main door 
ಧಾರ್ಮಿಕ

ನಗರದಲ್ಲಿ ಮನೆಯ ಮುಖ್ಯದ್ವಾರದ ದಿಕ್ಕು ಮುಖ್ಯವಾಗುವುದಿಲ್ಲ!

ಮತ್ತೊಂದು ಬಹುದೊಡ್ಡ ಪ್ರಶ್ನೆ ದಕ್ಷಿಣ ದಿಕ್ಕಿಗೆ ಮನೆಯ ಮುಖ್ಯದ್ವಾರ ಇರಬಹುದೇ ಎಂಬುದು. ಪೂರ್ವಕ್ಕೆ ಬಾಗಿಲು ಇರಬೇಕೆಂಬ ಸಾಮಾನ್ಯ ತಿಳಿವಳಿಕೆ ಎಲ್ಲರಲ್ಲಿಯೂ ಇರುವುದು ಈ ಪ್ರಶ್ನೆಗೆ ಕಾರಣ. ಪೂರ್ವ ದಿಕ್ಕಿನ ಬಾಗಿಲಿನಿಂದ ಹಿಂದೆಲ್ಲ ಒಂದು ಅವಕಾಶವಿತ್ತು. ಅದೆಂದರೆ, ಬೆಳಗಿನ ಸೂರ್ಯೋದಯದ ಹೊತ್ತಿಗೆ ಮನೆಯ ಬಾಗಿಲನ್ನು ತೆರೆದಿಡುವುದರಿಂದ ಮಧ್ಯಾಹ್ನದವರೆಗೆ ಸೂರ್ಯನ ಚೈತನ್ಯ ಶಕ್ತಿ ಮನೆಯ ಒಳಗೆ ಸರಾಗವಾಗಿ ಬರುತ್ತಿತ್ತು. ಆದರೆ ಈಗ ನಗರ ಪ್ರದೇಶಗಳಲ್ಲಿ ಮನೆಯ ಬಾಗಿಲನ್ನು ದಿನಪೂರ್ತಿ ಮುಚ್ಚಿಡುವುದರಿಂದ ಮುಖ್ಯದ್ವಾರವನ್ನು ಯಾವ ದಿಕ್ಕಿನಲ್ಲಿಟ್ಟರೂ ಅದರ ಪ್ರಭಾವ ಅಷ್ಟೇನೂ ವ್ಯತ್ಯಾಸವಾಗುವುದಿಲ್ಲ. ಆದ್ದರಿಂದ ಯಾವ ದಿಕ್ಕಿನಲ್ಲಿ ಬೇಕಾದರೂ ಮನೆಯ ಮುಖ್ಯ
ದ್ವಾರವನ್ನು ಇಡಬಹುದು. ಅದಕ್ಕೆ ಪರ್ಯಾಯವಾಗಿ ಕಿಟಕಿಗಳನ್ನು ಸರಿ ಯಾದ ದಿಕ್ಕಿನಲ್ಲಿರಿಸಿ ಬೆಳಕು, ಗಾಳಿ ಸಂಚರಿ ಸುವಂತೆ ನೋಡಿಕೊಳ್ಳಬೇಕು ಅಷ್ಟೇ. ಕಿಟಕಿಗಳನ್ನು ಅಳವಡಿಸುವಾಗ ನೆಲಮಟ್ಟದಿಂದ ಎಷ್ಟು ಅಂತರವಿರ ಬೇಕೆಂಬುದು ಮುಖ್ಯ. ಏಕೆಂದರೆ ಕಿಟಕಿಗಳು ಮನೆಯ ಒಳಗೆ ಚೈತನ್ಯಶಕ್ತಿ ಪ್ರವಹಿಸಲು ಇರುವ ಮೂಲ ಮಾರ್ಗ. ಮನುಷ್ಯನಿಗೆ ಬೇಕಾದ ಚೈತನ್ಯಶಕ್ತಿಯು ಅಡಿಯಿಂದ ಮುಡಿಯವರೆಗೆ ಅಗತ್ಯವಿರುವುದರಿಂದ ಕಿಟಕಿ ಅಳವಡಿಸುವ ಗೋಡೆಯಲ್ಲಿ ನೆಲಮಟ್ಟದಿಂದ ಎರಡೂವರೆ ಅಡಿ ಅಥವಾ 750 ಮಿಲಿ ಮೀಟರ್​ಗಿಂತಲೂ ಹೆಚ್ಚಿನ ಅಂತರ ಇಡಬಾರದು. ಮೇಲ್ಛಾವಣಿಗೆ ಸಮೀಪದಲ್ಲಿ ಇಡುವ ವೆಂಟಿಲೇಟರ್​ನಿಂದ ಈ ಪ್ರಮಾಣದ ಚೈತನ್ಯಶಕ್ತಿ ಸಿಗುವುದಿಲ್ಲ. ಆದ್ದರಿಂದ ಚೈತನ್ಯಶಕ್ತಿಯ ಪ್ರಭಾವ ಮತ್ತು ಪ್ರಯೋಜನವನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಲು ಕಿಟಕಿಯ ಕೆಳಗಿನ ಅಂತರದ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು.
ನಿವೇಶನದ ಆವರಣದಲ್ಲಿ ಯಾವ ಸಸ್ಯ ನೆಡಬೇಕು ? : ನಿವೇಶನದ ಆವರಣದಲ್ಲಿ ಇಂತಹುದೇ ಸಸ್ಯಗಳನ್ನು ನೆಡಬೇಕೆಂಬ ನಿಯಮವಿಲ್ಲ. ಕಾರಣ ಸಸ್ಯಗಳು ಮನುಷ್ಯನಿಗೆ ಬೇಕಾದ ಶುದ್ಧ ಆಮ್ಲಜನಕವನ್ನು ಪೂರೈಸುವುದರಿಂದ ಯಾವುದೇ ಸಸ್ಯಗಳನ್ನು ಬೇಕಾದರೂ ಮನೆಯ ಸುತ್ತಮುತ್ತ ನೆಡಬಹುದು. ಆದರೆ, ಕೆಲವೊಂದಿಷ್ಟು ಸಸ್ಯಗಳಲ್ಲಿ ಔಷಧೀಯ ಗುಣವಿದ್ದು, ಅವುಗಳ ಉಪಯೋಗವನ್ನು ಅರಿತು ಅಂತಹ ಗಿಡಗಳನ್ನು ಹೆಚ್ಚಾಗಿ ಬೆಳೆಸುವುದರಿಂದ ಆ ಮನೆಯಲ್ಲಿ ವಾಸ ಮಾಡುವವರಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಉದಾಹರಣೆಗೆ ತುಳಸಿಗಿಡವನ್ನು ಅಂಗಳದಲ್ಲಿ ಬೆಳೆಸುವ ಪದ್ದತಿ ಸಾಕಷ್ಟು ಮನೆಯಲ್ಲಿದೆ. ತುಳಸಿ ಗಿಡದಲ್ಲಿ ಔಷಧೀಯ ಗುಣ ಹೇರಳವಾಗಿರುವುದರಿಂದ ಅಂಗಳದಲ್ಲಿ ಮಾತ್ರವಲ್ಲದೆ ಮನೆಯ ಸುತ್ತಲೂ ನೆಡುವುದರಿಂದ ಅಸ್ತಮಾ, ಶ್ವಾಸಕೋಶ ಸಂಬಂಧಿ ಆರೋಗ್ಯ ಸಮಸ್ಯೆ ಇರುವವರಿಗೆ ಹೆಚ್ಚು ಉಪಯೋಗವಾಗಲಿದೆ. ಜತೆಗೆ ಫಲಗಳನ್ನು ನೀಡುವ ಯಾವುದೇ ಗಿಡಗಳನ್ನು ನೆಡುವುದು ಕೂಡ ಉತ್ತಮ. ಶುದ್ಧಗಾಳಿಯೊಂದಿಗೆ ಹಣ್ಣು-ಕಾಯಿಗಳನ್ನು ನೀಡುತ್ತವೆ.
ಅಪಾರ್ಟ್​ವೆುಂಟ್​ನಲ್ಲಿ ವಾಸ್ತು ಅಳವಡಿಕೆ ಹೇಗೆ ? : ನಗರ ಮತ್ತು ಮಹಾನಗರಗಳಲ್ಲಿ ಇತ್ತೀಚೆಗೆ ಬಹುಮಹಡಿ ವಸತಿ ಸಮುಚ್ಛಯ (ಅಪಾರ್ಟ್​ವೆುಂಟ್) ನಿರ್ಮಾಣ ಹೆಚ್ಚಾಗಿದೆ. ಯಾವುದೇ ಕಟ್ಟಡ ವಾಸದ ಉದ್ದೇಶದಿಂದ ಬಳಸುವುದಾದರೆ ಅಲ್ಲಿ ವಾಸ್ತು ವಿನ್ಯಾಸಕ್ಕೆ ಅಳವಡಿಸುವುದು ಕಡ್ಡಾಯ. ಒಂದು ಸಾಮಾನ್ಯ ಇಂಡಿಪೆಂಡೆಂಟ್ ಮನೆ ನಿರ್ವಣದ ಸಂದರ್ಭದಲ್ಲಿ ವಾಸ್ತು ವಿಜ್ಞಾನವನ್ನು ಅಳವಡಿಸುವ ರೀತಿಯಲ್ಲೇ ಅಪಾರ್ಟ್​ವೆುಂಟ್​ಗಳ ನೀಲಿನಕ್ಷೆಯನ್ನು ಸುಲಲಿತವಾಗಿ ವಾಸ್ತುಪ್ರಕಾರ ವಿನ್ಯಾಸಗೊಳಿಸಿ ನಿರ್ವಿುಸುವುದಕ್ಕೆ ಸಾಧ್ಯವಿದೆ. ಹೀಗೆ ನಿರ್ವಿುಸುವುದರಿಂದ ಸಮಾಜಕ್ಕೂ ಅನುಕೂಲ, ಕಟ್ಟಡದ ನಿರ್ವತೃಗೆ ಒಳ್ಳೆಯ ಹೆಸರೂ ಬರುತ್ತದೆ. ಬಹಳಷ್ಟು ಜನ ಅಪಾರ್ಟ್​ವೆುಂಟ್​ಗಳಿಗೆ ವಾಸ್ತು ಅಗತ್ಯವಿಲ್ಲ ಎಂಬ ತಪು್ಪ ಕಲ್ಪನೆಯಲ್ಲಿದ್ದು, ವಾಸ್ತು ಅಳವಡಿಸದಿರುವುದರ ಹಿಂದಿನ ಕಾರಣ ತಿಳಿಯುತ್ತಿಲ್ಲ.
ಮನೆಯ ಒಗ್ಗಟ್ಟಿನ ಗುಟ್ಟು ಬೆಳಕಿಂಡಿ !: ಹಿಂದಿನ ಕಾಲದಲ್ಲಿ ಪ್ರತಿ ಮನೆಗೂ ಬೆಳಕಿಂಡಿಯನ್ನು ಇಡುತ್ತಿದ್ದರು. ಆದರೆ, ಇತ್ತೀಚೆಗೆ ಬೆಳಕಿಂಡಿ ಪರಿಕಲ್ಪನೆ ಕಣ್ಮರೆಯಾಗುತ್ತಿದೆ. ಬೆಳಕಿಂಡಿಯು ಮನೆಗೆ ಬ್ರಹ್ಮಸ್ಥಾನವಿದ್ದಂತೆ. ಬ್ರಹ್ಮನಿಗೆ ನಾಲ್ಕು ತಲೆಗಳಿದ್ದು, ಎಲ್ಲವೂ ಹೇಗೆ ಒಂದಕ್ಕೊಂದು ಅಂಟಿಕೊಂಡಿರುತ್ತವೆಯೋ ಹಾಗೆ ಬೆಳಕಿಂಡಿ ಇರುವ ಮನೆಯ ಸದಸ್ಯರಲ್ಲಿ ಒಗ್ಗಟ್ಟು ಇರುತ್ತದೆ. ಮತ್ತು ವಿದ್ಯಾದೇವತೆ ಸರಸ್ವತಿಯ ಕೃಪೆಯನ್ನು ಇದು ಒದಗಿಸುತ್ತದೆ. ಆದ್ದರಿಂದ ಆಧುನಿಕ ಮನೆ ನಿರ್ವಣದಲ್ಲೂ ವೈಜ್ಞಾನಿಕವಾಗಿ ಬೆಳಕಿಂಡಿಯನ್ನು ವಿನ್ಯಾಸಗೊಳಿಸುವುದು ಅಗತ್ಯ ಮತ್ತು ಸಾಧ್ಯ.(ಲೇಖಕರು ಸುಪ್ರಸಿದ್ಧ ವಾಸ್ತು ಶಾಸ್ತ್ರಜ್ಞರು)