ಧಾರ್ಮಿಕ: ಪಿತೃ ದೋಷ (Pitra Dosha) ಎಂದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಮ್ಮ ಪೂರ್ವಜರು ಅಂದರೆ ತಂದೆ, ತಾತ, ಮುತ್ತಾತರು ಮೊದಲಾದವರ ಆತ್ಮಗಳಿಗೆ ಸರಿಯಾದ ಶ್ರಾದ್ಧ, ತರ್ಪಣ ಅಥವಾ ಸಂಸ್ಕಾರಗಳು ಆಗದೇ ಇದ್ದಾಗ, ಅವರ ಅಸಮಾಧಾನದಿಂದ ಉಂಟಾಗುವ ದೋಷವನ್ನು ಪಿತೃ ದೋಷ ಎಂದು ಕರೆಯಲಾಗುತ್ತದೆ.
ಹಾಗೆಯೇ ಜಾತಕದಲ್ಲಿ 9ನೇ ಭಾವ ಅಂದರೆ ಪಿತೃ ಸ್ಥಾನದಲ್ಲಿ ಸೂರ್ಯ, ರಾಹು, ಶನಿ ಗೃಹಗಳಿಂದ ಪೀಡಿತವಾದರೆ ಪಿತೃ ದೋಷವಿದೆ ಎಂದು ಹೇಳುತ್ತಾರೆ.
ಪಿತೃ ದೋಷದಿಂದ ಜೀವನದಲ್ಲಿ ಆಗುವ ಸಮಸ್ಯೆಗಳು
1. ಕುಟುಂಬ ಜೀವನದಲ್ಲಿ
ಕುಟುಂಬದಲ್ಲಿ ಯಾವಾಗಲೂ ಕಲಹದ ವಾತಾವರಣ ಇರುತ್ತದೆ. ತಂದೆಯೊಂದಿಗೆ ಸದಾ ಜಗಳವಾಗುತ್ತಿರುತ್ತದೆ. ಒಟ್ಟಾರೆಯಾಗಿ ಮನೆಯಲ್ಲಿ ಶಾಂತಿ ನೆಲೆಸಿರುವುದಿಲ್ಲ.
2. ಉದ್ಯೋಗ / ಹಣಕಾಸು
ಮಾಡುವ ಕೆಲಸದಲ್ಲಿ ಪದೇಪದೇ ಅಡಚಣೆ ಉಂಟಾಗುತ್ತದೆ. ಎಷ್ಟೇ ಹಣ ಸಂಪಾದಿಸಿದರೂ ಸಹ ಕೈಯಲ್ಲಿ ಒಂದು ರೂಪಾಯಿ ಸಹ ಉಳಿಯುವುದಿಲ್ಲ. ಎಷ್ಟು ಕಷ್ಟ ಪಟ್ಟು ಕೆಲಸಮಾಡಿದರೂ ಪ್ರಯತ್ನಕ್ಕೆ ಫಲ ಸಿಗುವುದಿಲ್ಲ.
3. ವಿವಾಹ / ಸಂತಾನ
ಪಿತೃ ದೋಷಕ್ಕೆ ಒಳಗಾದವರ ವಿವಾಹವು ಬಹಳ ವಿಳಂಬವಾಗುತ್ತದೆ.
ಮದುವೆಯಾದರೂ ಸಹ ದಾಂಪತ್ಯ ಜೀವನದಲ್ಲಿ ಅಸಮಾಧಾನದಿಂದ ಕೂಡಿರುತ್ತದೆ. ಗಂಡ - ಹೆಂಡತಿಯ ನಡುವೆ ನಿರಂತರ ಜಗಳವಾಗುವ ಜತೆಗೆ ಸಂತಾನ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ.
ಪಿತೃ ದೋಷ ನಿವಾರಣೆಗೆ ಉಪಾಯಗಳು
1. ಶ್ರಾದ್ಧ ಮತ್ತು ತರ್ಪಣ
ಮಹಾಲಯ ಅಮಾವಾಸ್ಯೆ ಅತ್ಯಂತ ಶ್ರೇಷ್ಠ ಅಮವಾಸ್ಯೆಯಾಗಿದ್ದು ಆ ದಿನ ಪಿತೃಗಳಿಗೆ ತರ್ಪಣ ನೀಡುವುದರಿಂದ ಪಿತೃ ದೋಷ ಪರಿಹಾರವಾಗುತ್ತದೆ.
2. ಪಿತೃ ದೇವರಿಗೆ ಪೂಜೆ
ಪಿತೃ ದೋಷ ಪರಿಗಾರಕ್ಕಾಗಿ ಗಯಾ, ರಾಮೇಶ್ವರಂ, ಶ್ರೀಶೈಲಂ ಇಂತಹ ಪವಿತ್ರ ಸ್ಥಳಗಳಲ್ಲಿ ಪಿಂಡ ಪ್ರದಾನ ಮಾಡುವುದು ಉತ್ತಮ ಎಂದು ವೇದಗಳಲ್ಲಿ ಹೇಳಲಾಗಿದೆ.
3. ದಾನ
ಹಿಂದೂ ಧರ್ಮದಲ್ಲಿ ದಾನಕ್ಕೆ ತನ್ನದೇ ಆದ ಮಹತ್ವವಿದ್ದು, ಅಮಾವಾಸ್ಯೆ ದಿನ ಅನ್ನದಾನ, ಬಟ್ಟೆ ದಾನ, ಬ್ರಾಹ್ಮಣರಿಗೆ ದಕ್ಷಿಣೆ ಮತ್ತು ವಿಶೇಷವಾಗಿ ಬಡವರಿಗೆ ಸಹಾಯ ಮಾಡುವುದರಿಂದ ಪಿತೃ ದೋಷ ತ್ವರಿತಗತಿಯಲ್ಲಿ ಪರಿಹಾರವಾಗುತ್ತದೆ ಎಂದು ಹೇಳಲಾಗುತ್ತದೆ.
4. ತಂದೆ–ತಾಯಿಗ ಗೌರವ ನೀಡುವುದು
ಮನೆಯಲ್ಲಿರುವ ತಂದೆ-ತಾಯಿಯನ್ನು ಗೌರವದಿಂದ ನೋಡಿಕೊಳ್ಳುವುದು ಮತ್ತು ಅವರ ಆಶೀರ್ವಾದ ಪಡೆಯುವುದು ಪಿತೃ ದೋಷ ನಿವಾರಣೆಗೆ ಅತ್ಯಂತ ಶಕ್ತಿಯುತ ಪರಿಹಾರ ಎಂದು ಹೇಳಲಾಗುತ್ತದೆ.
5. ಕಾಗೆಗಳಿಗೆ ಆಹಾರ ನೀಡುವುದು
ಕಾಗೆಗಳನ್ನು ಪಿತೃಗಳ ಪ್ರತೀಕ ಎಂದು ನಂಬಲಾಗುತ್ತದೆ. ಆದ್ದರಿಂದ
ಅಮಾವಾಸ್ಯೆ ಅಥವಾ ಶನಿವಾರ ಕಾಗೆಗಳಿಗೆ ಆಹಾರ ನೀಡಿದರೆ ಅದು ಪಿತೃಗಳಿಗೆ ತಲುಪುತ್ತದೆ ಎಂಬ ನಂಬಿಕೆಯಿದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್ ನೆಟ್ ಸೈಟ್ ಜವಾಬ್ದಾರರಾಗಿರುವುದಿಲ್ಲ.