June Born Personality 
ಧಾರ್ಮಿಕ

ಕ್ಷಣದಲ್ಲೇ ಬದಲಾಗುತ್ತೆ ಮೂಡ್​​; ಜೂನ್​ ತಿಂಗಳಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತಾ ನೋಡಿ?..June Born Personality

ಪ್ರಮುಖ ಮುಖ್ಯಾಂಶಗಳು

  • ಜೂನ್​ ತಿಂಗಳಲ್ಲಿ ಹುಟ್ಟಿದವರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ?.
  • ಬಹಳ ಬೇಗ ಪ್ರೀತಿಸುತ್ತಾರೆ, ಆದರೆ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ.
  • ಜನರನ್ನು ನಂಬುವ ಗುಣವಿದೆ, ಆದರೆ ಎಂದಿಗೂ ಮೋಸ ಹೋಗೋದಿಲ್ಲ.
June Born Personality: ಜನವರಿಯಿಂದ ಡಿಸೆಂಬರ್​ವರೆಗೂ ಜನಿಸುವ ಮಕ್ಕಳಲ್ಲಿ ಒಂದೊಂದು ವಿಭಿನ್ನ ಗುಣಗಳು ಇರುತ್ತವೆ. ಇದೇ ರೀತಿ 12 ತಿಂಗಳ ಆರನೇ ಮಾಸವಾದ ಜೂನ್​ನಲ್ಲಿ ಜನಿಸಿದ ಮಗುವು ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವೆಲ್ಲ ಗುಣವನ್ನು ಹೊಂದಿರುತ್ತಾರೆ. ಲಕ್ಕಿ ನಂಬರ್, ನೆಚ್ಚಿನ ಕಲರ್​ ಯಾವುದು ಎನ್ನುವುದನ್ನು ತಿಳಿದುಕೊಳ್ಳೋಣ.

ಸಹಾಯ ಮಾಡುವುದರಲ್ಲಿ ಮುಂದು

ಜೂನ್​ ತಿಂಗಳಲ್ಲಿ ಹುಟ್ಟಿದವರ ಮನಸ್ಥಿತಿ ಒಮ್ಮೊಮ್ಮೆ ಹೇಗಿರುತ್ತದೆ ಎಂದು ತಿಳಿಯೋದೆ ಇಲ್ಲ. ಒಮ್ಮೆ ಕೋಪಗೊಂಡರೆ ಮತ್ತೊಮ್ಮೆ ತಮಾಷೆ, ತೀರಾ ಭಾವನಾತ್ಮತೆಯಿಂದ ಕಾಣುತ್ತಾರೆ. ಆದರೆ, ಅವರು ವಿನಮ್ರರು. ಅವರು ಯಾವಾಗಲು ಮತ್ತೊಬ್ಬರಿಗೆ ಸಹಾಯ ಮಾಡುವುದನ್ನೇ ಬಯಸುತ್ತಾರೆ. ಎಷ್ಟೇ ಕಷ್ಟದ ಸಮಯವಾದರೂ ಸಹಾಯ ಮಾಡಲು ಹಿಂದೇಟು ಹಾಕೋದಿಲ್ಲ.

ಕರುಣಾಮಯಿಗಳು

ಜೂನ್​ನಲ್ಲಿ ಜನಿಸಿದ ಮಕ್ಕಳು ಕರುಣಾಮಯಿಗಳು. ಎಲ್ಲರೊಂದಿಗೂ ಸ್ನೇಹದೊಂದಿಗೆ ಬಾಳ್ವೆ ಮಾಡಲು ಚಿಂತಿಸುತ್ತಾರೆ. ಉತ್ತಮ ಸಂಬಂಧವನ್ನು ಕಂಡುಕೊಳ್ಳುತ್ತಾರೆ. ಸುಲಭವಾಗಿ ಜನರನ್ನು ನಂಬುವುದಲ್ಲದೇ ಅವರನ್ನು ಅಗಾಧವಾಗಿ ಪ್ರೇಮಿಸುತ್ತಾರೆ. ಆದರೆ, ಅದನ್ನು ವ್ಯಕ್ತಪಡಿಸುವಲ್ಲಿ ಕೊಂಚ ನಿಧಾನ ಮಾಡುತ್ತಾರೆ. ಜೂನ್​​ ತಿಂಗಳಲ್ಲಿ ಜನಿಸಿದ ಮಕ್ಕಳು ಎಂದಿಗೂ ಯಾರನ್ನು ನೋಯಿಸೋದಿಲ್ಲ. ಮೋಸವು ಮಾಡೋದಿಲ್ಲ. ಮೋಸ ಹೋಗಲ್ಲ.

ಕಲೆಗಳಲ್ಲಿ ಆಸಕ್ತಿ ಹೆಚ್ಚು

ಜೂನ್​ ಮಾಸದಲ್ಲಿ ಜನಿಸಿದವರು ಹೆಚ್ಚು ಚಿತ್ರ ಬಿಡಿಸುವುದು, ಹಾಡುವುದು, ನೃತ್ಯ, ಮಾಡಲಿಂಗ್​ ಸೇರಿದಂತೆ ನಾನಾ ರೀತಿಯ ಕಲಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಇಚ್ಛಿಸುತ್ತಾರೆ. ಅವರ ಮಾತು ಮತ್ತೊಬ್ಬರಿಗೆ ಆಕರ್ಷಣೆಯಾದಂತೆ ಇರುತ್ತದೆ. ಅದರಿಂದಲೇ ಎಲ್ಲರೂ ಅವರನ್ನು ನೆಚ್ಚಿಕೊಳ್ಳುತ್ತಾರೆ. ಈ ಮಾಸದಲ್ಲಿ ಜನಿಸಿದವರು ಬುದ್ಧಿವಂತರು. ಯಾವುದೇ ಕೆಲಸ ಮಾಡುವಾಗ ದೃಢಸಂಕಲ್ಪ ಹೊಂದಿರುತ್ತಾರೆ. ಎಲ್ಲರಲ್ಲಿಯೂ ವಿಶೇಷತೆಯನ್ನು ಕಾಣುತ್ತಾರೆ.

ಯೋಚಿಸಿ ನಿರ್ಧರಿಸುವವರು

ಯಾರೇ ಏನೇ ಹೇಳಿದರು ಅದನ್ನು ಕೇಳಿಸಿಕೊಂಡು ನಂತರ ಅದು ಸರಿಯೋ ಅಥವಾ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೋ ಎನ್ನುವುದನ್ನು ತುಲನೆ ಮಾಡಿ ನೋಡಿ ಆನಂತರ ಮುಂದಿನ ಹೆಜ್ಜೆ ಇಡುವ ಸಾಮರ್ಥ್ಯವನ್ನು ಜೂನ್​ನಲ್ಲಿ ಜನಿಸಿದವರು ಹೊಂದಿರುತ್ತಾರೆ. ಹೆಚ್ಚಿನ ಸಮಯ ಪ್ರಕೃತಿ ಜೊತೆ ಕಳೆಯಲು ಇಚ್ಛಿಸುವವರು. 9 ಮತ್ತು ಆರು ಅದೃಷ್ಟದ ಸಂಖ್ಯೆಯಾಗಿದ್ದು, ಹಸಿರು, ಹಳದೆ, ಕೆನ್ನೇರಳೆ, ಪಿಂಕ್​ ಅವರ ನೆಚ್ಚಿನ ಬಣ್ಣ. ವಜ್ರ, ಚಿನ್ನ ಮುತ್ತುಗಳು ಇಷ್ಟದ ವಸ್ತುಗಳು, (ಏಜೆನ್ಸೀಸ್)