ಬೆಂಗಳೂರು: ಹಿಂದೂ ಧರ್ಮ ಮತ್ತು ಆಯುರ್ವೇದದಲ್ಲಿ ಹಳೆಯ ಕಾಲದಿಂದಲೂ ಪ್ರಚಲಿತವಿರುವ ಒಂದು ಸಂಪ್ರದಾಯವೆಂದರೆ ಹರಿಯುವ ನೀರಿಗೆ ಅಥವಾ ನದಿಗೆ ತಾಮ್ರದ ನಾಣ್ಯವನ್ನು ಹಾಕುವುದು. ಇದು ಕೇವಲ ಧಾರ್ಮಿಕ ನಂಬಿಕೆಯಲ್ಲ, ಇದರ ಹಿಂದೆ ವೈಜ್ಞಾನಿಕ ಮತ್ತು ಆರೋಗ್ಯಕರ ಕಾರಣಗಳೂ ಇವೆ.
ಪ್ರಾಚೀನ ಕಾಲದಲ್ಲಿ ನಾಣ್ಯಗಳು ಶುದ್ಧ ತಾಮ್ರದಿಂದ ಮಾಡಲ್ಪಟ್ಟಿದ್ದವು. ತಾಮ್ರವು ನೀರನ್ನು ಶುದ್ಧೀಕರಿಸುವ ಗುಣವನ್ನು ಹೊಂದಿದೆ ಎಂಬುದು ಆಯುರ್ವೇದದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.ತಾಮ್ರದ ನಾಣ್ಯವನ್ನು ಹರಿಯುವ ನೀರಿಗೆ ಹಾಕಿದಾಗ, ತಾಮ್ರದ ಅಂಶಗಳು ನೀರಿನಲ್ಲಿ ಕರಗಿ, ಬ್ಯಾಕ್ಟೀರಿಯಾ ಮತ್ತು ಕಲುಷಿತ ವಸ್ತುಗಳನ್ನು ನಾಶಮಾಡುತ್ತವೆ. ಇದನ್ನು 'ಒಲಿಗೋಡೈನಾಮಿಕ್ ಎಫೆಕ್ಟ್' ಎಂದು ವಿಜ್ಞಾನ ಎನ್ನುತ್ತದೆ.
ಪ್ರಾಚೀನ ಭಾರತದಲ್ಲಿ ನದಿಗಳೇ ಕುಡಿಯುವ ನೀರಿನ ಮುಖ್ಯ ಮೂಲವಾಗಿದ್ದವು. ತಾಮ್ರದ ನಾಣ್ಯಗಳು ನೀರನ್ನು ಶುದ್ಧಗೊಳಿಸಿ, ಜನರು ಕುಡಿಯುವ ನೀರನ್ನು ಸುರಕ್ಷಿತಗೊಳಿಸುತ್ತಿದ್ದವು. ತಾಮ್ರವು ಮಾನವ ದೇಹಕ್ಕೆ ಅಗತ್ಯವಾದ ಖನಿಜವಾಗಿದ್ದು, ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಜ್ಯೋತಿಷಶಾಸ್ತ್ರದಲ್ಲಿ ಇದು ರಾಹು-ಕೇತು ದೋಷಗಳನ್ನು ಶಾಂತಪಡಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರಮಾಡುತ್ತದೆ ಎಂದು ನಂಬಲಾಗಿದೆ. ವಾಸ್ತುಶಾಸ್ತ್ರದಲ್ಲಿಯೂ ತಾಮ್ರವು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆಧುನಿಕ ಅಧ್ಯಯನಗಳು ತಾಮ್ರವು ಬ್ಯಾಕ್ಟೀರಿಯಾವನ್ನು ಕೊಲ್ಲುವ ಗುಣವನ್ನು ಹೊಂದಿದೆ ಎಂದು ದೃಢಪಡಿಸಿವೆ. ಆದರೆ ಇಂದು ನಾಣ್ಯಗಳು ಸ್ಟೀಲ್ ಅಥವಾ ಇತರ ಲೋಹಗಳಿಂದ ಮಾಡಲ್ಪಟ್ಟಿರುವುದರಿಂದ ಈ ಪ್ರಯೋಜನ ಕಡಿಮೆಯಾಗಿದೆ.
ಆಯುರ್ವೇದದಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಇಟ್ಟು ಕುಡಿಯುವುದು ದೋಷಗಳನ್ನು ಸಮತೋಲನಗೊಳಿಸುತ್ತದೆ. ಹರಿಯುವ ನೀರಿಗೆ ತಾಮ್ರ ಹಾಕುವುದು ಸಮಾಜದ ಆರೋಗ್ಯಕ್ಕೆ ಪ್ರಾಚೀನರು ಕೊಡುಗೆಯಾಗಿದೆ,(ಏಜೆನ್ಸೀಸ್).