Camphor bath water benefits  
ಧಾರ್ಮಿಕ

ಕರ್ಪೂರ ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ಎಷ್ಟೆಲ್ಲ ಲಾಭವಿದೆ ಗೊತ್ತಾ?..Camphor bath water benefits

ಪ್ರಮುಖ ಮುಖ್ಯಾಂಶಗಳು

  • ದೇವರ ಆರಾಧನೆಗೆ ಮಾತ್ರವಲ್ಲ ದುಷ್ಟ ದೃಷ್ಟಿಗಳ ನಿವಾರಣೆಗೂ ಕರ್ಪೂರ ಬೆಸ್ಟ್
  • ಕರ್ಪೂರವನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ಆಗುವ ಪ್ರಯೋಜನಗಳೇನು?
  • ರಾಹು, ಕೇತು, ಕೆಟ್ಟ ದೃಷ್ಟಿ ಸೇರಿದಂತೆ ನಕರಾತ್ಮಕ ಶಕ್ತಿ ನಿವಾರಣೆಗೆ ಕರ್ಪೂರ ಪ್ರಯೋಜನಕಾರಿ
Camphor bath water benefits : ಕ್ಯಾಂಫರ್​ ಲಾರೆಲ್​ ಎಂಬ ಮರದ ದಿಮ್ಮಿ ಹಾಗೂ ಬೇರುಗಳಿಂದ ತಯಾರಾಗುವ ಕರ್ಪೂರವನ್ನು ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆಗೆ ಬಳಸಲಾಗುತ್ತದೆ. ಇದರಿಂದ ಹೊರಬರುವ ಹೊಗೆಯ ಸುವಾಸನೆಯು ಸಕರಾತ್ಮಕ ಅಂಶವನ್ನು ದೂರ ಮಾಡಿ ಸಕರಾತ್ಮಕ ಚಿಂತನೆ ನೀಡುತ್ತದೆ ಎನ್ನುವುದು ಹಲವರ ನಂಬಿಕೆ. ಕರ್ಪೂರ ದೇವರಿಗೆ ಮಾತ್ರವಲ್ಲ ಆಯುರ್ವೇದ ಮುಲಾಮಿಗೆ, ಆರೋಗ್ಯಕರ ವಿಚಾರಕ್ಕೆ ಬಳಕೆಯಾಗುತ್ತದೆ. ಮತ್ತೊಂದು ಅಚ್ಚರಿ ವಿಚಾರ ಎಂದರೆ ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯದ ಪ್ರಕಾರ ಕರ್ಪೂರವನ್ನು ಸ್ನಾನ ಮಾಡುವಾಗ ಬಳಕೆ ಮಾಡಿದರೆ ನಾನಾ ಪ್ರಯೋಜನಗಳು ಇವೆ ಎನ್ನಲಾಗುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಕರ್ಪೂರವನ್ನು ಸಾಮಾನ್ಯವಾಗಿ ದೇವರಿಗೆ ಮಂಗಳಾರತಿ ಮಾಡುವಾಗ ಬಳಕೆ ಮಾಡುತ್ತೇವೆ. ಕೆಲವರು ಸೊಳ್ಳೆಗೆ ಮದ್ದು ಹಾಕಲು ಬಳಸುತ್ತಾರೆ. ಇನ್ನು ಇದರ ಎಣ್ಣೆಯು ಕೀಲು ನೋವು ಸ್ನಾಯು ಸೆಳೆತಕ್ಕೆ ಸಹಕಾರಿ ಎನ್ನಲಾಗುತ್ತದೆ. ಇದು ಪರಿಸರವನ್ನು ಶುದ್ಧೀಕರಿಸುತ್ತದೆ ಅಲ್ಲದೆ, ಇದರ ಸುವಾಸನೆಯು ಮನಸ್ಸಿಗೂ ಹಿತ ನೀಡುತ್ತದೆ ಎನ್ನಲಾಗಿದೆ.

ಕೆಟ್ಟ ದೃಷ್ಟಿಯಿಂದ ರಕ್ಷಿಸುವ ಕರ್ಪೂರ

ಕರ್ಪೂರವನ್ನು ನೀರಿನಲ್ಲಿ ಬೆರಸಿ ಸ್ನಾನ ಮಾಡಿಕೊಳ್ಳುವುದರಿಂದ ನಕರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಂಬಲಾಗಿದೆ. ಜೊತೆಗೆ ಕೆಟ್ಟ ದೃಷ್ಟಿಯು ನಿಮ್ಮ ಮೇಲೆ ಬೀಳದಂತೆ ಕಾಪಾಡುತ್ತದೆ ಎನ್ನುವ ನಂಬಿಕೆ ಇದೆ.

ಮನಸ್ಸು ಹಗುರ ಮಾಡುವ ಮದ್ದು

ಆಧುನಿಕ ಜೀವನಶೈಲಿಯಿಂದಾಗಿ ನೆಮ್ಮದಿಯಿಲ್ಲದಂತಾಗಿದೆ. ಹಣ ಮಾಡುವುದು, 24 ಗಂಟೆ ಕೆಲಸ, ಹಲವು ಚಿಂತೆ, ಟ್ರಾಫಿಕ್​ ಹೀಗೆ ಜೀವನ ಕಳೆದು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತೇವೆ. ಇದನ್ನು ಸರಿಪಡಿಸಿ ಮನಸ್ಸನ್ನು ಕೆಲಸವನ್ನು ಕರ್ಪೂರದ ನೀರು ಮಾಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಂಬಲಾಗುತ್ತದೆ.

ಇನ್ನೇನು ಲಾಭವಿದೆ?

ಕರ್ಪೂರದ ನೀರಿನಿಂದ ಸ್ನಾನ ಮಾಡುವುದರಿಂದ ಆಧ್ಯಾತ್ಮಿಕ ಅಡೆತಡೆ, ರಾಹು ಕೇತು ದೋಷಗಳು ಕಡಿಮೆ ಮಾಡುತ್ತದೆ, ನಕರಾತ್ಮಕ ಶಕ್ತಿಗಳು ದೂರವಾಗಿ, ಹೊಸ ಸಂಕಲ್ಪಕ್ಕೆ ದಾರಿ ಮಾಡಿಕೊಡುತ್ತದೆ ಎನ್ನಲಾಗಿದೆ. ಪಿತೃದೋಷ ಹಾಗೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವವರಿಗೆ ಇದು ಬೆಸ್ಟ್ ಮದ್ದು. ಕರ್ಪೂರದ ನೀರಿನಲ್ಲಿ ಸ್ನಾನ ಮಾಡಿದರೆ ಶುಕ್ರದೆಸೆ ಬಲಗೊಳ್ಳುತ್ತದೆ.

ಹೇಗೆ ಬಳಕೆ ಮಾಡಬೇಕು?

ಕರ್ಪೂರವನ್ನು ನೀರಿಗೆ ಹಾಕಿ ನಂತರ ಸ್ನಾನ ಮಾಡಬೇಕು. ಸೂಕ್ಷ್ಮ ಚರ್ಮವನ್ನು ಹೊಂದಿರುವವರು ವೈದ್ಯರ ಸಲಹೆ ಮೇರೆಗೆ ಬಳಕೆ ಮಾಡಬೇಕು. ಇನ್ನು ಸ್ನಾನ ಮಾಡುವಾಗ ಇದು ಕಣ್ಣಿನ ಒಳಗೆ ಹೋಗದಂತೆ ಜಾಗೃತವಹಿಸಬೇಕು, (ಏಜೆನ್ಸೀಸ್).