Nitya Bhavishya 
ದಿನ ಭವಿಷ್ಯ

ನಿತ್ಯಭವಿಷ್ಯ; ಈ ರಾಶಿಯವರಿಗೆ ಮಕ್ಕಳ ಪ್ರಗತಿಯಿಂದ ಸಂತಸ

ಮೇಷ: ಹೊಸ ಹುದ್ದೆಯ ನಿರ್ವಹಣೆಗೆ ಪರದಾಟ. ಮಾಧ್ಯಮ ಕ್ಷೇತ್ರದವರಿಗೆ ಕೀರ್ತಿ ಪ್ರಾಪ್ತಿ. ಹಾಸ್ಯ ಸಂಭಾಷಣೆಕಾರರಿಗೆ ವಿಶೇಷ ದಿನ. ಶುಭಸಂಖ್ಯೆ: 4
ವೃಷಭ: ಖರ್ಚಿಗೆ ಆಗುವಷ್ಟು ಆದಾಯವಿದೆ. ಸಾಲ ಮರುಪಾವತಿ ಮಾಡುವಿರಿ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆ. ಶುಭಸಂಖ್ಯೆ: 1
ಮಿಥುನ: ಹಿರಿಯ ಸಹೋದರಿಯಿಂದ ಧನಾಗಮನ. ಬ್ಯಾಂಕ್ ಉದ್ಯೋಗಿಗಳಿಗೆ ಕೆಲಸದ ಒತ್ತಡ. ಶತ್ರುಗಳಿಂದ ತೊಂದರೆಗೆ ಸಿಲುಕುವಿರಿ. ಶುಭಸಂಖ್ಯೆ: 2
ಕಟಕ: ಟ್ರಾವೆಲ್ಸ್ ಏಜೆನ್ಸಿಯವರಿಗೆ ಚಾಲಕರಿಂದ ಕಿರಿಕಿರಿ. ಮಕ್ಕಳ ನಡವಳಿಕೆಯಿಂದ ಆತಂಕವಾಗುವುದು. ಸ್ವಂತ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 8
ಸಿಂಹ: ಶತ್ರುಗಳಿಂದ ಪದವಿ ಕೈತಪ್ಪಲಿದೆ. ನವದಂಪತಿಗಳಿಗೆ ಸಂತಾನ ಪ್ರಾಪ್ತಿಯ ಮುನ್ಸೂಚನೆ. ಚಿಕ್ಕ ಅಂಗಡಿಯವರಿಗೆ ದೊಡ್ಡ ಲಾಭ. ಶುಭಸಂಖ್ಯೆ: 9
ಕನ್ಯಾ: ಕಾರ್ಯ ಸಾಧನೆಯಿಂದ ಸಂಸ್ಥೆಗೆ ಲಾಭ. ಲೇವಾದೇವಿ ವ್ಯವಹಾರದಲ್ಲಿ ಹಣ ಗಳಿಸುವಿರಿ. ನಿಮ್ಮ ಪ್ರತಿಭೆಗೆ ಜನರಿಂದ ಪ್ರಶಂಸೆ. ಶುಭಸಂಖ್ಯೆ: 2
ತುಲಾ: ಗೃಹ ನಿರ್ಮಾಣ ಪೂರ್ಣಗೊಂಡು ಸಮಾಧಾನ, ಸಾಹಸ ಕಲಾವಿದರಿಗೆ ಯಶಸ್ಸು ಲಭ್ಯ. ಗೃಹ ಕೈಗಾರಿಕೆ ಸ್ಥಾಪನೆಗೆ ಧನಸಹಾಯ. ಶುಭಸಂಖ್ಯೆ: 6
ವೃಶ್ಚಿಕ: ಸಗಟು ವ್ಯವಹಾರದಲ್ಲಿ ಲಾಭದ ಪ್ರಮಾಣ ಹೆಚ್ಚಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ಸವಾಲುಗಳಿಂದ ಕೆಲಸಕ್ಕೆ ಪ್ರೇರಣೆ. ಶುಭಸಂಖ್ಯೆ: 1
ಧನುಸ್ಸು: ಶತ್ರುಗಳಿಂದ ಪ್ರಗತಿಗೆ ಅನುಕೂಲ ಆಗಲಿದೆ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಬಂಧುಗಳಿಂದ ಮಾರ್ಗದರ್ಶನ ಸಿಗಲಿದೆ. ಶುಭಸಂಖ್ಯೆ: 6
ಮಕರ: ಮಕ್ಕಳ ಪ್ರಗತಿಯಿಂದ ಸಂತಸ. ಕೆಲಸದ ಒತ್ತಡದಿಂದಾಗಿ ಪ್ರಮುಖ ಕಾರ್ಯದಿಂದ ವಂಚಿತರಾಗುವಿರಿ. ತೀರ್ಥಕ್ಷೇತ್ರ ದರ್ಶನ. ಶುಭಸಂಖ್ಯೆ: 3
ಕುಂಭ: ಕಲಾವಿದರಿಗೆ ಪರಿಶ್ರಮಕ್ಕೆ ತಕ್ಕ ಫಲ. ನಾಟ್ಯ ಕಲಾವಿದರು, ಚಿತ್ರಕಾರರಿಗೆ ಉತ್ತಮ ಹೆಸರು. ಕೃಷಿ ಉಪಕರಣ ಖರೀದಿಗೆ ಸಹಾಯ. ಶುಭಸಂಖ್ಯೆ: 3
ಮೀನ: ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ. ಹಳೆಯ ಗೆಳೆಯರಿಗೆ ಔತಣಕೂಟ. ಹೃದಯ ಸಂಬಂಧಿ ರೋಗ ಗುಣಮುಖವಾಗಲಿದೆ. ಶುಭಸಂಖ್ಯೆ: 5