸ್ತಿ ಅಥವಾ ಆರ್ಥಿಕ ಸಹಾಯ ಸಿಗುವ ಯೋಗವಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಮತ್ತು ಪೂರ್ಣ ಬೆಂಬಲ ದೊರೆಯಲಿದ್ದು, ಬಡ್ತಿ ಸಿಗುವ ಸಾಧ್ಯತೆ ಇದೆ. ಆರೋಗ್ಯದಲ್ಲೂ ಗಣನೀಯ ಚೇತರಿಕೆ ಕಂಡುಬರಲಿದೆ.

ಪರಿಹಾರಗಳು

ಗುರು ಗ್ರಹದ ಅಶುಭ ಪ್ರಭಾವಗಳನ್ನು ಕಡಿಮೆ ಮಾಡಲು ಮತ್ತು ಶುಭ ಫಲಗಳನ್ನು ಹೆಚ್ಚಿಸಿಕೊಳ್ಳಲು ಗುರುವಾರದಂದು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಕಡಲೆಕಾಳು ಮತ್ತು ಹಳದಿ ಬಣ್ಣದ ವಸ್ತುಗಳನ್ನು ಬಡವರಿಗೆ ದಾನ ಮಾಡುವುದರಿಂದ ಗುರು ದೋಷ ನಿವಾರಣೆಯಾಗಿ ಸುಖ-ಶಾಂತಿ ನೆಲೆಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸಿದೆ,(ಏಜೆನ್ಸೀಸ್​).