ಧಾರ್ಮಿಕ

ಮನೆಯಲ್ಲಿ ಈ ವಸ್ತುಗಳಿದ್ದರೆ ಇಂದೇ ಬಿಸಾಡಿ; ಇಲ್ಲದಿದ್ರೆ ದಾರಿದ್ರ್ಯ ಗ್ಯಾರಂಟಿ ಎನ್ನುತ್ತೆ ವಾಸ್ತು..Vastu Tips

  • ವಾಸ್ತು ಪ್ರಕಾರ ಮನೆಯಲ್ಲಿ ಬಳಕೆ ಮಾಡದ ವಸ್ತುಗಳನ್ನು ಶೇಖರಿಸಿ ಇಡುವುದು ಸರಿಯೇ?.

  • ಒಡೆದ ಮೂರ್ತಿ, ಹರಿದ ಚಪ್ಪಲಿ, ವಿದ್ಯುತ್ ಉಪಕರಣ ಇಟ್ಟುಕೊಳ್ಳುವುದು ತಪ್ಪು.

  • ಪಾಸಿಟಿವಿಟಿ, ಗುಡ್​ವೈಬ್ಸ್​​, ಕುಟುಂಬದಲ್ಲಿ ಶಾಂತಿ ತುಂಬಿರಲು ಕೆಲವು ವಸ್ತು ಬಿಸಾಡಿ.

negative energy items vastu: ನೀವು ವಾಸಿಸುವ ಮನೆಯಲ್ಲಿ ಬಳಕೆಯಾಗದ ಮತ್ತು ಗಲೀಜಾದ ವಸ್ತುಗಳನ್ನು ಇಟ್ಟುಕೊಂಡು ಮನೆಯನ್ನು ಅಸ್ತವ್ಯಸ್ತವಾಗಿಟ್ಟುಕೊಳ್ಳುವುದು ಮನೆಯ ಪಾಸಿಟಿವ್ ಎನರ್ಜಿ, ಕುಟುಂಬದ ನೆಮ್ಮದಿ, ಸಾಮರಸ್ಯ ಮತ್ತು ಯೋಗಕ್ಷೇಮದ ಮೇಲೆ ನೇರ ಪ್ರಭಾವ ಬೀರುತ್ತದೆ. ಹೀಗಾಗಿ ವಾಸ್ತು ಪ್ರಕಾರ ಮನೆಯಲ್ಲಿ ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಕು ಮತ್ತು ಯಾವುದನ್ನು ತಕ್ಷಣ ತೆಗೆದುಹಾಕಬೇಕು ಎಂಬುದರ ಸಂಪೂರ್ಣ ಪಟ್ಟಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಒಡೆದ ಮೂರ್ತಿ ತೆಗೆದು ಹಾಕಿ

ಯಾವುದೇ ಬಳಕೆಯಲ್ಲಿಲ್ಲದೆ ಅನಗತ್ಯವಾಗಿ ಸಂಗ್ರಹಿಸಿಟ್ಟ ವಸ್ತುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಿ, ಮನೆಯ ಸಮೃದ್ಧಿಗೆ ತಡೆಯೊಡ್ಡುತ್ತವೆ ಹೀಗಾಗಿ ನಿಮ್ಮ ಮನೆಯಲ್ಲಿ ಒಡೆದ ಮೂರ್ತಿ ಮತ್ತು ಧಾರ್ಮಿಕ ವಸ್ತುಗಳನ್ನು ಇಡಬಾರದು. ಇದ್ದರೆ ಅದನ್ನು ಇಂದೇ ತೆಗೆದು ಹಾಕಿ. ಇವುಗಳನ್ನು ಪೂಜೆಗೆ ಸೂಕ್ತವಲ್ಲ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಕುಟುಂಬದ ಸಂಪ್ರದಾಯದಂತೆ ಇವುಗಳನ್ನು ವಿಧಿಪೂರ್ವಕವಾಗಿ ವಿಸರ್ಜಿಸುವುದು ಅಥವಾ ಸೂಕ್ತ ಸ್ಥಳದಲ್ಲಿ ಮರುಸ್ಥಾಪಿಸುವುದು ಒಳ್ಳೆಯದು.

ಬಳಕೆಯಾಗದ ವಿದ್ಯುತ್ ಉಪಕರಣ

ಮನೆಯಲ್ಲಿ ಒಡೆದ ವಿದ್ಯುತ್​ ಉಪಕರಣವನ್ನು ಬಳಕೆಯಲ್ಲಿಟ್ಟುಕೊಳ್ಳುವುದರಿಂದ ಜಡತೆಯಿಂದ ಕೂಡಿದ ಭಾವನೆ ಮೂಡುತ್ತದೆ. ಆ ವಸ್ತು ನಿಜಕ್ಕೂ ಉಪಯೋಗಕ್ಕೆ ಬರುವುದಾದರೆ ಅದನ್ನು ರಿಪೇರಿ ಮಾಡಿಸಿಕೊಂಡು ಬಳಕೆ ಮಾಡಿ ಇಲ್ಲವಾದಲ್ಲಿ..ಅದನ್ನು ಬಿಸಾಡುವುದೇ ಲೇಸು.

ಸೋರುವ ನಲ್ಲಿ

ವಾಸ್ತು ಪ್ರಕಾರ ನೀರು ಸಂಪತ್ತು, ಮನೆಗೆ ಸಮೃದ್ಧಿ ಹೊತ್ತು ತರುವ ಸಂಕೇತವಾಗಿದೆ. ಹೀಗಾಗಿ ಮನೆಯಲ್ಲಿ ನಲ್ಲಿಗಳು ಅಥವಾ ನೀರಿನ ಪೈಪ್‌ಗಳಿಂದ ನೀರು ಸೋರುತ್ತಿದ್ದರೆ, ಅದು ಆರ್ಥಿಕ ನಷ್ಟ ಅಥವಾ ಅನಗತ್ಯ ಖರ್ಚುಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ನಂಬಲಾಗಿದೆ. ನಿಮ್ಮ ಮನೆಯಲ್ಲಿ ಸೋರುವ ನಲ್ಲಿ ಇದ್ದರೆ ಬೇಗನೆ ಸರಿಪಡಿಸಿ.

ಹಳೆಯದಾದ ಮತ್ತು ಕಿತ್ತು ಹೋದ ಪಾದ ರಕ್ಷೆ

ಹಳೆಯದಾದ ಅಥವಾ ಕಿತ್ತು ಹೋದ ಪಾದರಕ್ಷೆಗಳು ನಿಮ್ಮ ಮನೆಯಲ್ಲಿ ಸಂಗ್ರಹಿಸಿ ಇಡುವುದರಿಂದ ಇದು ಮನೆಗೆ ನೆಗೆಟಿವಿಟಿ ತರುತ್ತದೆ. ದುಬಾರಿ ಚಪ್ಪಲಿ ಎಂದು ಹಾಗೆ ಇಟ್ಟುಕೊಳ್ಳುವುದು ಸರಿಯಲ್ಲ. ಇದು ಹೊಸ ಶಕ್ತಿಯು ಮುಂದೆ ಸಾಗಲು ಅಡ್ಡಿಪಡಿಸುತ್ತದೆ. ಬಳಕೆಗೆ ಬಾರದ, ಒಡೆದ ಬೂಟುಗಳು ಅಥವಾ ಚಪ್ಪಲಿಗಳನ್ನು ತಕ್ಷಣವೇ ತೆಗೆದುಹಾಕಿ.

ಒಡೆದ ಪಾತ್ರೆ ಇಡಬೇಡಿ

ವಾಸ್ತು ಪ್ರಕಾರ ಅಡುಗೆ ಮನೆಯು ಅಗ್ನಿ ದೇವನನ್ನಾಗಿ ಪರಿಗಣಿಸಲಾಗುತ್ತದೆ. ಇದು ಸಮೃದ್ಧಿ ಸಂಕೇತ ಅಡುಗೆಮನೆಯಲ್ಲಿ ಬಿರುಕುಬಿಟ್ಟ ತಟ್ಟೆಗಳು, ಚೂರುಬಿದ್ದ ಕಪ್‌ಗಳು ಅಥವಾ ತೀವ್ರವಾಗಿ ಹಾನಿಗೊಳಗಾದ ಪಾತ್ರೆಗಳನ್ನು ಇಟ್ಟುಕೊಳ್ಳುವುದು ನೆಗೆಟಿವಿ, ಸಂಬಂಧದಲ್ಲಿನ ಸಾಮರಸ್ಯಕ್ಕೆ ಅಡ್ಡಿಯನ್ನುಂಟು ಮಾಡಬಹುದು, (ಏಜೆನ್ಸೀಸ್).