Don't Throw Away Flower Waste, Make Chemical-Free Dhoop From It 
ಧಾರ್ಮಿಕ

ರಾಸಾಯನಿಕ ಧೂಪದಿಂದ ಹಣ ಖರ್ಚಾಯ್ತು, ಆರೋಗ್ಯ ಹಾಳಾಯ್ತು ಎಂದು ಗೋಳಾಡ್ತಿದ್ದೀರಾ?; ಹಬ್ಬಕ್ಕೆ ತಂದ ಹೂಗಳಿಂದ ನೈಸರ್ಗಿಕ ಧೂಪ ಹೀಗೆ ತಯಾರಿಸಿ.. Dhoop

ಮಮತಾ
Don't Throw Away Flower Waste, Make Chemical-Free Dhoop From It: ಮೊದ್ಲೆಲ್ಲ ಅಗರಬತ್ತಿ ಬಿಟ್ಟರೇ ದೇವರಿಗೆ ಸಾಮ್ರಾಣಿಯನ್ನು ಹಚ್ಚಲಾಗುತ್ತಿತ್ತು. ಕಾಲಬದಲಾದಂತೆ ಸಾಮ್ರಾಣಿ ಮಿಶ್ರಿತ ಧೂಪ, ಸಗಣಿ ಮಿಶ್ರಿತ ಧೂಪ ತಯಾರಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಧೂಪವು ಸಾಂಪ್ರದಾಯಿಕ ಸಂಕೇತ ದೇವರ ಪೂಜೆ ನಂತರ ಇದನ್ನು ಹಚ್ಚುವುದು ವಾಡಿಕೆ. ಕೆಲವರು ಇದರ ಸುವಾಸನೆಗಾಗಿಯೇ ಮನೆಯಲ್ಲಿ ಧೂಪ ಹಚ್ಚೋದು ಉಂಟು.

ಆರೋಗ್ಯಕ್ಕೆ ಸಮಸ್ಯೆ

ಆದರೆ, ವೈಜ್ಞಾನಿಕ ವರದಿಗಳ ಪ್ರಕಾರ ಮನೆಯಲ್ಲಿ ಧೂಪ ಸುಡುವುದು ಅದರಲ್ಲಿರುವ ರಾಸಾಯನಿಕ ಅಂಶವಾದ
ಕಾರ್ಬನ್​ ಮಾನಾಸೈಡ್​​, ಫಾರ್ಮಾಲ್ಡಿಹೈಡ್, ಪಾಲಿ ಪರಮಾಣು, ಹೈಡ್ರೋಕಾರ್ಬನ್​​​​​​ ಮೂಗಿನ ನಾಳಗಳ ಮೂಲಕ ಶ್ವಾಸನಾಳ ಸೇರೋದು ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗಿದೆ,. ಇದರಿಂದ ಅಲರ್ಜಿ ಹಾಗೂ ಧೂಪದಲ್ಲಿರುವ ಸೂಕ್ಷ್ಮ ಕಣಗಳು ಶ್ವಾಸಕೋಶದ ಉರಿಯೂತಕ್ಕೆ ಕಾರಣವಾಗುತ್ತದೆ. ಅಸ್ತಮಾ ಹಾಗೂ ಅಲರ್ಜಿ ಇರುವವರಿಗೆ ಸಮಸ್ಯೆ ಮಾಡುತ್ತದೆ ಎನ್ನಲಾಗಿದೆ. ಈ ಕಾರಣದಿಂದ ಆದಷ್ಟು ಮನೆಯಲ್ಲಿ ಧೂಪ ತಯಾರಿ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ..ಪೂಜೆಯ ನಂತರ ಬಿಸಾಡುವ ಹೂಗಳಿಂದ ನೈಸರ್ಗಿಕವಾಗಿ ಧೂಪ ತಯಾರಿಸೋದು ಹೇಗೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ಧೂಪ ತಯಾರಿ ಮಾಡೋದು ಹೇಗೆ?

ಈಗಂತೂ ಸಾಲು ಸಾಲು ಹಬ್ಬಗಳು ಬರುತ್ತಿವೆ ಇತ್ತೀಚೆಗೆ ಮುಗಿದ ವರಮಹಾಲಕ್ಷ್ಮಿ ಹಬ್ಬ, ಕೃಷ್ಣ ಜಯಂತಿ, ಓಣಂ ಹಾಗೂ ಗಣೇಶ ಚತುರ್ಥಿ, ದೀಪಾವಳಿಮ ದಸರಾ ಹೀಗೆ ಸಂಭ್ರಮದ ಸಾಲೇ ಇದೆ. ಈ ದಿನ ಹಾರಕ್ಕಾಗಿ ಹೂವು ಕೊಂಡು ತರೋದು ಸಾಮಾನ್ಯ. ಹಬ್ಬ ಮುಗಿದ ಕೂಡಲೇ ಇದನ್ನು ಬಿಸಾಡುವ ಬದಲಾಗಿ ಇದರ ದಳವನ್ನು ಬಿಡಿಸಿ ಸೂರ್ಯನ ಬಿಸಿಲಲ್ಲಿ ಒಣಗಿಸಿ.
ಚೆಂಡು, ಗುಲಾಬಿ, ಸೇವಂತಿ ಸೇರಿದಂತೆ ಒಣಗಲು ಹಾಕಿದ ಹೂಗಳನ್ನು ಈಗ ಗ್ರೈಂಡ್​ ಮಾಡಿಕೊಂಡು ಪಕ್ಕಕ್ಕೆ ಇಡಿ, ಮತ್ತೊಂದು ಮಿಕ್ಸಿಗೆ ತೆಂಗಿನ ನಾರು, ದಾಲ್ಚಿನ್ನಿ, ಕರ್ಪೂರ, ಸುವಾಸನೆಗೆ ಶ್ರೀಗಂಧದ ಪುಡಿ, ರೋಸ್​ ವಾಟರ್​​, ಸಾಂಬ್ರಾಣಿ ಪುಡಿ, ಹಸುವಿನ ಒಣಗಿದ ಸಗಣಿಯನ್ನು ಗ್ರೈಂಡ್​ ಮಾಡಿ ಅದನ್ನು ಜರಡಿಯಲ್ಲಿ ಸೋಸಿ ಇಡಿ. ಈಗ ಮೊದಲು ತಯಾರಿಸಿಟ್ಟ ಹೂವಿನ ಪುಟಿಯನ್ನು ಬಟ್ಟಲಿಗೆ ಹಾಕಿ ತುಪ್ಪವನ್ನು ಸೇರಿಸಿ ಉಂಡೆ ಮಾಡಿ ಕೋನ್​ ಆಕಾರ ಅಥವಾ ನಿಮಗೆ ಬೇಕಾದ ರೀತಿಯಲ್ಲಿ ಶೇಪ್​ ಕೊಡಿ.

ಇಲ್ಲಿ ಒಣಗಿಸಿ

ಆಕಾರಕ್ಕೆ ತಂದ ದೂಪವನ್ನು ಒಂದೇ ಸರದಿಯಲ್ಲಿ ಜೋಪಾನವಾಗಿ ಜೋಡಿಸಿ ಇಡಿ. ಇದನ್ನು 24ರಿಂದ 48 ಗಂಟೆಗಳ ಕಾಲ ಒಣಗಲು ಬಿಡಿ. ಇದು ಗಾಳಿಯಲ್ಲಿ ಅಥವಾ ಕೂಲ್​ ಆದಾ ಪ್ರದೇಶದಲ್ಲಿ ಒಣಗಬೇಕಾಗುತ್ತದೆ. ಒಂದು ನೆನಪಿಡಿ ಇದನ್ನು ಸೂರ್ಯನ ನೆರಳಲ್ಲಿ ಒಣಗಿಸಬಾರದು.
ಈ ಧೂಪ ತಯಾರಾದ ಬಳಿಕ ಇದನ್ನು ಸೊಳ್ಳೆಗಳ ಕಾಟ ನಿವಾರಣೆಗೆ ಅಥವಾ ಪೂಜಾ ಕೈಂಕರ್ಯಕ್ಕೆ ಬಳಕೆ ಮಾಡಬಹುದು,. ಇದರಿಂದ ಹಣ ಖರ್ಚಾಯ್ತು,, ಆರೋಗ್ಯ ಹಾಳಾಯ್ತು ಎನ್ನುವ ಸಮಸ್ಯೆ ಕಾಡೋದಿಲ್ಲ. ಆದರೂ ನೈಸರ್ಗಿಕವಾಗಿ ತಯಾರಾದ ಈ ಧೂಪಗಳನ್ನು ಮಿತಿಯಾಗಿ ಬಳಕೆ ಮಾಡೋದು ಉತ್ತಮ,(ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.