Extraordinary qualities of September-born babies 
ಧಾರ್ಮಿಕ

ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದವರ ವ್ಯಕ್ತಿತ್ವ ಹೇಗಿರುತ್ತದೆ?; ಇಲ್ಲಿದೆ ಆಸಕ್ತಿದಾಯಕ ಸಂಗತಿಗಳು!..September-born babies

ಮಮತಾ

ಪ್ರಮುಖ ಮುಖ್ಯಾಂಶಗಳು

  • ಸೆಪ್ಟೆಂಬರ್‌ನಲ್ಲಿ ಜನಿಸಿದವರು ಕನ್ಯಾ ಮತ್ತು ತುಲಾ ರಾಶಿಗೆ ಸೇರುತ್ತಾರೆ
  • ಸೆಪ್ಟೆಂಬರ್‌ನಲ್ಲಿ ಜನಿಸಿದವರು ಸ್ವಭಾವತಃ ಬಹಿರ್ಮುಖಿಗಳು
  • ಬೇಸರದಿಂದ ದೂರವಿರಲು ಸದಾ ಹೊಸ ದಾರಿಗಳನ್ನು ಹುಡುಕುತ್ತಾ ಚುರುಕಾಗಿರುತ್ತಾರೆ.
Extraordinary qualities of September-born babies: ಹಿಂದೂ ಧರ್ಮದಲ್ಲಿ ಸಂಖ್ಯಾಶಾಸ್ತ್ರಕ್ಕೆ ವಿಶೇಷ ಸ್ಥಾನವಿದೆ. ಇದರ ಪ್ರಕಾರ, ಅನೇಕ ಜನರು ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಈಗ ಸಂಖ್ಯಾಶಾಸ್ತ್ರದ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದವರ ವ್ಯಕ್ತಿತ್ವದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಸೆಪ್ಟೆಂಬರ್​ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು  ಕನ್ಯಾ ಮತ್ತು ತುಲಾ ರಾಶಿಗೆ ಸೇರುತ್ತಾರೆ . ಸೆಪ್ಟೆಂಬರ್ 22ರವರೆಗೆ ಜನಿಸಿದವರು ಕನ್ಯಾರಾಶಿಯವರಾದರೆ, ಆ ನಂತರ ಜನಿಸಿದವರು ತುಲಾರಾಶಿಯವರಾಗುತ್ತಾರೆ. ಪ್ರತಿ ತಿಂಗಳಂತೆ ಸೆಪ್ಟೆಂಬರ್‌ನಲ್ಲಿ ಹುಟ್ಟಿದವರಿಗೂ ತಮ್ಮದೇ ಆದ ವಿಶಿಷ್ಟ ಗುಣಲಕ್ಷಣಗಳಿದ್ದು, ಇದು ಇವರನ್ನು ಇತರರಿಗಿಂತ ಭಿನ್ನವಾಗಿರಿಸುತ್ತದೆ.

 ಎಕ್ಸ್ಟ್ರೋವರ್ಟ್ಸ್​​

ಸೆಪ್ಟೆಂಬರ್‌ನಲ್ಲಿ ಜನಿಸಿದ ಮಕ್ಕಳು ಸ್ವಭಾವತಃ ಬಹಿರ್ಮುಖಿಗಳಾಗಿರುತ್ತಾರೆ. ಇವರು ಇತರರೊಂದಿಗೆ ಬೆರೆಯುವಾಗ ಎಂದಿಗೂ ಮುಜುಗರ ಪಟ್ಟುಕೊಳ್ಳುವುದಿಲ್ಲ. ವಿಶಾಲವಾದ ಸ್ನೇಹಿತರ ಬಳಗವನ್ನು ಹೊಂದಿರುವ ಇವರು, ಜನರ ಮಧ್ಯೆ ಇರಲು ಹೆಚ್ಚು ಇಷ್ಟಪಡುತ್ತಾರೆ. ನಿಮ್ಮ ಸೆಪ್ಟೆಂಬರ್ ತಿಂಗಳ ಮಗು ಹೆಚ್ಚು ಸ್ನೇಹಿತರನ್ನು ಬೆರೆಯುತ್ತಾರೆ. ಇದು ಕೆಲವೊಮ್ಮೆ ನಿಮಗೆ ಕಿರಿಕಿರಿ ಉಂಟು ಮಾಡಬಹುದು.

ಎಲ್ಲದರಲ್ಲಿಯೂ ಪರ್ಫೆಕ್ಟ್

ಪ್ರಸಿದ್ಧ ಜ್ಯೋತಿಷಿ ಬೆಜನ್ ದಾರುವಾಲಾ ಅವರ ವೆಬ್‌ಸೈಟ್‌ನಲ್ಲಿರುವ ಬ್ಲಾಗ್ ಪೋಸ್ಟ್ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಜನಿಸಿದವರು ಎಲ್ಲ ಕೆಲಸದಲ್ಲಿಯೂ ಅಚ್ಚುಕಟ್ಟಾಗಿ ಇರುತ್ತಾರೆ.  ತಮ್ಮ ಕೆಲಸವನ್ನು ಯಾವಾಗಲೂ ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತಾರೆ ಮತ್ತು ಕೆಲಸ ಮುಗಿಯುವವರೆಗೆ ಬಿಡೋದಿಲ್ಲ ಕೆಲಸವು ಸಮಯಕ್ಕೆ ಸರಿಯಾಗಿ ಪರಿಪೂರ್ಣತೆಯಿಂದ ಆಗಬೇಕೆಂದು ಬಯಸುತ್ತಾರೆ.
ಯಾವಾಗಲೂ ಚುರುಕಾಗಿರುತ್ತಾರೆ 
ಬೇಸರ ಮತ್ತು ಏಕತಾನತೆಯು ಇವರ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಇವರಿಗೆ ಬೇಗನೆ ಬೇಸರವಾಗುವುದರಿಂದ, ಯಾವಾಗಲೂ ಆಸಕ್ತಿದಾಯಕ ಮತ್ತು ಹೊಸ ವಿಷಯಗಳನ್ನು ಹುಡುಕುತ್ತಿರುತ್ತಾರೆ. ಅತಿ ಹೆಚ್ಚು ಚುರುಕಾಗಿರುವ ಈ ವ್ಯಕ್ತಿಗಳು ತಾವು ಇರುವ ಸ್ನೇಹಿತರ ಗುಂಪಿಗೆ ಹೊಸ ಚೈತನ್ಯವನ್ನು ತರುತ್ತಾರೆ. 

ಪೊಲೈಟ್ ಸ್ವಭಾವದವರು

ಸೆಪ್ಟೆಂಬರ್​ನಲ್ಲಿ ಜನಿಸಿದವರ ಅದ್ಭುತ ಗುಣ ಎಂದರೆ ಬಹುತೇಕ ಸೌಮ್ಯವಾಗಿ ಮಾತನಾಡುವ ಸ್ವಭಾವದವರು. ಹೊಸದನ್ನು ಮಾಡಬೇಕೆಂಬ ಹಂಬಲ ಹಾಗೂ ಎಲ್ಲದರಲ್ಲೂ ಪರಿಪೂರ್ಣರಾಗಬೇಕೆಂಬ ತುಡಿತವೇ ಇವರನ್ನು ಹೆಚ್ಚು ವಿನಮ್ರರನ್ನಾಗಿ ಮಾಡುತ್ತದೆ.

ಪುಸ್ತಕ ಪ್ರೇಮಿಗಳು

ಸೆಪ್ಟೆಂಬರ್‌ನಲ್ಲಿ ಜನಿಸಿದ ಮಕ್ಕಳಿಗೆ ಪುಸ್ತಕಗಳೆಂದರೆ ಅಚ್ಚುಮೆಚ್ಚು. ಇದರೊಂದಿಗೆ ಅವರ ಹುಟ್ಟುಹಬ್ಬಕ್ಕೆ ಒಂದು ಉಡುಗೊರೆಯ ಕಲ್ಪನೆಯೂ ಸಿಕ್ಕಂತಾಗಿದೆ. ಇವರು ಸಾಕಷ್ಟು ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತಾರೆ ಮತ್ತು ಓದುವುದರಿಂದ ಎಂದಿಗೂ ವಿರಾಮ ತೆಗೆದುಕೊಳ್ಳುವುದಿಲ್ಲ. ಇವರಿಗೆ ಬೇಕಾದಷ್ಟು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರೆ ನೀವು ಇವರ ಅಚ್ಚುಮೆಚ್ಚಿನ ವ್ಯಕ್ತಿಯಾಗಬಹುದು, (ಏಜೆನ್ಸೀಸ್).

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.