Dried Tulsi Plant At Home dontThrowing It Away  
ಧಾರ್ಮಿಕ

ಒಣಗಿದ ತುಳಸಿ ಸಸ್ಯವನ್ನು ಕಸಕ್ಕೆ ಬಿಸಾಡಬೇಡಿ; ಈ ಪವಿತ್ರ ಕ್ರಮವನ್ನು ಅನುಸರಿಸಿ..DontThrow Dried Tulsi Plant

Dried Tulsi Plant Remedies: ಭಾರತೀಯ ಹಿಂದೂ ಸಂಪ್ರದಾಯದಲ್ಲಿ ತುಳಸಿ ಒಂದು ಪವಿತ್ರ ಗಿಡ, ಇಲ್ಲಿನ ಹಿಂದೂಗಳ ಮನೆಯ ಮುಂದೆ ತುಳಸಿ ಕಟ್ಟೆ ಪ್ರತಿಷ್ಠಾಪನೆಯಾಗಿರುತ್ತದೆ. ಇದನ್ನು ಮಹಾಲಕ್ಷ್ಮಿಯ ಸ್ವರೂಪ ಎಂದು ಕಾಣಲಾಗುತ್ತದೆ. ಸಸ್ಯ ಹಚ್ಚ ಹಸಿರಾಗಿರುವಂತೆ ನೋಡಿಕೊಳ್ಳಬೇಕು, ಕೆಲವೊಮ್ಮೆ ಕಾರಣಾಂತರಗಳಿಂದ ಒಣಗಿ(Dried Tulsi Plant)ಹೋದಾಗ ನಾವು ಸಸ್ಯವನ್ನು ಬಿಸಾಡುತ್ತೇವೆ, ಅಥವಾ ಗೊಬ್ಬರಕ್ಕೆ ಹಾಕಿ ಬಿಡುತ್ತೇವೆ. ಆದರೆ ಇದು ತಪ್ಪು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಹೌದು ಪಾಟ್​​ನಲ್ಲೇ ಒಣಗಿದ ತುಳಸಿಯನ್ನು ಬಿಸಾಡದೆ ಅದರಿಂದ ಹಾರ ತಯಾರಿಸಿಕೊಳ್ಳುವುದೋ, ಪೂಜಾ ಕೋಣೆ, ಹೋಮಕ್ಕೆ ಬಳಕೆ ಬತ್ತಿ ತಯಾರಿಸಲು ಬಳಕೆ ಮಾಡಿಕೊಳ್ಳಲು ಉಪಯೋಗಿಸಿಕೊಳ್ಳಬಹುದು ಎನ್ನಲಾಗಿದೆ.

ಬತ್ತಿ ತಯಾರಿಸಿ

ಒಣಗಿದ ತುಳಸಿಯನ್ನು ಬಳಕೆ ಮಾಡಿಕೊಂಡು ದೀಪಕ್ಕೆ ಬತ್ತಿ ತಯಾರಿಸಿ, ನಂತರ ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡುವುದರಿಂದ ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳು ದೂರವಾಗಿ ಶಾಂತಿ ನೆಲೆಸುತ್ತದೆ ಹಾಗೂ ಮನೆಯಲ್ಲಿ ಧನಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ ಎನ್ನಲಾಗಿದೆ.

ಪೂಜಾ ಮನೆಯಲ್ಲಿ ಇಡಿ

ತುಳಸಿ ಒಣಗಿದರು ಅದರಲ್ಲಿರುವ ದೈವಾತ್ಮಕ ಶಕ್ತಿಯು ಎಂದಿಗೂ ಕುಂದುವುದಿಲ್ಲ. ಹೀಗಾಗಿ ಒಂದು ಕೆಂಪು ಬಟ್ಟೆಯಲ್ಲಿ ಕಡ್ಡಿ ಮತ್ತು ಒಣಗಿದ ಎಲೆಯನ್ನು ಇಟ್ಟು ಕೋಣೆಯಲ್ಲಿ ನೇತು ಹಾಕಿ ಇದರಿಂದ ದೇವರ ಕೃಪೆ ನಿಮ್ಮ ಮೇಲೆ ಇರಲಿದೆ.

ಹೋಮ-ಹವನಕ್ಕೆ ಬಳಕೆ ಮಾಡಿ

ಒಣಗಿದ ತುಳಸಿಯಲ್ಲಿ ತನ್ನದೇ ಆದ ಋಣಾತ್ಮಕ ಅಂಶಗಳಿರುತ್ತದೆ. ಅದನ್ನು ಕಸದಕ್ಕೆ ಬಿಸಾಡದೆ ಹೋಮ-ಹವನಕ್ಕೆ ಬಳಕೆ ಮಾಡುವುದರಿಂದ ಮನೆಯಲ್ಲಿ ಕಾಡುವ ಮಾನಸಿಕ ಸಮಸ್ಯೆ, ಗಲಾಟೆಗೆ ಪರೋಕ್ಷವಾಗಿ ಮುಕ್ತಿ ನೀಡುತ್ತದೆ. ಹೋಮ-ಹವನದ ಹೊಗೆ ಜೊತೆ ನಹೊರಬಂದ ಒಣಗಿದ ತುಳಸಿ ಸುಟ್ಟ ಹೊಗೆ ಪರಿಸರವನ್ನು ಪವಿತ್ರಗೊಳಿಸುತ್ತದೆ.

ಮನೆ ಬಾಗಿಲಲ್ಲಿ ಇಡಿ

ಒಣಗಿದ ತುಳಸಿಯ ಗಟ್ಟಿ ಕಾಂಡವನ್ನು ಮನೆಯ ಮುಖ್ಯದ್ವಾರದ ಬಳಿ ಇಡುವುದರಿಂದ ಕೆಟ್ಟ ದೃಷ್ಟಿಗಳು ಅಥವಾ ದೃಷ್ಟಿದೋಷ ನಿಮ್ಮನ್ನು ಕಾಡೋದಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆಯಾಗಿದೆ, (ಏಜೆನ್ಸೀಸ್​).