ಧಾರ್ಮಿಕ

ಈ 4 ದಿನಾಂಕದಲ್ಲಿ ನೀವೇನಾದ್ರು ಜನಿಸಿದ್ದೀರಾ?; ಕೆಲವೊಮ್ಮೆ ನಿಮ್ಮ ವ್ಯಕ್ತಿತ್ವವೇ ನಿಮಗೆ ಶತ್ರುವಾಗಬಹುದು ನೋಡಿ..Numerology

  • ಸಂಖ್ಯಾಶಾಸ್ತ್ರದ ಪ್ರಕಾರ 8, 9, 18 ಮತ್ತು 27 ರಂದು ಜನಿಸಿದವರಲ್ಲಿ ವಿಶೇಷವಾದ ಇಚ್ಛಾಶಕ್ತಿ ಇರುತ್ತದೆ.

  • ಸರಿಯಾದ ನಿರ್ಧಾರ, ಏನೇ ಸಮಸ್ಯೆ ಎದುರಾದರು ಅದನ್ನು ಮೆಟ್ಟಿ ನಿಲ್ಲುವುದು ಈ ದಿನಾಂಕದಲ್ಲಿ ಜನಿಸಿದವರ ಸ್ವಭಾವ.

  • 27ನೇ ತಾರೀಖಿನಲ್ಲಿ ಜನಿಸಿದವರು ಇತರರ ಮನವೊಲಿಸುವುದರಲ್ಲಿ ಅನುಭವಿಗಳು.

Born on These 4 Dates Your Strongest Personality: ಕೆಲವರ ಸ್ವಭಾವವೇ ಹಾಗೆ ಎಂದಿಗೂ ತಮ್ಮ ಛಲ ಬಿಡೋದಿಲ್ಲ. ಒಂದರಲ್ಲಿ ಸೋಲು ಕಂಡರೆ ಮತ್ತೊಂದರ ಮೂಲಕ ಪುಟಿದೇಳಲು ಶ್ರಮವಹಿಸುತ್ತಾರೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಮುಂದಿನ ವರ್ಷ ಮತ್ತೆ ಬರೆಯುತ್ತಾರೆ. ಕೆಲಸ ಕಳೆದುಕೊಂಡರೆ ಮನೆಯ ಒಂದು ಮೂಲೆಯಿಂದಲೇ ಹೊಸ ವ್ಯವಹಾರ ಆರಂಭಿಸುತ್ತಾರೆ. ಕೆಲವರು ಇಂತವರನ್ನು ಹಠಮಾರಿಗಳು ಎಂದು ಕರೆದರೆ, ಸಂಖ್ಯಾಶಾಸ್ತ್ರವು ಇಂತಹ ಗುಣವುಳ್ಳವರನ್ನು ದೃಢಸಂಕಲ್ಪ ಅಥವಾ ಇಚ್ಛಾಶಕ್ತಿ' ಉಳ್ಳವರು ಎನ್ನುತ್ತದೆ.

ಹೌದು, ಸಂಖ್ಯಾಶಾಸ್ತ್ರದ ಪ್ರಕಾರ 8, 9, 18 ಮತ್ತು 27 ರಂದು ಜನಿಸಿದ ನಾಲ್ಕು ದಿನಾಂಕದಲ್ಲಿ ಜನಿಸಿದವರು ಹಠಮಾರಿಗಳು, ಯಾವುದೇ ಕೆಲವನ್ನು ಪೂರ್ಣಗೊಳಿಸಲು ಬಿಡೋದಿಲ್ಲ. ಸಮಸ್ಯೆ ಎಂದಾಗ ಎದ್ದು ನಿಲ್ಲಲು, ಸೋತಾಗ ಅದನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸುವ ಗುಣ ಇವರಲ್ಲಿ ಇರುತ್ತದೆ.

ಸಂಖ್ಯಾಶಾಸ್ತ್ರದಲ್ಲಿ ಇಚ್ಛಾಶಕ್ತಿಯ ಸ್ವರೂಪ

  • ಮಂಗಳ ಗ್ರಹ (ಸಂಖ್ಯೆ 9): ಇದು ಧೈರ್ಯ, ಚಾಲನೆ ಮತ್ತು ತಿರುಗಿಬೀಳುವ ಪ್ರವೃತ್ತಿಯನ್ನು ತರುತ್ತದೆ.

  • ಶನಿ ಗ್ರಹ (ಸಂಖ್ಯೆ 8): ಇದು ಸಹನೆ, ಉತ್ಸಾಹ ಮಗುಚಿದರೂ ಸುದೀರ್ಘ ಕಾಲ ಕೆಲಸ ಮುಂದುವರಿಸುವ ಸಾಮರ್ಥ್ಯವನ್ನು ನೀಡುತ್ತದೆ.

ಇವೆರಡೂ ವಿಭಿನ್ನ ರೀತಿಯ ಇಚ್ಛಾಶಕ್ತಿಗಳ ಗುಣದವರಾಗಿದ್ದು, ದಿನನಿತ್ಯದ ಜೀವನದಲ್ಲಿ ವಿಭಿನ್ನವಾಗಿ ಗೋಚರಿಸುತ್ತವೆ. ಮಂಗಳ ಗ್ರಹವು ಅಡೆತಡೆಗಳನ್ನು ನೇರವಾಗಿ ಎದುರಿಸಲು ಬಯಸಿದರೆ, ಶನಿ ಗ್ರಹವು ಅವುಗಳನ್ನು ನಿಧಾನವಾಗಿ ಹಾಗೂ ಧೈರ್ಯದಿಂದ ಸವೆಸಿ ಮುನ್ನಡೆಯುತ್ತದೆ.

8 ಶನಿಯ ಸಂಖ್ಯೆಯ ಶುದ್ಧ ರೂಪವಾಗಿದೆ. ಆರಂಭಿಕ ಹಂತದಲ್ಲಿಯೇ ಸವಾಲುಗಳನ್ನು ಎದುರಿಸುತ್ತಾರೆ. ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಇರಬಹುದು ಅಥವಾ ಮನ್ನಣೆ ತಡವಾಗಿ ಸಿಗಬಹುದು. ಆದರೂ ಅವರು ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಇವರ ಇಚ್ಛಾಶಕ್ತಿ ಸದ್ದಿಲ್ಲದೆ ಕೆಲಸ ಮಾಡುತ್ತದೆ. ಒಮ್ಮೆ ತಮ್ಮ ಜೀವನದ ಬಗ್ಗೆ ನಿರ್ಧಾರ ಕೈಗೊಂಡ್ರೆ ಹಿಂದಿರುಗಿ ನೋಡೋದಿಲ್ಲ. ನಿರ್ಧಾರ ಬದಲಾಯಿಸುವುದಿಲ್ಲ.

ಹೋರಾಟದ ಛಲ ಉಳ್ಳವರು 9 ಅಥವಾ 18ರಂದು ಜನಿಸಿದವರು

9ನೇ ಸಂಖ್ಯೆಯು ಸಂಪೂರ್ಣವಾಗಿ ಮಂಗಳ ಗ್ರಹಕ್ಕೆ ಸೇರಿದೆ. ಈ ದಿನಾಂಕದಂದು ಜನಿಸಿದವರು ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತಾರೆ. ಇವರು ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ತೊಡಗುತ್ತಾರೆ, ಸಭೆಗಳಲ್ಲಿ ತಮ್ಮ ವಾದ ಮಂಡಿಸುತ್ತಾರೆ. ನ್ಯಾಯಕ್ಕಾಗಿ ಧ್ವನಿ ಎತ್ತುತ್ತಾರೆ.

18ರಂದು ಜನಿಸಿದವರು ಬಲವಾದ ಅಭಿಪ್ರಾಯ ಹೊಂದಿರುತ್ತಾರೆ. ವರ್ಷಗಟ್ಟಲೆ ಅವುಗಳನ್ನು ಸಮರ್ಥಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.ಇವರು ಸರಿಯಾದ ವಿಷಯಗಳಿಗಾಗಿ ಹೋರಾಡಿದರೆ ಯಾರನ್ನೂ ಬೇಕಾದರು ಅಲುಗಾಡಿಸಬಹುದು. ಆದರೆ, ಸಣ್ಣಪುಟ್ಟ ವಿಷಯಗಳಿಗೂ ಜಗಳವಾಡಿದರೆ ಬೇಗನೆ ದಣಿದು ಹೋಗುತ್ತಾರೆ.

ತರ್ಕಬದ್ಧ ಗುಣದವರು 27ರಂದು ಜನಿಸಿದವರು

27ನೇ ತಾರೀಖಿನಲ್ಲಿ ಜನಿಸಿದವರ ಇಚ್ಛಾಶಕ್ತಿ ಸ್ಥಿರ ಮತ್ತು ಅಳೆದು ತೂಗಿದಂತಿರುತ್ತದೆ. ಇವರು ಇತರರನ್ನು ಮನವೊಲಿಸುವಲ್ಲಿ ನುರಿತವರು. ಕೈರೋ ಇದನ್ನು 'ಧ್ರುವದಂಡ'ಎಂದು ಕರೆದಿದ್ದಾರೆ. ಇದು ಅಧಿಕಾರ ಮತ್ತು ಬುದ್ಧಿವಂತಿಕೆ ಎನ್ನುವುದನ್ನು ಸೂಚಿಸುತ್ತದೆ. ಇವರು ಹೊರನೋಟಕ್ಕೆ ಕಠಿಣರಾಗಿ ಕಂಡರು, ಒಳಗೆ ಮೃದು ಸ್ವಭಾವವನ್ನು ಹೊಂದಿರುತ್ತಾರೆ. ಇದು ಅವರನ್ನು ಉತ್ತಮ ಮಾರ್ಗದರ್ಶಕರನ್ನಾಗಿ ಮಾಡುತ್ತದೆ, (ಏಜೆನ್ಸೀಸ್).