ಕಾರಣವೇ ಇಲ್ಲದೇ, ಬೇಡದ ವಿಚಾರಕ್ಕೆ ಹೆಚ್ಚು ಆಲೋಚಿಸುತ್ತಿದ್ದೀರಾ?.
ನಿಮ್ಮ ಕೈ, ಕತ್ತು ಅಥವಾ ಬ್ಯಾಗ್ನಲ್ಲಿ ಈ ರತ್ನದ ಸ್ಟೋನ್ನ್ನು ಧರಿಸಿ ನೋಡಿ.
ಅತಿಯಾಗಿ ಆಲೋಚಿಸುವುದರಿಂದ ದೂರವಿಡಲು ಸಹಾಯ ಮಾಡುತ್ತದೆ ರಾಕ್ ಕ್ರಿಸ್ಟಲ್, ಜಂಬುಮಣಿ, ಚಂದ್ರಕಾಂತ ಶಿಲೆ ಜೆಮ್ಸ್ಟೋನ್ಗಳು
gemstones to wear to stop overthinking: ಕೆಲವೊಂದು ಸಣ್ಣ ವಿಚಾರವನ್ನು ಸಹ ನಾವು ಸಾಕಷ್ಟು ಆಲೋಚನೆ ಮಾಡುತ್ತೇವೆ. ಆದರೆ, ಒಂದೇ ವಿಚಾರದ ಬಗ್ಗೆ ಆಧಾರವೇ ಇರದೇ ರಾತ್ರಿ-ಹಗಲು ಎನ್ನದೆ ಚಿಂತಿಸುವುದು..ಕೆಲವೊಂದು ಸಮಸ್ಯೆಗೆ ಈಡು ಮಾಡುತ್ತದೆ. ಓವರ್ ಥಿಂಕಿಂಗ್ ಕಿಲ್ಸ್ ಎನ್ನುವಂತೆ, ನಿತ್ಯ ಕೊರಗುವಂತೆ ಮಾಡುತ್ತದೆ. ಇದು ತಪ್ಪು ಎಂದು ತಿಳದರೂ ಸಹ ಅದರಿಂದ ಹೊರ ಬರಲಾಗದೆ ಒತ್ತಡಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಈ ಅತಿಯಾದ ಆಲೋಚನೆ ಮಾನಸಿಕವಾಗಿ ಕುಗ್ಗಿಸುತ್ತದೆ ಮಾತ್ರವಲ್ಲದೇ , ಭಾವನಾತ್ಮಕ ಸಮತೋಲನವನ್ನೂ ಹಾಳುಮಾಡುತ್ತದೆ.
ಹೀಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ಜೆಮ್ ಸ್ಟೋನ್ ಧರಿಸುವುದರಿಂದ ಮನಸ್ಸನ್ನು ಶಾಂತಗೊಳಿಸಬಹುದು. ಆಲೋಚನೆಗಳಲ್ಲಿ ಸ್ಪಷ್ಟತೆ ಪಡೆಯಬಹುದು ಎಂದು ನಂಬಲಾಗುತ್ತದೆ. ಹೀಗಾಗಿ ಓವರ್ಥಿಂಕ್ಗೆ ಬ್ರೇಕ್ ಹಾಕಲು ಯಾವ ರತ್ನಗಳನ್ನು ನಿಮ್ಮಲ್ಲಿಟ್ಟುಕೊಳ್ಳಬೇಕು ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.
ರಾಕ್ ಕ್ರಿಸ್ಟಲ್ ಅಥವಾ ಕ್ಲಿಯರ್ ಕ್ವಾರ್ಟ್ಸ್ ಎಂದು ಕರೆಯುವ ಸ್ಟೋನ್ ಸಿಲಿಕಾನ್ ಡೈ ಆಕ್ಸೈಡ್ನಿಂದ ರೂಪುಗೊಂಡಿದ್ದಾಗಿದೆ. ಇದೊಂದು ಪಾರದರ್ಶಿಕ ಖನಿಜವಾಗಿದೆ. ಇದನ್ನು ಮಾಸ್ಟರ್ ಹೀಲರ್ ಎಂತಲೂ ಕರೆಯಲಾಗುತ್ತದೆ. ಇದು ಏಕಾಗ್ರತೆ ವೃದ್ಧಿಸಿಕೊಳ್ಳಲು, ಭಾವನಾತ್ಮಕವಾಗಿ ತಟಸ್ಥತೆ ಕಾಯ್ದುಕೊಳ್ಳಲು ಇದನ್ನು ಧರಿಸಲಾಗುತ್ತದೆ. ಕ್ವಾರ್ಟ್ಸ್ ಮಾನಸಿಕ ಶಿಸ್ತು ಮತ್ತು ಜಾಗೃತಿಯನ್ನು ನೀಡುತ್ತದೆ, ಇದು ಅನಗತ್ಯ ಚಿಂತೆಗಳನ್ನು ದೂರವಿಡಲು ಸಹಕರಿಸುತ್ತದೆ.
ಜಂಬುಮಣಿ ಅಥವಾ ಅಮೆಥಿಸ್ಟ್ ಎಂದು ಕರೆಸಿಕೊಳ್ಳುವ ಕಲ್ಲು ನಿಮ್ಮ ಮನಸ್ಸನ್ನು ಶಾಂತಿಗೊಳಿಸಲು ಸಹಾಯ ಮಾಡುತ್ತದೆ. ವೇಗವಾಗಿ ಕೆಲಸ, ಎಲ್ಲದ್ರಲ್ಲೂ ಇರುವ ರಶ್ನೆಸ್ ಅನ್ನು ಕಡಿಮೆ ಮಾಡುತ್ತದೆ. ಒತ್ತಡಕ್ಕೊಳಗಾದ ಮನಸ್ಸನ್ನು, ಆತಂಕದಲ್ಲಿರುವುದನ್ನು ಕಡಿಮೆ ಮಾಡಲು ಇದನ್ನು ಧರಿಸಲಾಗುತ್ತದೆ. ಇದು ಉತ್ತಮ ನಿದ್ರೆಗೂ ಒಳ್ಳೆಯ ಆಯ್ಕೆ.
ಮೂನ್ ಸ್ಟೋನ್ ಎಂತಲೂ ಕರೆಸಿಕೊಳ್ಳುವ ಚಂದ್ರಕಾಂತ ಶಿಲೆ ನಿಮ್ಮ ಅತಿಯಾದ ಆಲೋಚನೆಗೆ ಬ್ರೇಕ್ ಹಾಕಲು ಉತ್ತಮ ಆಯ್ಕೆ. ಮೂನ್ಸ್ಟೋನ್, ಏರಿಳಿತವಾಗುವ ಭಾವನೆಗಳನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.ಇದು ಆಲೋಚನೆಗಳು ಶಾಂತವಾಗಿ ಹರಿಯುವಂತೆ ಮಾಡುತ್ತದೆ. ಜೀವನದಲ್ಲಿ ಬದಲಾವಣೆಗಳಾದಾಗ ಅಥವಾ ಒತ್ತಡದ ಸಮಯದಲ್ಲಿ ಈ ರತ್ನದ ಹಿತವಾದ ಶಕ್ತಿಯು ವಿಶೇಷವಾಗಿ ನೆರವಾಗುತ್ತದೆ.
ಈ ರತ್ನವನ್ನು 'ಮಾನಸಿಕ ರಕ್ಷಣೆಯ ಕಲ್ಲು' ಎಂದು ಕರೆಯಲಾಗುತ್ತದೆ. ನಕಾರಾತ್ಮಕ ಆಲೋಚನೆಗಳು ಮತ್ತು ಮಾನಸಿಕ ಬಳಲಿಕೆಯ ವಿರುದ್ಧ ಇದು ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಭಯದಿಂದಾಗಿ ಅತಿಯಾಗಿ ಯೋಚಿಸುವವರಿಗೆ ಈ ರತ್ನವು ಸ್ಪಷ್ಟತೆ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ. ಇದು ಮನಸ್ಸಿನ ಒಳಗಿನ ಗದ್ದಲವನ್ನು ಶಾಂತಗೊಳಿಸಿ, ಏಕಾಗ್ರತೆಯನ್ನು ಹೆಚ್ಚಿಸಲು ಬೆಂಬಲ ನೀಡುತ್ತದೆ.
ಸದಾ ಆತಂಕಕ್ಕೆ ಒಳಗಾದ ಮನಸ್ಸನ್ನು ಶಾಂತಗೊಳಿಸಲು ಬ್ಲೂ ಲೇಸ್ ಅಗೇಟ್ ಬಳಕೆ ಮಾಡಲಾಗುತ್ತದೆ. ಇದನ್ನು ಧರಿಸುವುದರಿಂದ ಮನಸ್ಸಿಗೆ ಬರುವ ಅನಗತ್ಯ ಗೊಂದಲ ಕಡಿಮೆಯಾಗಿ ಶಾಂತಿಯುವಾಗಿ ಬದುಕಲು ಸಹಕರಿಸುತ್ತದೆ. ಬ್ಲೂ ಲೇಸ್ ಅಗೇಟ್ ಶಾಂತ, ಅಭಿವ್ಯಕ್ತಿ ಮತ್ತು ಭಾವನಾತ್ಮಕ ನಿರಾಳತೆಯನ್ನು ಪ್ರೋತ್ಸಾಹಿಸುತ್ತದೆ. ಅತಿಯಾದ ಆಲೋಚನೆ, ಒತ್ತಡವನ್ನು ಕಡಿಮೆ ಮಾಡುತ್ತದೆ, (ಏಜೆನ್ಸೀಸ್).