Hanuman 
ಧಾರ್ಮಿಕ

ಮನೆಯಲ್ಲಿ ತೊಂದರೆ ಮತ್ತು ಸಮಸ್ಯೆ ದೂರ ಮಾಡಲು ಹನುಮಂತನ ಫೋಟೋ ಈ ದಿಕ್ಕಿನಲ್ಲಿ ಇರಿಸಿ! | Hanuman

ಪ್ರಮುಖ ಮುಖ್ಯಾಂಶಗಳು

  • ಶ್ರೀರಾಮನ ಪರಮ ಭಕ್ತನಾದ ಹನುಮನನ್ನು ಪೂಜೆ ಮಾಡಿ
  • ಹನುಮಂತನ ಚಿತ್ರವನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತೆ
ಬೆಂಗಳೂರು: ಹಿಂದು ಧರ್ಮದಲ್ಲಿ, ಶ್ರೀರಾಮನ ಪರಮ ಭಕ್ತನಾದ ಹನುಮನನ್ನು ನಿಜವಾದ ಹೃದಯದಿಂದ ಮತ್ತು ಸರಿಯಾದ ರೀತಿಯಲ್ಲಿ ಪೂಜಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಮನೆಯಲ್ಲಿ ಹನುಮಂತನ ಚಿತ್ರವನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಬಹುದು.
ಮನೆಯಲ್ಲಿ ತೊಂದರೆ, ಜಗಳ, ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ, ಶತ್ರು ಉಪಟಳ, ಭಯ-ಭೀತಿ ಇದ್ದರೆ ಹನುಮಂತನ ಚಿತ್ರ/ಮೂರ್ತಿಯನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಬೇಕು ಎಂದು ವಾಸ್ತು ಮತ್ತು ತಾಂತ್ರಿಕ ಶಾಸ್ತ್ರಗಳು ಸ್ಪಷ್ಟವಾಗಿ ಹೇಳುತ್ತವೆ.

ಎಲ್ಲಿ ಇಡಬೇಕು?

ಮನೆಯ ದಕ್ಷಿಣ ಗೋಡೆಯಲ್ಲಿ (ಮುಖ್ಯ ಬಾಗಿಲಿನ ಎದುರು ಅಥವಾ ಬದಿಯಲ್ಲಿ). ಎತ್ತರದಲ್ಲಿ ಇಡಿ (ಕಣ್ಣಿಗೆ ಸಿಗುವ ಎತ್ತರಕ್ಕಿಂತ ಸ್ವಲ್ಪ ಮೇಲೆ). ಚಿತ್ರದ ಕೆಳಗೆ ಸಣ್ಣ ದೀಪವನ್ನು ದಿನವೂ ಹಚ್ಚಿ (ಅಥವಾ ಕನಿಷ್ಠ ಮಂಗಳವಾರ-ಶನಿವಾರ ಹಚ್ಚಿ).

ಯಾಕೆ ದಕ್ಷಿಣ ದಿಕ್ಕು?

ದಕ್ಷಿಣ ದಿಕ್ಕಿನ ಅಧಿದೇವತೆ ಯಮಧರ್ಮರಾಜ.ಆದರೆ ಯಮನಿಗಿಂತ ಶಕ್ತಿಶಾಲಿಯಾದ, ಯಮನಿಗೂ ಭಯವಿರುವ ಏಕೈಕ ದೇವರು ಹನುಮಾನ್ (ಏಕೆಂದರೆ ಹನುಮಾನ್ ಚಿರಂಜೀವಿ, ಮಹಾವೀರ, ಮೃತ್ಯುಂಜಯ). ಹನುಮಾನ್ ದಕ್ಷಿಣಮುಖವಾಗಿ ನಿಂತಾಗ ಎದುರಿಗೆ ಯಮ ದಿಕ್ಕು ಬರುತ್ತದೆ. ಇದರಿಂದ ನೆಗೆಟಿವ್ ಶಕ್ತಿ, ಪಿಶಾಚಿ, ಶತ್ರು, ದೃಷ್ಟಿ, ಕೆಟ್ಟ ದೆವ್ವಗಳು ಮನೆಗೆ ಬರಲಾರವು. ಅವೆಲ್ಲ ಭಯದಿಂದ ಓಡಿಹೋಗುತ್ತವೆ ಎಂಬ ನಂಬಿಕೆ ಇದೆ.

ಈ ಪಠಣ ಪಠಿಸಿ

ಹನುಮಾನ್ ಚಿತ್ರದ ಮುಂದೆ ನಿಂತು ಈ ಮಂತ್ರವನ್ನು ೭ ಬಾರಿ ಹೇಳಿ:"ಓಂ ಏಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೈ, ಓಂ ನಮೋ ಹನುಮತೇ ರುದ್ರಾತ್ಮಕಾಯ, ಹುಂ ಫಟ್ ಸ್ವಾಹಾ... ಪವನಪುತ್ರ ಹನುಮಾನ್, ಎಲ್ಲ ಕೆಟ್ಟ ಶಕ್ತಿಯನ್ನು ದೂರ ಮಾಡಿ ರಕ್ಷಣೆ ಮಾಡು ಎಂದು ಪ್ರಾರ್ಥಿಸುತ್ತೇನೆ." ಎಂದು ಪಠಿಸಿ,(ಏಜೆನ್ಸೀಸ್​)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.