Astrology (ಸಾಂದರ್ಭಿಕ ಚಿತ್ರ) 
ಜ್ಯೋತಿಷ್ಯ

ಶುಕ್ರದೆಸೆ ಆರಂಭ! 2026ರ ಧನಶಕ್ತಿ ರಾಜಯೋಗ ಯಾರಿಗೆ ವರ? ಯಾರಿಗೆ ಅದೃಷ್ಟ? Astrology

Astrology: ಜ್ಯೋತಿಷ್ಯದ ಪ್ರಕಾರ, ಮಂಗಳ ಗ್ರಹವು ಶಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸದ ಗ್ರಹವೆಂದು ಪರಿಗಣಿಸಲಾಗುತ್ತದೆ. ಮಂಗಳ ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗಲೆಲ್ಲಾ, ಅದರ ಪ್ರಭಾವವು ಕೆಲವೊಂದು ರಾಶಿಯವರ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ಮಂಗಳವು ಫೆಬ್ರವರಿ 23 ರಂದು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಶುಕ್ರದೊಂದಿಗಿನ ಸಂಯೋಗವು ಧನಶಕ್ತಿ ರಾಜ್ಯಯೋಗವನ್ನು ಸೃಷ್ಟಿಸಲಿದೆ.
ಈ ಸಮಯದಲ್ಲಿ ಮಂಗಳ ಗ್ರಹವು ರಾಹು, ಬುಧ ಮತ್ತು ಸೂರ್ಯನೊಂದಿಗೆ ಸಂಯೋಜಿಸುವುದರಿಂದ ಮಾರ್ಚ್​ 2 ರವರೆಗೆ ರಾಜ್ಯಯೋಗ ಇರುತ್ತದೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಕೆಲವೊಂದು ರಾಶಿಚಕ್ರದವರಿಗೆ ಉತ್ತಮ ಲಾಭವಿದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ...

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ಸಮಯ ಪ್ರಯೋಜನಕಾರಿಯಾಗಲಿದೆ. ಹೊಸ ಉದ್ಯೋಗ ಅವಕಾಶಗಳು ಸಿಗಲಿವೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ, ಸಂಬಳ ಹೆಚ್ಚಾಗಲಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ.

ಮಕರ ರಾಶಿ

ಮಕರ ರಾಶಿಯವರಿಗೆ ಗ್ರಹಗಳ ಸಂಚಾರವು ಬಹಳ ಪ್ರಯೋಜನ ಎಂದು ಹೇಳಲಾಗುತ್ತದೆ. ಪೂರ್ವಜರ ಆಸ್ತಿಗೆ ಸಂಬಂಧಿಸಿದ ಕೆಲವು ಪ್ರಯೋಜನಗಳನ್ನು ಪಡೆಯಲಿದ್ದೀರಿ. ಕಚೇರಿಯಲ್ಲಿ ಎಲ್ಲರೊಂದಿಗೆ ಸಹಬಾಳ್ವೆಯಿಂದ ಇರಲಿದ್ದೀರಿ. ವೆಚ್ಚಗಳು ಹೆಚ್ಚಾಗಲಿದ್ದು, ಹಣಕಾಸಿನ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ವಿದ್ಯಾರ್ಥಿಗಳು ಉತ್ತಮ ಫಲವನ್ನು ಪಡೆಯಲಿದ್ದಾರೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ಗ್ರಹಗಳ ಚಲನೆಯನ್ನು ಹೊಸ ಆರಂಭವನ್ನು ಸೂಚಿಸುತ್ತದೆ. ಉದ್ಯೋಗಿಗಳಿಗೆ ಉತ್ತಮಫಲ ಸಿಗುವಂತಹ ಸಮಯ ಇದಾಗಿದೆ. ಹೊಸ ಉದ್ಯಮವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದರೆ ಜಾಗರೂಕತೆಯಿಂದ ಇರುವುದು ಉತ್ತಮ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಉತ್ತಮ ಸಮಯ ಇದಾಗಿದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.