ಮೇಷ: ಹಿರಿಯ ಅಧಿಕಾರಿಗಳೊಂದಿಗೆ ವಾದ ಬೇಡ. ಕುಟುಂಬದಲ್ಲಿ ಆಸ್ತಿ ವಿವಾದ ಇತ್ಯರ್ಥ. ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 9
ವೃಷಭ: ಮಕ್ಕಳ ಕುರಿತಾಗಿ ಇದ್ದ ಆತಂಕ ನಿವಾರಣೆ ಆಗಲಿದೆ. ನಿವೇಶನ ಖರೀದಿಯಲ್ಲಿ ಎಚ್ಚರಿಕೆ ಇರಲಿ. ಕೊಟ್ಟ ಸಾಲ ತಿರುಗಿ ಬರಲಿದೆ. ಶುಭಸಂಖ್ಯೆ: 7
ಮಿಥುನ: ಪಾಲುದಾರಿಕೆಯಲ್ಲಿ ಕೈಗೊಂಡ ವ್ಯವಹಾರದಲ್ಲಿ ಪ್ರಗತಿ. ಅನಗತ್ಯ ವೆಚ್ಚಕ್ಕೆ ನಿಯಂತ್ರಣ ಹಾಕಿ. ಪ್ರಾಮಾಣಿಕತೆಗೆ ಮೆಚ್ಚುಗೆ ಸಿಗಲಿದೆ. ಶುಭಸಂಖ್ಯೆ: 2
ಕಟಕ: ವ್ಯಾವಹಾರಿಕ ಶತ್ರುಗಳ ಮೇಲೆ ಜಯ. ಆಹಾರ ಸೇವನೆಯಲ್ಲಿ ಎಚ್ಚರಿಕೆ ಇರಲಿ. ಆಸ್ತಿ ವಿಚಾರಗಳಲ್ಲಿ ಜಯ ದೊರೆಯಲಿದೆ. ಶುಭಸಂಖ್ಯೆ: 2
ಸಿಂಹ: ಮಕ್ಕಳಿಗೆ ಸಂಬಂಧಿಸಿ ಒಳ್ಳೆಯ ಸುದ್ದಿ ಕೇಳುವಿರಿ. ಪ್ರತಿಭೆಗೆ ಸೂಕ್ತ ಪುರಸ್ಕಾರ. ರಚನಾತ್ಮಕ ಕೆಲಸಗಳಿಂದ ಕಚೇರಿಯಲ್ಲಿ ಗೌರವ. ಶುಭಸಂಖ್ಯೆ: 5
ಕನ್ಯಾ: ಮನೆ ಖರೀದಿಗೆ ಶುಭದಿನ. ಸಹೋದರನಿಂದ ನೆರವು. ಮಹಿಳಾ ಉದ್ಯೋಗಿಗಳು ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಶುಭಸಂಖ್ಯೆ: 1
ತುಲಾ: ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಹೊಸ ಪಾಲುದಾರರ ಆಗಮನ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 8
ವೃಶ್ಚಿಕ: ಕೊಟ್ಟ ಹಣ ತಿರುಗಿ ಬರಲಿದೆ. ಗುರು ಹಿರಿಯರೊಂದಿಗೆ ವಿಧೇಯತೆಯಿಂದ ವರ್ತಿಸಿ. ಕಚೇರಿ ಬದಲಾವಣೆಗೆ ನಿರ್ಧರಿಸುವಿರಿ. ಶುಭಸಂಖ್ಯೆ: 2
ಧನುಸ್ಸು: ಕಿರುಚಿತ್ರ ನಿರ್ಮಾಪಕರಿಗೆ ಧನ ಲಾಭ. ಪ್ರಮುಖ ನಿರ್ಧಾರ ಕೈಗೊಳ್ಳಲು ಸುದಿನ. ಸರ್ಕಾರಿ ಕ್ಷೇತ್ರದ ಪ್ರಮುಖ ಒಪ್ಪಂದ ಪೂರ್ಣ. ಶುಭಸಂಖ್ಯೆ: 3
ಮಕರ: ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಹಣ ವೆಚ್ಚ. ಆಧ್ಯಾತ್ಮಿಕ ವಿಷಯಗಳತ್ತ ಮನಸ್ಸು. ಆನ್‌ಲೈನ್ ವ್ಯಾಪಾರದಲ್ಲಿ ಮೋಸ ಸಾಧ್ಯತೆ. ಶುಭಸಂಖ್ಯೆ: 7
ಕುಂಭ: ಉದ್ಯಮಸ್ಥ ಮಹಿಳೆಯರಿಗೆ ಅನಿರೀಕ್ಷಿತ ಲಾಭ. ಉದ್ಯೋಗ ಸ್ಥಳದಲ್ಲಿ ಹಿರಿಯರಿಂದ ಮಾರ್ಗದರ್ಶನ. ಷೇರುಗಳಿಂದ ಲಾಭ. ಶುಭಸಂಖ್ಯೆ: 4
ಮೀನ: ಕೆಲಸದ ಹೊರೆ ಮತ್ತಷ್ಟು ಹೆಚ್ಚಾಗಲಿದೆ. ಜೇನು ಮತ್ತು ರೇಷ್ಮೆ ಕೃಷಿಯಲ್ಲಿ ಲಾಭ. ನಾಟ್ಯ ಸಂಯೋಜಕರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 2