Ananda Mimamsa 
ಧಾರ್ಮಿಕ

ಆನಂದ ಮೀಮಾಂಸೆ

ಬಾಬುಪ್ರಸಾದ್​ ಮೋಡಿಸ್​
ತ್ಯಾಗ ಮತ್ತು ಊಧಿÌರ್ೕಕರಣ: ಈ ಎರಡು ಪರಿಕಲ್ಪನೆಗಳ ನಡುವಿನ ಭೇದವನ್ನು ಸರಳವಾಗಿ ಹೀಗೆ ಗ್ರಹಿಸಬಹುದು: ತ್ಯಾಗ ಹೇಳುತ್ತದೆ ಬಿಡು; ಊಧಿÌರ್ೕಕರಣ ಹೇಳುತ್ತದೆ ಮೇಲೆ ಏರು. ತ್ಯಾಗ ಇಚ್ಛಾಶಕ್ತಿಯನ್ನು ಶಿಸ್ತುಗೊಳಿಸುತ್ತದೆ; ಊಧಿÌರ್ೕಕರಣ ಹೃದಯವನ್ನು ಪರಿಷ್ಕರಿಸುತ್ತದೆ. ಒಂದು ವ್ಯಕ್ತಿಯ ಸಂಕಲ್ಪವನ್ನು ಗಟ್ಟಿಗೊಳಿಸಿದರೆ, ಮತ್ತೊಂದು ಅವನ ಮನಸ್ಸನ್ನು ಉನ್ನತ ಸ್ತರಕ್ಕೆ ಕರೆದುಕೊಂಡು ಹೋಗುತ್ತದೆ.
ಭೌತಿಕ ಮಹತ್ವಾಕಾಂಕ್ಷೆ ಮತ್ತು ಆಂತರಿಕ ತಳಮಳಗಳ ನಡುವೆ ದಿಕ್ಕು ತೋಚದೆ ಸಿಲುಕಿಕೊಂಡಿರುವ ಆಧುನಿಕ ಮಾನವನಿಗೆ ಈ ವ್ಯತ್ಯಾಸ ಒಂದು ಸಮತೋಲನ ನೀಡುತ್ತದೆ. ಸಣ್ಣ ತೃಪ್ತಿಗಳಿಂದ ಶಾಶ್ವತ ಸಂತೋಷದ ಕಡೆ ನಡೆದ ಆ ಆರೋಹಣದಲ್ಲೇ ಒಂದು ಕಾಲಾತೀತ ಆಧ್ಯಾತ್ಮಿಕ ಮನೋವಿಜ್ಞಾನ ಅಡಗಿದೆ.
ತ್ಯಾಗ ಒಂದು ಪ್ರಾರಂಭ; ಊಧಿÌರ್ೕಕರಣ ಒಂದು ಪ್ರಯಾಣ. ಒಂದರಿಂದ ಮೊದಲ್ಗೊಂಡು, ಮತ್ತೊಂದರ ಮೂಲಕ ಸಾಗಿ, ಆಂತರಿಕ ಮುಕ್ತಿಯ ತೀರ ತಲುಪುವ ಈ ಅನುಭವ ಯಾತ್ರೆಯನ್ನೇ ಉಪನಿಷತ್ ಸಂಸ್ಕೃತಿ ಮೋಕ್ಷ ಎಂದು ಕರೆಯುತ್ತದೆ. ಆ ಮೋಕ್ಷ ಹೊರಗಿನ ಯಾವ ಸ್ಥಳದಲ್ಲೂ ಇಲ್ಲ; ಅದು ನಮ್ಮ ಅಂತಃಕರಣದ ಸ್ವಭಾವ. ನಾವೇ ಎಂದು ಅರಿತಾಗ, ತ್ಯಾಗ ಸ್ವಯಂ ಪೂರ್ಣತೆಯಾಗಿ ಹೊಳೆಯುತ್ತದೆ.