Nitya Bhavishya 
ದಿನ ಭವಿಷ್ಯ

ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಆಸ್ತಿ ವಿಚಾರದಲ್ಲಿ ಕುಟುಂಬದ ಸಹಕಾರ

ಮೇಷ: ಪ್ರತಿಯೊಂದು ಕೆಲಸವನ್ನೂ ಉತ್ಸಾಹದಿಂದ ಮಾಡುವಿರಿ. ಖಾಸಗಿ ಉದ್ಯೋಗದಲ್ಲಿ ಬಡ್ತಿ. ವ್ಯವಹಾರದಲ್ಲಿ ಲಾಭಗಳಿಸುವ ದಿನ. ಶುಭಸಂಖ್ಯೆ: 8
ವೃಷಭ: ಉದ್ಯೋಗದ ಅತಂತ್ರ ಸ್ಥಿತಿ ಇತ್ಯರ್ಥ. ಉದ್ಯೋಗಸ್ಥ ಮಹಿಳೆಯರಿಗೆ ಸಹೋದ್ಯೋಗಿಗಳಿಂದ ಮೆಚ್ಚುಗೆ. ಅಡುಗೆಯವರಿಗೆ ಲಾಭ. ಶುಭಸಂಖ್ಯೆ: 2
ಮಿಥುನ: ಬುದ್ಧಿವಂತಿಕೆಯಿಂದ ಉದ್ಯೋಗ ಸ್ಥಳದಲ್ಲಿ ಮೆಚ್ಚುಗೆ ಗಳಿಸುವಿರಿ. ದವಸ ಧಾನ್ಯಗಳ ಮಂಡಿ ಮಾಲೀಕರಿಗೆ ಶುಭದಾಯಕದಿನ. ಶುಭಸಂಖ್ಯೆ: 4
ಕಟಕ: ಆಸ್ತಿ ವಿಚಾರದಲ್ಲಿ ಕುಟುಂಬದ ಸಹಕಾರ. ವೈದ್ಯಕೀಯ ಕ್ಷೇತ್ರದಲ್ಲಿ ಗಳಿಕೆಗೆ ಅವಕಾಶ. ಗ್ರಾಹಕರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಶುಭಸಂಖ್ಯೆ: 6
ಸಿಂಹ: ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ ಹೆಗಲೇರಲಿದೆ. ಆಹಾರ ಪದಾರ್ಥಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:3
ಕನ್ಯಾ: ಬೋಧನಾ ವೃತ್ತಿಗೆ ಆಯ್ಕೆಯಾಗುವಿರಿ. ಮಸಾಲೆ ಪದಾರ್ಥಗಳ ವ್ಯಾಪಾರದಲ್ಲಿ ಲಾಭ. ಭೂ ಖರೀದಿಯಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 6
ತುಲಾ: ಇವೆಂಟ್ ಮ್ಯಾನೇಜ್ಮೆಂಟ್ ಮಾಲೀಕರಿಗೆ ಲಾಭ. ಉದ್ಯೋಗದಲ್ಲಿ ಗೌರವ. ಹೊಸ ವ್ಯಾಪಾರ ನಿರ್ಧಾರ ಕಾರ್ಯಗತವಾಗಲಿದೆ. ಶುಭಸಂಖ್ಯೆ:8
ವೃಶ್ಚಿಕ: ಆರಕ್ಷಕ ವೃತ್ತಿ ಪ್ರಾಪ್ತಿ. ಹೊಸ ಯೋಜನೆ ಪ್ರಾರಂಭಕ್ಕೆ ಸಕಾಲ. ಕೃಷಿ ಭೂಮಿ ಖರೀದಿಗೆ ಪ್ರಶಸ್ತ ಸಮಯ. ಇಷ್ಟ ದೇವರನ್ನು ಭಜಿಸಿ. ಶುಭಸಂಖ್ಯೆ: 7
ಧನಸ್ಸು: ಆಸ್ತಿ ವಿವಾದ ಹಿರಿಯರ ಮಧ್ಯಸ್ಥಿಕೆಯಿಂದ ಬಗೆಹರಿಯಲಿದೆ. ಶಕ್ತಿ ಇಂಧನ ವ್ಯವಹಾರದಲ್ಲಿ ಲಾಭಗಳಿಕೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:3
ಮಕರ: ಪರಿಶ್ರಮಕ್ಕೆ ಸೂಕ್ತ ಫಲ ಸಿಗಲಿದೆ. ರಾಜಕೀಯದಲ್ಲಿ ಇರುವವರಿಗೆ ಅನಿರೀಕ್ಷಿತ ಪದವಿ. ಸಿನಿಮಾ ಕ್ಷೇತ್ರದ ನೌಕರರಿಗೆ ಧನ ಲಾಭ. ಶುಭಸಂಖ್ಯೆ:9
ಕುಂಭ: ಬ್ಯಾಂಕ್​ ವ್ಯವಹಾರದಲ್ಲಿ ಪ್ರಗತಿ. ಆಸ್ತಿ ಮಾರಾಟಕ್ಕೆ ಸಮಯ ಕೂಡಿ ಬರಲಿದೆ. ಮಹಿಳೆಯರಿಗೆ ಐಟಿ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 5
ಮೀನ: ಬೇಕರಿ, ಕಾಂಡಿಮೆಂಟ್ಸ್ ವ್ಯವಹಾರದಲ್ಲಿ ಲಾಭ. ಡೇರಿ ಉತ್ಪನ್ನಗಳ ಮಾರಾಟಕ್ಕೆ ಅನುಮತಿ ಸಿಗಲಿದೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:8