ಧಾರ್ಮಿಕ

ಮನೆಯಲ್ಲಿ ಬೆಳೆಸಲೇಬೇಕಾದ 5 ಶುಭ ಗಿಡಗಳಿವು; ಯಾವುದು ಎಲ್ಲಿಡಬೇಕು?..Lucky Plants

Lucky Plants: ಮನೆಯ ಸುತ್ತಮುತ್ತ ಹಸಿರು ಗಿಡಗಳನ್ನು ಬೆಳೆಸುವುದು ಪರಿಸರಕ್ಕೆ ಉತ್ತಮವಾಗಿರುವುದರ ಜೊತೆಗೆ ಮನೆಯ ಅಂದವನ್ನೂ ಹೆಚ್ಚಿಸುತ್ತದೆ. ಆದರೆ, ಭಾರತೀಯ ಸಂಪ್ರದಾಯದಲ್ಲಿ ಕೆಲವು ಗಿಡಗಳಿಗೆ ವಿಶೇಷ ಮಹತ್ವವಿದ್ದು, ಅವುಗಳನ್ನು ಶುಭ, ಸಮೃದ್ಧಿ, ಶಾಂತಿ ಮತ್ತು ಸಕಾರಾತ್ಮಕತೆಯ ಸಂಕೇತ ಎಂದು ನಂಬಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿನ ಗಿಡಗಳನ್ನು ಸೂಕ್ತ ಸ್ಥಳದಲ್ಲಿ ಬೆಳೆಸುವುದರಿಂದ ಸಕಾರಾತ್ಮಕ ವಾತಾವರಣ ಮೂಡುತ್ತದೆ ಎಂದು ಹೇಳಲಾಗುತ್ತದೆ. ಅನೇಕ ಗಿಡಗಳನ್ನು ಬೆಳೆಸಿ, ಪೂಜಿಸುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ, ಸಂಪತ್ತು ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಯಾವೆಲ್ಲಾ ಗಿಡಗಳನ್ನು ಬೆಳೆಸುವುದು ಶುಭಕರ ಇಲ್ಲಿದೆ ಮಾಹಿತಿ.

ಮಮತಾ

ತುಳಸಿ ಗಿಡ

ಭಾರತದ ಮನೆಗಳಲ್ಲಿ ತುಳಸಿ ಗಿಡಕ್ಕೆ ಅತ್ಯಂತ ವಿಶೇಷ ಸ್ಥಾನವಿದೆ. ಧಾರ್ಮಿಕವಾಗಿ ತುಳಸಿಯನ್ನು ಪವಿತ್ರ ಸಸ್ಯವೆಂದು ಪರಿಗಣಿಸಲಾಗುತ್ತದೆ. ಅನೇಕ ಮನೆಗಳಲ್ಲಿ ತುಳಸಿ ಕಟ್ಟೆಯನ್ನು ನಿರ್ಮಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ಇಂದಿಗೂ ಕಂಡುಬರುತ್ತದೆ. ವಾಸ್ತು ನಂಬಿಕೆಗಳ ಪ್ರಕಾರ, ಮನೆಯಲ್ಲಿ ತುಳಸಿ ಗಿಡವಿರುವುದು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ತುಳಸಿಯನ್ನು ಮನೆಯ ಲಕ್ಷ್ಮಿಯ ಪ್ರತೀಕವೆಂದು ನಂಬಿ ಗೌರವಿಸುವ ಸಂಪ್ರದಾಯವೂ ಇದೆ.

ಮನಿ ಪ್ಲಾಂಟ್‌

ಮನಿ ಪ್ಲಾಂಟ್‌ ಮನೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಸುಂದರ ಅಲಂಕಾರಿಕ ಸಸ್ಯವಾಗಿದೆ. ಕಡಿಮೆ ಜಾಗದಲ್ಲಿಯೂ ಬೆಳೆಸಬಹುದಾದ ಕಾರಣ ಅಪಾರ್ಟ್‌ಮೆಂಟ್‌ಗಳು ಮತ್ತು ಸಣ್ಣ ಮನೆಗಳಿಗೂ ಇದು ಸೂಕ್ತವಾಗಿದೆ. ಇದರ ಹಸಿರು ಎಲೆಗಳು ಮನೆಯ ಒಳಾಂಗಣಕ್ಕೆ ಆಕರ್ಷಕ ನೋಟ ನೀಡುತ್ತವೆ. ವಾಸ್ತು ಮತ್ತು ಫೆಂಗ್‌ಶುಯಿ ನಂಬಿಕೆಗಳಲ್ಲಿ ಮನಿ ಪ್ಲಾಂಟ್‌ ಅನ್ನು ಸಂಪತ್ತು, ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಲಕ್ಕಿ ಬ್ಯಾಂಬು

ಲಕ್ಕಿ  ಬ್ಯಾಂಬು ಅನ್ನು ಮನೆ, ಕಚೇರಿ ಹಾಗೂ ವ್ಯಾಪಾರ ಸ್ಥಳಗಳಲ್ಲಿ ಇದನ್ನು ಅಲಂಕಾರಕ್ಕಾಗಿ ಬಳಸುವುದು ಸಾಮಾನ್ಯ. ಫೆಂಗ್‌ಶುಯಿ ನಂಬಿಕೆಗಳಲ್ಲಿ ಲಕ್ಕಿ ಬಿದಿರನ್ನು ಅದೃಷ್ಟ, ಸಮೃದ್ಧಿ, ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರ ಕಾಂಡಗಳ ಸಂಖ್ಯೆಗೆ ಅನುಗುಣವಾಗಿ ವಿವಿಧ ಅರ್ಥಗಳಿವೆ.

ಜೇಡ್ ಪ್ಲಾಂಟ್

ಜೇಡ್ ಪ್ಲಾಂಟ್‌ ತನ್ನ ದಪ್ಪ, ಹಸಿರು ಮತ್ತು ದುಂಡಗಿನ ಎಲೆಗಳಿಂದ ಸುಲಭವಾಗಿ ಗುರುತಿಸಬಹುದಾದ ಸಸ್ಯವಾಗಿದೆ. ಇದರ ಎಲೆಗಳು ಸಣ್ಣ ನಾಣ್ಯಗಳನ್ನು ಹೋಲುವ ಕಾರಣ, ಕೆಲವು ವಾಸ್ತು ಮತ್ತು ಫೆಂಗ್‌ಶುಯಿ ನಂಬಿಕೆಗಳಲ್ಲಿ ಇದನ್ನು ಹಣ, ಸಂಪತ್ತು ಮತ್ತು ಆರ್ಥಿಕ ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯಕ್ಕೆ ಸಾಕಷ್ಟು ಬೆಳಕು ಸಿಗುವ ಸ್ಥಳ ಸೂಕ್ತವಾಗಿದ್ದು, ಸರಿಯಾದ ಆರೈಕೆಯೊಂದಿಗೆ ದೀರ್ಘಕಾಲ ಬೆಳೆಸಬಹುದು.

ಮಲ್ಲಿಗೆ ಗಿಡ

ಮಲ್ಲಿಗೆ ಹೂವಿನ ಮಧುರವಾದ ಸುಗಂಧವು ಮನೆಯ ವಾತಾವರಣವನ್ನು ಆಹ್ಲಾದಕರವಾಗಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಮಲ್ಲಿಗೆ ಹೂವಿಗೆ ವಿಶೇಷ ಸ್ಥಾನವಿದ್ದು, ಪೂಜೆ, ಹಬ್ಬಗಳು ಹಾಗೂ ವಿವಿಧ ಶುಭ ಕಾರ್ಯಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಮಲ್ಲಿಗೆ ಗಿಡ ಬೆಳೆಸುವುದರಿಂದ ಹೂಗಳ ಸೌಂದರ್ಯ ಮತ್ತು ಪರಿಮಳದಿಂದ ಸಕಾರಾತ್ಮಕತೆಯ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಹೇಳಲಾಗುತ್ತದೆ. ( ಏಜಿನ್ಸೀಸ್ )