Astrology 
ಧಾರ್ಮಿಕ

Astrology: ಈ 4 ಕನಸುಗಳು ಬಿದ್ದರೆ ಯಾರಿಗೂ ಹೇಳಬೇಡಿ! ಹೇಳಿದರೆ ಉಲ್ಟಾ ಆಗುತ್ತೆ ರಿಸಲ್ಟ್!

ಬೆಂಗಳೂರು: ನಮಗೆ ರಾತ್ರಿ ಮಲಗಿದಾಗ ತರಹೇವಾರಿ ಕನಸುಗಳು ಬೀಳುವುದು ಸಹಜ. ಕೆಲವು ಕನಸುಗಳು ಬೆಳಿಗ್ಗೆ ಎದ್ದ ತಕ್ಷಣ ಮರೆತು ಹೋದರೆ, ಇನ್ನು ಕೆಲವು ಕನಸುಗಳು(Astrology) ನಮ್ಮ ಮನಸ್ಸಿನಲ್ಲಿ ಹಾಗೇ ಉಳಿದುಬಿಡುತ್ತವೆ. ಇಂತಹ ಸಮಯದಲ್ಲಿ ನಾವು ಸಾಮಾನ್ಯವಾಗಿ ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಕುಟುಂಬದವರಿಗೋ ಅಥವಾ ಸ್ನೇಹಿತರಿಗೋ ಆ ಕನಸಿನ ಬಗ್ಗೆ ಹೇಳಿಕೊಳ್ಳುತ್ತೇವೆ.
ಆದರೆ, ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿರುವ 'ಸ್ವಪ್ನ ಶಾಸ್ತ್ರ' (ಕನಸಿನ ವಿಜ್ಞಾನ) ಪ್ರಕಾರ, ನಮಗೆ ಬೀಳುವ ಎಲ್ಲಾ ಕನಸುಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳಬಾರದು. ಕೆಲವು ವಿಶೇಷ ಕನಸುಗಳನ್ನು ರಹಸ್ಯವಾಗಿಟ್ಟರೆ ಮಾತ್ರ ಅದರ ಪೂರ್ಣ ಲಾಭ ನಮಗೆ ಸಿಗುತ್ತದೆ. ಒಂದು ವೇಳೆ ಆ ಕನಸುಗಳನ್ನು ಬೇರೆಯವರಿಗೆ ಹೇಳಿದರೆ, ಅವುಗಳಿಂದ ಸಿಗಬೇಕಾದ ಒಳ್ಳೆಯ ಫಲಿತಾಂಶಗಳು ಸಿಗುವುದಿಲ್ಲ, ಬದಲಿಗೆ ಉಲ್ಟಾ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತದೆ.
ಹಾಗಾದರೆ, ಸ್ವಪ್ನ ಶಾಸ್ತ್ರದ ಪ್ರಕಾರ ನಾವು ಯಾರೊಂದಿಗೂ ಹಂಚಿಕೊಳ್ಳಬಾರದ ಆ 4 ಅದೃಷ್ಟದ ಕನಸುಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ.

1. ಕನಸಿನಲ್ಲಿ ದೇವರು ಬಂದು ಆಶೀರ್ವಾದ ಮಾಡುವುದು

ನಿಮ್ಮ ಕನಸಿನಲ್ಲಿ ದೇವರು ಕಾಣಿಸಿಕೊಂಡು, ನಿಮಗೆ ಆಶೀರ್ವಾದ ಮಾಡುತ್ತಿರುವಂತೆ ಕಂಡುಬಂದರೆ ಅದು ಅತ್ಯಂತ ಶುಭ ಸಂಕೇತವಾಗಿದೆ. ಇದರ ಅರ್ಥ ನಿಮ್ಮ ಆತ್ಮ ತುಂಬಾ ಶುದ್ಧವಾಗಿದೆ ಮತ್ತು ನೀವು ನಿಜವಾಗಿಯೂ ದೇವರ ಕೃಪೆಗೆ ಪಾತ್ರರಾಗಿದ್ದೀರಿ ಎಂದಾಗಿದೆ. ಈ ಕನಸು ನಿಮ್ಮ ಜೀವನದಲ್ಲಿ ದೊಡ್ಡ ಯಶಸ್ಸು ಸಿಗುವುದನ್ನು ಸೂಚಿಸುತ್ತದೆ. ಆದರೆ, ಈ ಖುಷಿಯ ವಿಷಯವನ್ನು ನೀವು ಯಾರೊಂದಿಗಾದರೂ ಹಂಚಿಕೊಂಡರೆ, ಆ ಕನಸಿನ ಶುಭ ಪರಿಣಾಮ ಕಡಿಮೆ ಆಗುತ್ತದೆ. ಆದ್ದರಿಂದ ಇಂತಹ ಕನಸುಗಳನ್ನು ನಿಮ್ಮ ಮನಸ್ಸಿನಲ್ಲೇ ರಹಸ್ಯವಾಗಿಡುವುದು ಒಳ್ಳೆಯದು.

2. ತಂದೆ-ತಾಯಿಗೆ ನೀರು ಕೊಡುವುದು

ಕನಸಿನಲ್ಲಿ ನೀವು ನಿಮ್ಮ ಹೆತ್ತವರಿಗೆ (ತಂದೆ ಅಥವಾ ತಾಯಿಗೆ) ಕುಡಿಯಲು ನೀರು ಕೊಡುತ್ತಿರುವಂತೆ ದೃಶ್ಯ ಕಂಡರೆ, ಅದು ನಿಮ್ಮ ಭವಿಷ್ಯದ ಪ್ರಗತಿಯನ್ನು ತೋರಿಸುತ್ತದೆ. ಮುಂಬರುವ ದಿನಗಳಲ್ಲಿ ನೀವು ಉದ್ಯೋಗದಲ್ಲಿ ಅಥವಾ ವ್ಯವಹಾರದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕಾಣಲಿದ್ದೀರಿ ಎಂಬುದರ ಸಂಕೇತವಿದು. ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ, ಈ ಕನಸಿನ ಬಗ್ಗೆ ಬೇರೆಯವರಿಗೆ ಹೇಳುವುದರಿಂದ ಅದರ ಸಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ.

3. ಗೋಮಾತೆಯ (ಹಸು) ಸೇವೆ ಮಾಡುವುದು

ಸನಾತನ ಧರ್ಮದಲ್ಲಿ ಹಸುವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಹಸುವಿನಲ್ಲಿ ಮುಕ್ಕೋಟಿ ದೇವತೆಗಳು ವಾಸವಾಗಿದ್ದಾರೆ ಎಂಬ ನಂಬಿಕೆಯಿದೆ. ಹೀಗಾಗಿ, ಕನಸಿನಲ್ಲಿ ನೀವು ಹಸುವಿಗೆ ಆಹಾರ ನೀಡುತ್ತಿರುವುದು ಅಥವಾ ಅದರ ಸೇವೆ ಮಾಡುತ್ತಿರುವುದು ಕಂಡುಬಂದರೆ ಅದು ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ ಎಂದೇ ಅರ್ಥ. ಇಂತಹ ಕನಸು ಬಿದ್ದ ಮರುದಿನ ನೀವು ನಿಜವಾಗಿಯೂ ಹಸುವಿಗೆ ಹುಲ್ಲು ಅಥವಾ ಆಹಾರ ನೀಡಬೇಕು. ಆದರೆ, ಈ ಕನಸಿನ ಬಗ್ಗೆ ಯಾರಿಗೂ ಬಾಯಿ ಬಿಡಬಾರದು.

4. ಮನೆಯ ಬಾಗಿಲುಗಳು ತೆರೆದಿರುವುದು

ನಿಮ್ಮ ಕನಸಿನಲ್ಲಿ ದೊಡ್ಡ ಬಾಗಿಲುಗಳು ತಾವಾಗಿಯೇ ತೆರೆದುಕೊಳ್ಳುತ್ತಿರುವುದನ್ನು ನೀವು ನೋಡಿದರೆ, ಅದು ನಿಮ್ಮ ದುರಾದೃಷ್ಟ ದೂರವಾಗಿ, ಅದೃಷ್ಟದ ಬಾಗಿಲು ತೆರೆಯುತ್ತಿದೆ ಎಂಬುದರ ಸಂಕೇತವಾಗಿದೆ. ನಿಮ್ಮ ಕಷ್ಟಗಳು ಮುಗಿಯುವ ಸಮಯ ಬಂದಿದೆ ಎಂದು ಇದು ತಿಳಿಸುತ್ತದೆ. ಇಂತಹ ಕನಸು ಬಿದ್ದ ತಕ್ಷಣ, ನೀವು ಯಾರಿಗೂ ಹೇಳದೆಯೇ ಬಡವರಿಗೆ ಅಥವಾ ನಿರ್ಗತಿಕರಿಗೆ ಹಳದಿ ಅಥವಾ ಕಿತ್ತಳೆ ಬಣ್ಣದ ಬಟ್ಟೆಗಳನ್ನು ದಾನ ಮಾಡಬೇಕು. ಆದರೆ ದಾನ ಮಾಡಿದ ವಿಷಯವನ್ನಾಗಲಿ ಅಥವಾ ಬಾಗಿಲು ತೆರೆದ ಕನಸಿನ ವಿಷಯವನ್ನಾಗಲಿ ಯಾರೊಂದಿಗೂ ಹಂಚಿಕೊಳ್ಳಬಾರದು. ಖಾಸಗಿಯಾಗಿ ಇಟ್ಟಾಗ ಮಾತ್ರ ಇದರ ಸಂಪೂರ್ಣ ಫಲ ನಿಮಗೆ ಸಿಗುತ್ತದೆ,(ಏಜೆನ್ಸೀಸ್​).