Nitya Bhavishya 
ದಿನ ಭವಿಷ್ಯ

ನಿತ್ಯಭವಿಷ್ಯ; ಈ ರಾಶಿಯವರಿಗೆ ಅಪರಿಚಿತರಿಂದ ಸಹಾಯ

ಮೇಷ: ಧಾರ್ಮಿಕ ಜವಾಬ್ದಾರಿ ನಿರ್ವಹಿಸುವಿರಿ. ಪ್ರತಿಭಾಶಾಲಿಗಳಿಗೆ ಉತ್ತಮ ವೇದಿಕೆ ಲಭ್ಯ. ಮಾತೃಮೂಲದ ಆಸ್ತಿಯಲ್ಲಿ ಪಾಲು ಸಿಗಲಿದೆ. ಶುಭಸಂಖ್ಯೆ: 5
ವೃಷಭ: ನೆನೆಗುದಿಗೆ ಬಿದ್ದ ಕೆಲಸಗಳಿಗೆ ಮರುಚಾಲನೆ. ನಿವೇಶನ ಖರೀದಿಗೆ ಸುಸಮಯ. ಅನವಶ್ಯಕ ವಸ್ತುಗಳ ಖರೀದಿಗೆ ಹಣ ಪೋಲು. ಶುಭಸಂಖ್ಯೆ: 9
ಮಿಥುನ: ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿಕೆಯಿಂದ ಉಲ್ಲಾಸ. ಅಪರಿಚಿತರಿಂದ ಸಹಾಯ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 7
ಕಟಕ: ಆಸ್ತಿ ವಿವಾದ ಬಗೆಹರಿಯಲಿದೆ. ಆರಕ್ಷಕ ಅಧಿಕಾರಿಗಳಿಗೆ ವರ್ಗಾವಣೆ ಸಾಧ್ಯತೆ. ಅವಿವಾಹಿತರಿಗೆ ಉತ್ತಮ ಸಂಬಂಧ ಬರಲಿದೆ. ಶುಭಸಂಖ್ಯೆ: 5
ಸಿಂಹ: ಕೆಲಸದಲ್ಲಿ ಆತ್ಮವಿಶ್ವಾಸ ವೃದ್ಧಿಸಲಿದೆ. ಗೃಹ ನಿರ್ಮಾಣ ಕೆಲಸಕ್ಕೆ ವೇಗ ಸಿಗಲಿದೆ. ಬೇಕರಿ, ಡೇರಿ ಉತ್ಪನ್ನಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 7
ಕನ್ಯಾ: ಉದ್ಯೋಗದಲ್ಲಿ ಅಡೆತಡೆ ನಿವಾರಿಸಿಕೊಳ್ಳಿ. ಬ್ಯಾಂಕ್ ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ. ಕಾಫಿ ಬೆಳೆಗಾರರಿಗೆ ಲಾಭ. ಶುಭಸಂಖ್ಯೆ: 1
ತುಲಾ: ದಾಂಪತ್ಯದಲ್ಲಿ ತಾಳ್ಮೆಯಿಂದ ವರ್ತಿಸಿ. ನಿಮ್ಮ ಪ್ರತಿಭೆಗೆ ಸೂಕ್ತ ವೇದಿಕೆ ದೊರೆಯಲಿದೆ. ಔಷಧ ಅಂಗಡಿ ಮಾಲೀಕರಿಗೆ ಧನಲಾಭ. ಶುಭಸಂಖ್ಯೆ: 1
ವೃಶ್ಚಿಕ: ಬೋಧಕ ವೃತ್ತಿಯಲ್ಲಿ ಯಶಸ್ಸು ಗಳಿಸುವಿರಿ. ಸ್ಥಗಿತಗೊಂಡ ಕಾರ್ಯದ ಮರುಆರಂಭಕ್ಕೆ ಸುದಿನ. ಟ್ರಾವೆಲ್ಸ್ ಮಾಲೀಕರಿಗೆ ಲಾಭ. ಶುಭಸಂಖ್ಯೆ: 9
ಧನುಸ್ಸು: ಆಮದು ಉದ್ಯಮದಲ್ಲಿ ಲಾಭಗಳಿಸುವಿರಿ. ಪತ್ರಕರ್ತರು, ಬರಹಗಾರರಿಗೆ ಗೌರವ, ಮನ್ನಣೆ. ಜೇನು ಕೃಷಿ ಆರಂಭಕ್ಕೆ ನಿರ್ಧಾರ. ಶುಭಸಂಖ್ಯೆ: 2
ಮಕರ: ಗೃಹ ನಿರ್ಮಾಣಕ್ಕೆ ಸಾಲ ಮಂಜೂರಾಗಲಿದೆ. ಸೈನಿಕ ವೃತ್ತಿಗೆ ಆಯ್ಕೆಯಾಗುವ ಸಾಧ್ಯತೆ. ಕೌಟುಂಬಿಕ ಜವಾಬ್ದಾರಿ ಹೆಚ್ಚಲಿದೆ. ಶುಭಸಂಖ್ಯೆ: 6
ಕುಂಭ: ಮಗಳ ವಿವಾಹ ನಿಶ್ಚಯ. ಷೇರು ಹೂಡಿಕೆಯಲ್ಲಿ ಲಾಭಗಳಿಸುವಿರಿ. ಆಧ್ಯಾತ್ಮಿಕ ವೃತ್ತಿಪರರಿಗೆ ಲಾಭ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 3
ಮೀನ: ನವದಂಪತಿಗಳಿಗೆ ಸಂತಸದ ಸಮಾಚಾರ. ನಾಟ್ಯ ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಮನೆ ನವೀಕರಣಕ್ಕೆ ಹೆಚ್ಚು ಹಣ ವ್ಯಯ. ಶುಭಸಂಖ್ಯೆ: 3