ಮೇಷ: ಆಸ್ತಿ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ವಸ್ತ್ರಗಳ ವ್ಯಾಪಾರದಲ್ಲಿ ಲಾಭ. ಮಕ್ಕಳ ಸಾಧನೆಗೆ ಸಾರ್ವಜನಿಕವಾಗಿ ಮೆಚ್ಚುಗೆ. ಶುಭಸಂಖ್ಯೆ: 6
ವೃಷಭ: ಪದವಿ ಕೈತಪ್ಪುವ ಸಾಧ್ಯತೆಯಿದೆ, ಜಾಗರೂಕರಾಗಿರಿ. ರೇಷ್ಮೆ ಕೃಷಿಕರಿಗೆ ಉತ್ತಮ ಲಾಭ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ.ಶುಭಸಂಖ್ಯೆ: 5
ಮಿಥುನ: ಧಾರ್ಮಿಕ ಕ್ಷೇತ್ರದ ಮುಖಂಡರಿಗೆ ವಿಶೇಷ ದಿನ. ನವದಂಪತಿಗಳಿಗೆ ಸಂತೋಷದ ದಿನ. ಅಪರಿಚಿತರಿಂದ ಸಹಾಯ ಸಿಗುವುದು. ಶುಭಸಂಖ್ಯೆ: 3
ಕಟಕ: ಸ್ವಂತ ಉದ್ಯಮದ ಮಹಿಳೆಯರಿಗೆ ಶುಭದಿನ. ಧಾರಾವಾಹಿ ನಿರ್ದೇಶಕರಿಗೆ ಆರ್ಥಿಕ ಪ್ರಗತಿ. ಖಾದಿ ವಸ್ತ್ರಗಳ ಮಾರಾಟದಲ್ಲಿ ಲಾಭ.ಶುಭಸಂಖ್ಯೆ: 1
ಸಿಂಹ: ನಿಮ್ಮ ಕೌಶಲಕ್ಕೆ ಕಚೇರಿಯಲ್ಲಿ ಅನಿರೀಕ್ಷಿತ ಪ್ರಶಂಸೆ. ದರ್ಜಿಗಳಿಗೆ ಅಧಿಕ ಸಂಪಾದನೆ. ನೂತನ ಗೃಹ ನಿರ್ಮಾಣಕ್ಕೆ ಚಾಲನೆ ಸಿಗಲಿದೆ. ಶುಭಸಂಖ್ಯೆ: 9
ಕನ್ಯಾ: ಆತ್ಮೀಯರ ಭೇಟಿ. ಕೃಷಿ ಭೂಮಿ ಖರೀದಿಗೆ ಸುಸಮಯ. ಸಹಕಾರಿ ಇಲಾಖೆಯಲ್ಲಿ ಉದ್ಯೋಗ ಪ್ರಾಪ್ತಿ. ದಿನಾಂತ್ಯದಲ್ಲಿ ಶುಭ ಸುದ್ದಿ.ಶುಭಸಂಖ್ಯೆ: 8
ತುಲಾ: ಅನಗತ್ಯ ವಿವಾದಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ. ವಿದೇಶದಿಂದ ಆತ್ಮೀಯರ ಆಗಮನವಾಗುವುದು. ಪ್ರಭಾವಿ ವ್ಯಕ್ತಿಗಳ ಸಂಪರ್ಕ.ಶುಭಸಂಖ್ಯೆ: 7
ವೃಶ್ಚಿಕ: ಅನಾರೋಗ್ಯದಿಂದ ತಾಯಿಯ ಚೇತರಿಕೆ. ಪ್ರತಿಭಾನ್ವಿತರಿಗೆ ಸಾರ್ವಜನಿಕ ಸನ್ಮಾನ. ಚಿತ್ರಕಲೆಯ ಪರಿಣಿತರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 9
ಧನಸ್ಸು: ಬ್ಯಾಂಕಿಂಗ್ ಉದ್ಯಮದಲ್ಲಿ ಲಾಭಗಳಿಸುವಿರಿ. ಆಸ್ತಿ ವಿವಾದ ಇತ್ಯರ್ಥವಾಗಲಿದೆ. ರಾಜಕೀಯ ರಂಗದವರಿಗೆ ಅಧಿಕಾರ ಪ್ರಾಪ್ತಿ. ಶುಭಸಂಖ್ಯೆ:8
ಮಕರ: ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ. ಆಸ್ಪತ್ರೆಯ ನೌಕರರಿಗೆ ವರ್ಗಾವಣೆ. ಔಷಧ ವ್ಯಾಪಾರಕ್ಕೆ ಇದ್ದ ಅಡೆತಡೆ ನಿವಾರಣೆ. ಶುಭಸಂಖ್ಯೆ: 6
ಕುಂಭ: ಸಹೋದ್ಯೋಗಿಗಳ ಸಹಕಾರದಿಂದ ಉದ್ದೇಶಿತ ಪ್ರಾಜೆಕ್ಟ್ ಮುಗಿಸುವಿರಿ. ಕನಸಿನ ನಿವೇಶನ ಸಿಗಲಿದೆ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 6
ಮೀನ: ಸಮುದ್ರದ ಉತ್ಪನ್ನಗಳ ವ್ಯಾಪಾರದಲ್ಲಿ ಲಾಭ. ಸೈನಿಕ ವೃತ್ತಿಗೆ ಆಯ್ಕೆಯಾಗುವ ಸಾಧ್ಯತೆ. ಆರ್ಥಿಕವಾಗಿ ಪ್ರಗತಿಯ ಕಾಣಲಿದ್ದೀರಿ. ಶುಭಸಂಖ್ಯೆ: 4