ಬೆಂಗಳೂರು: ( astrology) ಸಾಮುದ್ರಿಕ ಶಾಸ್ತ್ರದ ಪ್ರಕಾರ, ದೇಹದ ವಿವಿಧ ಭಾಗಗಳಲ್ಲಿರುವ ಮಚ್ಚೆಗಳು ಮನುಷ್ಯನ ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳನ್ನು ತಿಳಿಸುತ್ತವೆ. ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಮಚ್ಚೆ ಇರುವುದು ಅಪಾರ ಸಂಪತ್ತು ಮತ್ತು ಯಶಸ್ಸಿನ ಸಂಕೇತ ಎಂದು ನಂಬಲಾಗಿದೆ.
ನಾಲಿಗೆಯ ಮೇಲೆ ಮಚ್ಚೆ
ಪುರುಷರಾಗಲಿ ಅಥವಾ ಮಹಿಳೆಯರಾಗಲಿ, ನಾಲಿಗೆಯ ಮೇಲೆ ಮಚ್ಚೆ ಹೊಂದಿರುವುದು ಅತ್ಯಂತ ಶುಭ ಲಕ್ಷಣ. ಅಂತಹ ವ್ಯಕ್ತಿಗಳು ಉತ್ತಮ ಮಾತುಗಾರರಾಗಿರುತ್ತಾರೆ ಮತ್ತು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುತ್ತಾರೆ. ಇವರಿಗೆ ಜನರನ್ನು ಆಕರ್ಷಿಸುವ ಅದ್ಭುತ ಶಕ್ತಿ ಇರುತ್ತದೆ. ಅಷ್ಟೇ ಅಲ್ಲದೆ, ಇವರು ಅಕಸ್ಮಾತ್ ಕೋಪದಲ್ಲಿ ಅಥವಾ ನೋವಿನಲ್ಲಿ ಆಡುವ ಮಾತುಗಳು ಕೂಡ ನಿಜವಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ.
ಅಂಗೈಯ ಮಧ್ಯಭಾಗದಲ್ಲಿ ಮಚ್ಚೆ
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯ ಮಧ್ಯಭಾಗದಲ್ಲಿ ಅಂದರೆ ಶುಕ್ರ ಸ್ಥಾನದಲ್ಲಿ ಮಚ್ಚೆ ಇರುವುದು ಅದೃಷ್ಟದ ಗುರುತು.
ಪುರುಷರಿಗೆ: ಬಲ ಅಂಗೈಯಲ್ಲಿ ಈ ಮಚ್ಚೆ ಇದ್ದರೆ ಹಣಕಾಸಿನ ಲಾಭ, ಜೀವನದ ಸುಖ-ಸಂತೋಷ ಮತ್ತು ವಿದೇಶ ಪ್ರಯಾಣದ ಯೋಗವಿರುತ್ತದೆ.
ಮಹಿಳೆಯರಿಗೆ: ಎಡ ಅಂಗೈಯಲ್ಲಿ ಮಚ್ಚೆ ಇದ್ದರೆ ಅವರು ಅತ್ಯಂತ ಶ್ರೀಮಂತರಾಗುತ್ತಾರೆ ಮತ್ತು ಆರ್ಥಿಕವಾಗಿ ಸದೃಢರಾಗಿರುತ್ತಾರೆ.
ಕಣ್ಣಿನ ಭಾಗದಲ್ಲಿ ಮಚ್ಚೆ
ಕಣ್ಣಿನ ಅಕ್ಕಪಕ್ಕದಲ್ಲಿ ಮಚ್ಚೆ ಇರುವವರು ತುಂಬಾ ಭಾಗ್ಯಶಾಲಿಗಳು. ಅದರಲ್ಲೂ ವಿಶೇಷವಾಗಿ ಮಹಿಳೆಯರ ಕಣ್ಣಿನ ಮೇಲೆ ಇಂತಹ ಮಚ್ಚೆಗಳಿದ್ದರೆ, ಅವರಿಗೆ ಅತ್ಯಂತ ಸುಂದರ ಹಾಗೂ ಶ್ರೀಮಂತ ಜೀವನಸಂಗಾತಿ ದೊರೆಯುತ್ತಾರೆ. ಇವರ ವೈವಾಹಿಕ ಜೀವನವು ಸುಖಮಯವಾಗಿ ಮತ್ತು ದೀರ್ಘಕಾಲದವರೆಗೆ ಇರುತ್ತದೆ ಎನ್ನಲಾಗುತ್ತದೆ.
ಹೊಟ್ಟೆಯ ಮೇಲಿನ ಮಚ್ಚೆ
ಹೊಟ್ಟೆಯ ಕೆಳಭಾಗದಲ್ಲಿ ಅಥವಾ ಮೂಲಾಧಾರ ಚಕ್ರದ ಹತ್ತಿರ ಮಚ್ಚೆ ಇರುವವರು ದೈವಭಕ್ತರಾಗಿರುತ್ತಾರೆ. ಇವರು ವಿಶೇಷವಾಗಿ ಗಣೇಶ, ಶಿವ ಮತ್ತು ಲಲಿತಾ ದೇವಿಯ ಆರಾಧನೆಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಇಂತಹ ವ್ಯಕ್ತಿಗಳಿಗೆ ದೈವಬಲ ಹೆಚ್ಚಿರುತ್ತದೆ ಮತ್ತು ಇವರ ಮೇಲೆ ಯಾವುದೇ ರೀತಿಯ ದುಷ್ಟ ಶಕ್ತಿಗಳ ಪ್ರಭಾವ ಬೀರುವುದಿಲ್ಲ ಎಂಬ ನಂಬಿಕೆಯಿದೆ.
ಬಲ ಕೆನ್ನೆಯ ಮೇಲಿನ ಮಚ್ಚೆ (ಮಹಿಳೆಯರಿಗೆ): ಮಹಿಳೆಯ ಬಲ ಕೆನ್ನೆಯ ಮೇಲೆ ಮಚ್ಚೆ ಇದ್ದರೆ, ಅದು ಉನ್ನತ ಯೋಗ ಸ್ಥಿತಿಯನ್ನು ಸೂಚಿಸುತ್ತದೆ. ಎಡ ಕೆನ್ನೆಯ ಮೇಲಿನ ಮಚ್ಚೆ ಅಷ್ಟು ಶುಭವಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.