ತೀರಿಸದ ಸಾಲಗಳು, ಹಳೆಯ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ ಬಾಕಿಗಳು ಒತ್ತಡ, ಆತಂಕಕ್ಕೆ ಕಾರಣ.
ಬಿಳಿ ಅಥವಾ ಹಳದಿ ಕಾಗದದಲ್ಲಿ ಕುಂಕುಮದಿಂದ ಸ್ವಸ್ತಿಕ ಬಿಡಿಸಿ ಪರ್ಸ್, ಹಣ ಇಡುವ ಜಾಗದಲ್ಲಿ ಇಡಿ.
ಶುಕ್ರವಾರ, ಗುರುವಾರ ಅಥವಾ ಶುಭ ಮುಹೂರ್ತದಲ್ಲಿ ಇದನ್ನು ಮಾಡಬಹುದು.
Swastika Symbol For Money: ದುಬಾರಿ ದುನಿಯಾದಲ್ಲಿ..ಎಷ್ಟೇ ಹಣ ಸಂಪಾದನೆ ಮಾಡಿದರೂ ಸಹ ಯಾವುದು ಕೈಯಲ್ಲಿ ಉಳಿಯುತ್ತಿಲ್ಲ. ಮುಂದಿನ ಭವಿಷ್ಯಕ್ಕೆ ಹಣ ಸೇವಿಂಗ್ ಮಾಡೋದು ಹೇಗೆ ಎನ್ನುವುದು ಪ್ರತಿಯೊಬ್ಬ ಮಧ್ಯಮ ವರ್ಗದ ಜನರ ಮನಸ್ಥಿತಿ. ತೀರಿಸದ ಸಾಲಗಳು ಒತ್ತಡ, ಆತಂಕ ಮತ್ತು ಗೊಂದಲದ ಭಾವನೆಗಳನ್ನು ಹುಟ್ಟುಹಾಕಬಹುದು. ಹಳೆಯ ಸಾಲಗಳು, ಬಾಕಿ ಇರುವ ಬಿಲ್ಗಳು, ತಡವಾದ ಕ್ರೆಡಿಟ್ ಕಾರ್ಡ್ ಪಾವತಿಗಳು ಮತ್ತು ಇತರರಿಗೆ ಸಾಲವಾಗಿ ನೀಡಿದ ಹಣವು ಜೀವನದಲ್ಲಿ ಅಸಮಾಧಾನ ಹಾಗೂ ತೊಂದರೆಗಳನ್ನು ಉಂಟುಮಾಡಬಹುದು.
ಹುಟ್ಸಿದ್ ದ್ಯಾವ್ರು ಉಲ್ಲನ್ನಂತು ಮೇಯ್ಸಲ್ಲ ಎನ್ನುವ ಗಾದೆ ಮಾತಿನ ಪ್ರಕಾರ ಎಲ್ಲದಕ್ಕೂ ಪರಿಹಾರ ಇದ್ದೇ ಇರುತ್ತದೆ. ಅದರಂತೆ ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಣಕಾಸು ಪದ್ಧತಿಗಳಲ್ಲಿ ಜಾಗೃತಿ ಮೂಡಿಸಲು ಮತ್ತು ರಕ್ಷಣೆ ಕೋರಲು ಚಿಹ್ನೆಗಳನ್ನು ಬಳಸಲಾಗುತ್ತದೆ. ಅದುವೇ ಸ್ವಸ್ತಿಕ ಚಿಹ್ನೆ. ಇದು ಹಣವನ್ನು ರಕ್ಷಿಸುವುದಕ್ಕೆ ಸಂಬಂಧಿಸಿದೆ.
ಭಾರತದಲ್ಲಿ ಹಲವರು ಹಣ ಸೇವಿಂಗ್ಸ್ಗೆ ಸ್ವಸ್ತಿಕ್ ಚಿಹ್ನೆ ಅದೃಷ್ಟ ಎನ್ನುತ್ತಾರೆ. ಹಣ ಇಡುವ ಸ್ಥಳಗಳಲ್ಲಿ ಸ್ವಸ್ತಿಕ ಚಿಹ್ನೆ ಸಾಮಾನ್ಯವಾಗಿ ಕಂಡುಬರುತ್ತದೆ.ನಗದು ಇಡುವ ಅಂಗಡಿಗಳು, ಖಾತೆ ಪುಸ್ತಕಗಳು ಹಾಗೂ ವಾಣಿಜ್ಯ ಸಂಸ್ಥೆಗಳು ಮತ್ತು ನಿವಾಸಗಳ ಪ್ರವೇಶದ್ವಾರಗಳಲ್ಲಿ ಇದು ಇರುತ್ತದೆ. ಸ್ವಸ್ತಿಕ ಹಣವನ್ನು ಹಣವನ್ನು ನಕಾರಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ ಎನ್ನುವ ನಂಬಿಕೆ ಪೂರ್ವಜರ ಕಾಲದಿಂದಲೂ ಇದೆ.
ಸ್ವಸ್ತಿಕ ಚಿಹ್ನೆಯು ಸ್ವಯಂ-ಶಿಸ್ತು ಪಾಲಿಸಲು, ಅನಗತ್ಯ ಖರ್ಚುಗಳನ್ನು ಮಿತಿಗೊಳಿಸಲು, ಪಾವತಿಸದ ಕ್ರೆಡಿಟ್ ಕಾರ್ಡ್ ಸಾಲವನ್ನು ನಿಭಾಯಿಸಲು ಯೋಜನೆ ರೂಪಿಸಲು ಮತ್ತು ಹಣವನ್ನು ಗೌರವದಿಂದ ಕಾಣಲು ನೆನಪಿಸುವ ಸಾಧನವಾಗಿದೆ. ಸ್ವಸ್ತಿಕ ಚಿಹ್ನೆಯು ತಾನಾಗಿಯೇ ಬಿಲ್ ಪಾವತಿಸುವ ಮಾಂತ್ರಿಕ ವಿಧಾನವಲ್ಲದಿದ್ದರೂ, ಹಣದ ಬಗ್ಗೆ ತಮ್ಮ ಮನೋಭಾವ ಮತ್ತು ನಡವಳಿಕೆಯನ್ನು ಬದಲಾಯಿಸಿಕೊಳ್ಳುವುದರಿಂದ ಅದರ ಪರಿಣಾಮಕಾರಿತ್ವವನ್ನು ಹೆಚ್ಚಿಸಬಹುದು.
ಸಂಪತ್ತಿನ ಸಂಕೇತವಾಗಿ ಸ್ವಸ್ತಿಕ ಚಿಹ್ನೆ ಬಳಕೆ
ಪರ್ಸ್ಗಾಗಿ ಈ ಚಿಹ್ನೆಯನ್ನು ಬಳಸುವ ವಿಧಾನ
ಹೊಸ ಬಿಳಿ ಅಥವಾ ಹಳದಿ ಕಾಗದವನ್ನು ತೆಗೆದುಕೊಂಡು, ಅದರ ಮೇಲೆ ಕೆಂಪು ಶಾಯಿ ಅಥವಾ ಕುಂಕುಮದಿಂದ ಸ್ವಚ್ಛವಾಗಿ ಮತ್ತು ಸುಂದರವಾಗಿ ಸಣ್ಣ ಸ್ವಸ್ತಿಕ ಚಿಹ್ನೆಯನ್ನು ಬಿಡಿಸಿ. ಆ ಕಾಗದವನ್ನು ನಿಮ್ಮ ಕ್ಯಾಶ್ ಬಾಕ್ಸ್, ಹಣ ಇಡುವ ಸ್ಥಳದಲ್ಲಿ ಮಡಚದೆ.. ಕೊಳೆಯಿರದ ಸ್ಥಳದಲ್ಲಿ ಇಡಿ. ನಿಮ್ಮ ಖಾತೆ ಪುಸ್ತಕ ಅಥವಾ ತೀರಿಸಬೇಕಾದ ಸಾಲದ ನೋಟ್ಬುಕ್ ಮೇಲೆಯೂ ಸಣ್ಣ ಸ್ವಸ್ತಿಕ ಬರೆಯಿರಿ. ಸ್ವಲ್ಪ ಹೊತ್ತು ಶಾಂತವಾಗಿ ಕುಳಿತು ನಿಮ್ಮ ತೀರಿಸದ ಸಾಲಗಳ ಬಗ್ಗೆ ಆಲೋಚಿಸಿ, ಅನಗತ್ಯ ಖರ್ಚು ನಿಲ್ಲಿಸಲು ಅಂದಾಜು ಮಾಡಿಕೊಳ್ಳಿ.
ಸ್ವಸ್ತಿಕ್ ಚಿಹ್ನೆಯನ್ನು ಬರೆದು ನಿಮ್ಮ ಪರ್ಸ್ ಅಥವಾ ಬ್ಯಾಗ್, ಹಣದ ಡ್ರಾಯರ್ನಲ್ಲಿ ಇಡಲು ಶುಕ್ರವಾರ, ಗುರುವಾರ ಅಥವಾ ಇತರ ಶುಭ ಬೆಳಗಿನ ವೇಳೆ ಸೂಕ್ತ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಪರ್ಸ್ನಲ್ಲಿರುವ ಹಳೆಯ ರಸೀದಿಗಳು, ಅವಧಿ ಮುಗಿದ ಕಾರ್ಡ್ಗಳು, ಹರಿದ ನೋಟು, ಅನಗತ್ಯ ಕಾಗದಗಳನ್ನು ತೆಗೆದು ಸ್ವಚ್ಛಗೊಳಿಸಿ. ಇದು ನಿಮ್ಮ ಗೊಂದಲ ಮಯ ಹಣಕಾಸಿನ ಸ್ಥಿತಿಯನ್ನು ಸೂಚಿಸುತ್ತದೆ. ನಿಮ್ಮ ಬಾಕಿ ಇರುವ ಎಲ್ಲಾ ಸಾಲಗಳ ಮೊತ್ತ, ಪಾವತಿ ದಿನಾಂಕಗಳು ಮತ್ತು ಯಾರಿಗೆ ಹಣ ನೀಡಬೇಕಿದೆ ಎಂಬುದನ್ನು ಬರೆದಿಡಿ. ಸಾಧ್ಯವಾದರೆ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಮೊದಲು ಅತ್ಯಂತ ಸಣ್ಣ ಸಾಲವನ್ನು ತೀರಿಸಲು ಪ್ರಯತ್ನಿಸಿ.
ನಿಮ್ಮ ಸಾಲಗಳು ದೊಡ್ಡದಾಗಿದ್ದರೆ, ಸಾಲ ನೀಡಿದವರೊಂದಿಗೆ ಅಥವಾ ವಿಶ್ವಾಸಾರ್ಹ ಹಣಕಾಸು ಸಲಹೆಗಾರರೊಂದಿಗೆ ಮಾತನಾಡಿ. ಸಾಲಗಳಿಂದ ತಪ್ಪಿಸಿಕೊಳ್ಳಬೇಡಿ. ನಿಮ್ಮ ತೀರಿಸದ ಸಾಲಗಳು ದೊಡ್ಡದಾಗಿ ಕಾಣಿಸಬಹುದು; ಆದರೂ, ಶಿಸ್ತು ಮತ್ತು ನಿಮ್ಮ ಪರ್ಸ್ ರಕ್ಷಿಸಲು ಸ್ವಸ್ತಿಕ ಚಿಹ್ನೆಯನ್ನು ಬಳಸುವುದರಿಂದ ನಿಮ್ಮ ಹಣಕಾಸಿನ ಬಗ್ಗೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತೀರಿ ಹಾಗೂ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಜಾಗೃತಿಯನ್ನು ಮೂಡಿಸುತ್ತೀರಿ, (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.