Vastu spiritual Plants For Home Positivity 
ಧಾರ್ಮಿಕ

ಮನೆಯಲ್ಲಿ ನಿತ್ಯ ಜಗಳ, ನೆಮ್ಮದಿಯೇ ಇಲ್ವಾ?; ಈ ಆಧ್ಯಾತ್ಮಿಕ ಗಿಡಗಳನ್ನು ಬೆಳಸಿ ನೋಡಿ..Vastu Plants For Home Positivity

ಪ್ರಮುಖ ಮುಖ್ಯಾಂಶಗಳು

  • ಮನೆಯಲ್ಲಿ ಅಶಾಂತಿ, ನಿತ್ಯ ಜಗಳವಾಗುತ್ತಿದ್ದರೆ ಅದಕ್ಕೆ ಕಾರಣ ಇದೇ ನೋಡಿ
  • ಮನೆಯಲ್ಲಿ ನೆಮ್ಮದಿ ಇರಲು ಈ ಆಧ್ಯಾತ್ಮಿಕ ಗಿಡಗಳನ್ನು ಬೆಳಸಿ
  • ಅಲೋವೆರಾ, ತುಳಸಿ, ಮನಿಪ್ಲಾಂಟ್​ ಬೆಳಸಿ ನೋಡಿ
Vastu  spiritual Plants For Home Positivity: ಯಾವುದೇ ಸೋಂಕು, ರೋಗ ಇಲ್ಲದಿದ್ದರು ಮನೆಯಲ್ಲಿ ನೆಮ್ಮದಿನೇ ಇರೋದಿಲ್ಲ. ನಿತ್ಯವೂ ಜಗಳ, ಕೋಪ ತಾಪ ಕಾಡುತ್ತಲೇ ಇರುತ್ತದೆ. ಇದು ಮನೆಯುಲ್ಲಿ ನಕರಾತ್ಮಕ ಶಕ್ತಿ ಇರುವುದೇ ಕಾರಣ. ಹೀಗಾಗಿ ಬೆಳೆಸುವ ಕೆಲವು ಆಧ್ಯಾತ್ಮಿಕ ಸಸ್ಯಗಳನ್ನು ಬೆಳಸಬೇಕು. ಇವು ಮನೆಯಲ್ಲಿರುವ ದುಷ್ಟ ಶಕ್ತಿಯನ್ನು  ಹೀರಿಕೊಂಡು ಸಕರಾತ್ಮಕ ವಾತಾವರಣವನ್ನು ನೀಡುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಅತ್ಯಂತ ಮಂಗಳಕರವೆಂದು ಪರಿಗಣಿಸಲಾದ, ನಿಮ್ಮ ಮನೆಯೊಳಗೆ ಧನಾತ್ಮಕ ಶಕ್ತಿ ತುಂಬುವ ಆ ಪ್ರಮುಖ ಸಸ್ಯಗಳ ಪಟ್ಟಿ ಇಲ್ಲಿದೆ. 

ಸಂಪತ್ತು ತರುವ ಬಿದಿರು

ಮನೆಯಲ್ಲಿ ಅದೃಷ್ಟ ಸಂಪತ್ತು ವೃದ್ಧಿಯಾಗುವುದನ್ನು ಆಕರ್ಷಿಸುವಲ್ಲಿ ಬಿದಿರು ಕೆಲಸ ಮಾಡುತ್ತದೆ. ಇದರ ನಿರ್ವಹಣೆಗೆ ಹೆಚ್ಚೇನು ಸಮಯ ಹಿಡಿಯೋದಿಲ್ಲ. ನೇರವಾದ ಸೂರ್ಯನ ಬೆಳಕಿಲ್ಲದ, ಮಂದವಾದ ಬೆಳಕಿರುವ ಯಾವುದೇ ಕೋಣೆಯಲ್ಲಿ ಇದನ್ನು ಇಡಬಹುದು.  

 ನಕಾರಾತ್ಮಕ ಶಕ್ತಿ ಶುದ್ಧೀಕರಿಸುವ ತುಳಸಿ ಗಿಡ 

ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ದೇವತೆಯಂತೆ ಪೂಜೆಯೂ ಮಾಡಲಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್​, ಆಂಟಿಬಯೋಟಿಕ್ ಗುಣವು ಮನುಷ್ಯರಿಗೆ ಸಹಕಾರಿ. ಜೊತೆಗೆ ಮನೆಯ ಸದಸ್ಯರಲ್ಲಿ ಕಾಡುವ ನೆಗಡಿ, ಕೆಮ್ಮು ಮತ್ತು ಜ್ವರದಂತಹ ರೋಗಲಕ್ಷಣಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಇದರೊಂದಿಗೆ, ಮನೆಯ ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಯನ್ನು ಶುದ್ಧೀಕರಿಸಲು ತುಳಸಿ ಸಹಕಾರಿಯಾಗಿದೆ.

ಧನಾತ್ಮಕ ವಾತಾವರಣವನ್ನು ಸೃಷ್ಟಿಸುವ ಮನಿ ಪ್ಲಾಂಟ್​

ಮನಿಪ್ಲಾಂಟ್​ ಹಣದ ಸಮೃದ್ಧಿಗೆ ಕಾರಣ ಎಂದು  ಹಳೆಯ ಕಾಲದಿಂದಲು ನಂಬಿರುವ ಆಧ್ಯಾತ್ಮಿಕ ವಿಚಾರ.  ಇದಕ್ಕೆ ಹೆಚ್ಚು ನಿರ್ವಹಣೆಯ ಅಗತ್ಯವಿಲ್ಲ, ಇದನ್ನು ಬಾಟಲಿಯಲ್ಲಿಟ್ಟು ಪೋಷಿಸಬಹುದಾಗಿದೆ. ಸೂರ್ಯನ ಬೆಳಕಿನ ಅಗತ್ಯ ಹೆಚ್ಚೇನು ಬೇಕಾಗಿಲ್ಲ, ಈ ಸಸಿ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು, ಧನಾತ್ಮಕ ವಾತಾವರಣವನ್ನು ಸೃಷ್ಟಿಸುವ ಅದ್ಭುತ ಶಕ್ತಿ ಈ ಗಿಡಕ್ಕಿದೆ ಎಂದು ನಂಬಲಾಗಿದೆ.

 ಆಮ್ಲಜನಕ ಹೇರಳವಾಗಿ ನೀಡುವ ಅಲೋವೆರಾ 

ಆಲೋವೆರಾ ಮುಖದ ಕಾಂತಿ ಹಾಗೂ ತಲೆಯ ಒಟ್ಟು ನಿವಾರಣೆ, ಕೂದಲು ಮೃದು ಮಾಡುವಲ್ಲಿ ಎಷ್ಟು ಸಹಕಾರಿಯೋ ಮನುಷ್ಯರ ಮಾನಸಿಕ ಮತ್ತು ನಿದ್ದೆಯ ಆರೋಗ್ಯಕ್ಕೆ ಮದ್ದು. ಇದನ್ನು ಮಲಗುವ ಕೋಣೆಯಲ್ಲಿ ಇಟ್ಟರೇ ಆಮ್ಲಜನಕವನ್ನು ರಿಲೀಸ್ ಮಾಡಿ ನಿಮಗೆ ಸುಖಕರ ನಿದ್ದೆ ನೀಡಲು ಸಹಾಯ ಮಾಡುತ್ತದೆ.
ಮನಸ್ಸಿಗೆ ಶಾಂತಿ ನೀಡುವ ಆರ್ಕಿಡ್ಸ್
ಆರ್ಕಿಡ್ಸ್​ ಹೂ ಬಿಡುವ ಸಸಿಯಾಗಿದ್ದು, ಇದನ್ನು ಮನೆಯಲ್ಲಿ ಪೋಷಿಸಿದರೆ, ಇದರಲ್ಲಿ ಬಿಡುವ ಹಗಳು ಮಾನಸಿ ಸಮಸ್ಯೆಯನ್ನು ದೂರ ಮಾಡುವಂತೆ ಸಹಾಯ ಮಾಡುತ್ತದೆ.  ಇದನ್ನು ಮನೆಯ ಯಾವುದೇ ಕೋಣೆಯಲ್ಲಿ ಇಡಬಹುದು. ಅಂದರೆ ಪರಿಶುದ್ಧ ಗಾಳಿಯಾಡುವಲ್ಲಿ ಇಡಬೇಕು, (ಏಜೆನ್ಸೀಸ್).