ನಿಮ್ಮ ಮನೆಯಲ್ಲಿ ಯಾವುದಾದ್ರೂ ನೆಗೆಟಿವ್​ ಎನರ್ಜಿ ಇದೆಯೇ? ಕೇವಲ ನೀರನ್ನು ಬಳಸಿ ಪತ್ತೆಹಚ್ಚಬಹುದು! ಹೇಗೆ ಗೊತ್ತಾ? Ghost 
ಧಾರ್ಮಿಕ

ನಿಮ್ಮ ಮನೆಯಲ್ಲಿ ಯಾವುದಾದ್ರೂ ನೆಗೆಟಿವ್​ ಎನರ್ಜಿ ಇದೆಯೇ? ಕೇವಲ ನೀರನ್ನು ಬಳಸಿ ಪತ್ತೆಹಚ್ಚಬಹುದು! ಹೇಗೆ ಗೊತ್ತಾ? Ghost

ಪ್ರಮುಖ ಮುಖ್ಯಾಂಶಗಳು

  • ಮನೆಯಲ್ಲಿ ದೆವ್ವ ಅಥವಾ ನಕಾರಾತ್ಮಕ ಶಕ್ತಿ ಇರುವುದನ್ನು ಪತ್ತೆಹಚ್ಚುವ ವಿಚಿತ್ರ ವಿಧಾನದ ವಿಡಿಯೋ ವೈರಲ್
  • ಒಂದು ಗ್ಲಾಸ್ ನೀರು ಮತ್ತು ಉಪ್ಪನ್ನು ಬಳಸಿ ಮನೆಯಲ್ಲಿ ಆತ್ಮಗಳ ಉಪಸ್ಥಿತಿಯನ್ನು ಗುರುತಿಸುವುದು ಹೇಗೆ?
  • ಯಾರೂ ಮುಟ್ಟದಂತೆ ಒಂದು ಮೂಲೆಯಲ್ಲಿ ಏಳು ದಿನಗಳ ಕಾಲ ಉಪ್ಪು ನೀರನ್ನು ಇಡುವ ಪ್ರಾಚೀನ ವಿಧಾನ
  • ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಇಲ್ಲದಿದ್ದರೆ ಏಳು ದಿನಗಳ ನಂತರವೂ ನೀರು ಸ್ಪಷ್ಟವಾಗಿರುವುದು
  • ನಕಾರಾತ್ಮಕ ಶಕ್ತಿ ಇದ್ದರೆ ನೀರಿನ ಬಣ್ಣ ಬದಲಾಗಿ ಮೇಲ್ಮೈಯಲ್ಲಿ ವಿಚಿತ್ರ ಮಾದರಿಗಳು ಕಾಣಿಸಿಕೊಳ್ಳುವುದು
Ghost : ದೆವ್ವ, ಆತ್ಮ ಅಥವಾ ನಕಾರಾತ್ಮಕ ಶಕ್ತಿ ಇದು ಸಾಮಾನ್ಯವಾಗಿ ಕೇಳುವ ಪದಗಳು. ಕೆಲವರು ಇದನ್ನು ನಂಬಿದರೆ, ಇನ್ನು ಕೆಲವರು ನಂಬುವುದಿಲ್ಲ. ಕೆಲವರು ಇದನ್ನು ಅನುಭವಿಸಿದ್ದೇವೆ ಎಂದು ಹೇಳುತ್ತಾರೆ. ಇನ್ನು ಕೆಲವರು ನಾವು ದೆವ್ವಗಳನ್ನು ನೋಡಿದ್ದೇವೆ ಎನ್ನುತ್ತಾರೆ. ಆದರೆ, ದೆವ್ವಗಳು ಇವೆ ಅನ್ನೋದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೂ ಇಂದಿಗೂ ಅವಗಳ ಉಪಸ್ಥಿತಿಯನ್ನು ನಂಬುತ್ತಲೇ ಇದಾರೆ.
ದೆವ್ವ ಅಥವಾ ಭೂತಗಳಿಗೆ ಸಂಬಂಧಿಸಿದ ಅನೇಕ ಸಿನಿಮಾಗಳನ್ನು ನಾವು ನೋಡಿದ್ದೇವೆ. ಭೂಮಿಯ ಮೇಲೆ ವಾಸಿಸಿ ತಮ್ಮ ಆಸೆಗಳು ಈಡೇರದೇ ಸತ್ತವರ ಆತ್ಮಗಳು ದೆವ್ವಗಳಾಗಿ ಅಲೆದಾಡುತ್ತವೆ ಎಂದು ನಂಬಲಾಗಿದೆ. ಅದು ಏನೇ ಇರಲಿ, ನಿಜವಾಗಿಯೂ ದೆವ್ವ ಇದೆಯೇ? ಈ ಪ್ರಶ್ನೆಗಳು ಬಹಳ ಇಂದಿನಿಂದಲೂ ಕೇಳಿಕೊಂಡು ಬರಲಾಗುತ್ತಿದೆ. ಈ ಬಗ್ಗೆ ಇಂದಿಗೂ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಒಂದು ವೇಳೆ ದೆವ್ವ ಇದ್ದಲ್ಲಿ ನಾವು ಅದನ್ನು ಹೇಗೆ ಗುರುತಿಸಬಹುದು? ಈ ಪ್ರಶ್ನೆಗೆ ಉತ್ತರ ನೀಡುವಂತಹ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.
ಪ್ರಾಚೀನ ಕಾಲದಲ್ಲಿ ದೆವ್ವವನ್ನು ಪತ್ತೆಹಚ್ಚಲು ಬಳಸುತ್ತಿದ್ದ ಒಂದು ವಿಧಾನದ ಕುರಿತಾದ ವಿಡಿಯೋ ಪ್ರಸ್ತುತ ವೈರಲ್​ ಆಗಿದೆ. ಆ ವಿಧಾನ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಚರ್ಚಿಸಲಾಗುತ್ತಿದೆ. ನಿಮ್ಮ ಮನೆಯಲ್ಲಿ ಒಂದು ಲೋಟ ನೀರು ಮತ್ತು ಉಪ್ಪನ್ನು ಬಳಸಿ ನಕಾರಾತ್ಮಕ ಶಕ್ತಿಯನ್ನು ಗುರುತಿಸಬಹುದು ಎಂದು ಈ ವಿಡಿಯೋ ಹೇಳುತ್ತದೆ. ಅಂದಹಾಗೆ, ವಿಡಿಯೋವನ್ನು 'christianrealfacts' ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಳ್ಳಲಾಗಿದೆ.
ಮನೆಯಲ್ಲಿ ದೆವ್ವ ಅಥವಾ ಇತರ ನಕಾರಾತ್ಮಕ ಶಕ್ತಿ ಇದೆಯೇ ಎಂದು ತಿಳಿಯಲು, ಮೊದಲು ಅರ್ಧ ಗ್ಲಾಸ್ ನೀರು ತೆಗೆದುಕೊಳ್ಳಿ. ಅದಕ್ಕೆ ಒಂದು ಚಿಟಿಕೆ ಉಪ್ಪು ಸೇರಿಸಿ ಮನೆಯ ಒಂದು ಮೂಲೆಯಲ್ಲಿ ಇರಿಸಿ. ಯಾರೂ ಆ ಗ್ಲಾಸ್ ಅನ್ನು ಅಲುಗಾಡಿಸಬಾರದು ಅಥವಾ ಮುಟ್ಟಬಾರದು. ಇದನ್ನು ಏಳು ದಿನಗಳವರೆಗೆ ಹೀಗೆ ಇಡಬೇಕು.
ನಿಮ್ಮ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಇಲ್ಲದಿದ್ದರೆ, ಈ ನೀರು ಏಳು ದಿನಗಳ ನಂತರವೂ ಸ್ಪಷ್ಟವಾಗಿರುತ್ತದೆ. ಆದರೆ, ನಕಾರಾತ್ಮಕ ಶಕ್ತಿ ಇದ್ದರೆ, ಈ ನೀರಿನಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಅದರ ಬಣ್ಣ ಬದಲಾಗುತ್ತದೆ. ನೀರಿನ ಮೇಲ್ಮೈಯಲ್ಲಿ ವಿಚಿತ್ರ ಮಾದರಿಗಳು ಸಹ ಕಾಣಿಸಿಕೊಳ್ಳಬಹುದು. ಹಿಂದೆ, ಮನೆಯಲ್ಲಿ ದೆವ್ವ ಅಥವಾ ನಕಾರಾತ್ಮಕ ಶಕ್ತಿ ಇದೆಯೇ ಎಂದು ಗುರುತಿಸಲು ಜನರು ಈ ವಿಧಾನವನ್ನು ಬಳಸುತ್ತಿದ್ದರು' ಎಂದು ವೈರಲ್​ ವಿಡಿಯೊ ಹೇಳುತ್ತದೆ, (ಏಜೆನ್ಸೀಸ್​).