ಮೇಷ: ಕ್ರೀಡಾಪಟುಗಳಿಗೆ ಶುಭದಿನ. ಕೋರ್ಟ್ ಕಚೇರಿ ವ್ಯವಹಾರದಲ್ಲಿ ಜಯಶಾಲಿಯಾಗುವಿರಿ. ಉದ್ಯೋಗ ಬದಲಾಯಿಸುವ ಸಾಧ್ಯತೆ. ಶುಭಸಂಖ್ಯೆ: 9
ವೃಷಭ: ವಿವಾಹದ ಅಪೇಕ್ಷಿತರಿಗೆ ಶುಭ ಸುದ್ದಿ ಬರಲಿದೆ. ವಾಹನ ಮಾಲೀಕರಿಗೆ ಲಾಭ ಬರುವುದು. ಲೋಹಗಳಿಂದ ಉತ್ತಮ ಆದಾಯ. ಶುಭಸಂಖ್ಯೆ: 9
ಮಿಥುನ: ತೀರ್ಥಯಾತ್ರೆ ಮಾಡುವ ಯೋಗವಿದೆ. ಶತ್ರುಗಳನ್ನು ನಿಗ್ರಹಿಸುವ ಶಕ್ತಿ ಪ್ರದರ್ಶಿಸುವಿರಿ. ಸಹೋದರರಿಂದ ಆರ್ಥಿಕ ಸಹಕಾರ. ಶುಭಸಂಖ್ಯೆ: 8
ಕಟಕ: ಅಮೂಲ್ಯವಾದ ವಸ್ತು ಖರೀದಿಸುವಿರಿ. ಪತ್ನಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಕಾರ್ಯ ಸಾಧನೆಗಾಗಿ ಸೂಕ್ತ ತಿರುಗಾಟ. ಶುಭಸಂಖ್ಯೆ: 7
ಸಿಂಹ: ಹೋಟೆಲ್ ಮಾಲೀಕರಿಗೆ ಹಣಕಾಸು ತೃಪ್ತಿದಾಯಕ. ಕುಟುಂಬದಲ್ಲಿ ಹಿತವಾದ ಘಟನೆ. ದೂರದ ಸಂಬಂಧಿಗಳಿಂದ ಸಹಾಯ. ಶುಭಸಂಖ್ಯೆ: 3
ಕನ್ಯಾ: ಪತ್ನಿಗೆ ಉದ್ಯೋಗ ಲಭ್ಯ. ಪ್ರಯಾಣದಿಂದ ಆರೋಗ್ಯಕ್ಕೆ ತೊಂದರೆಯಾದೀತು. ತರಕಾರಿ ಮತ್ತು ಹಣ್ಣು ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 9
ತುಲಾ: ತಂದೆಯ ಆರೋಗ್ಯದಲ್ಲಿ ಚೇತರಿಕೆ. ನ್ಯಾಯಾಲಯದ ವ್ಯವಹಾರ ಯಶಸ್ವಿಯಾಗಲಿದೆ. ಯುವಕರಿಗೆ ಸಾಹಸ ಕಾರ್ಯದ ಆಸಕ್ತಿ. ಶುಭಸಂಖ್ಯೆ: 2
ವೃಶ್ಚಿಕ: ತಲೆನೋವಿನಿಂದ ಕಿರಿಕಿರಿ. ಪ್ರಯಾಣದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮಕ್ಕಳ ಪ್ರಗತಿಯಿಂದ ಸಂತಸವಾಗುವುದು. ಶುಭಸಂಖ್ಯೆ: 1
ಧನುಸ್ಸು: ಕೋರ್ಟ್ ಕಚೇರಿಗಳಲ್ಲಿ ಯಶಸ್ಸು ನಿಮ್ಮ ಕಡೆಗಿದೆ. ನೆರೆಹೊರೆಯವರಿಂದ ಸಹಾಯ. ದುಡುಕಿನ ನಿರ್ಧಾರದಿಂದ ತೊಂದರೆ. ಶುಭಸಂಖ್ಯೆ: 3
ಮಕರ: ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಸಹೋದರರೊಂದಿಗೆ ಒಪ್ಪಂದ. ಭೂ ವ್ಯವಹಾರದಲ್ಲಿ ಲಾಭ. ಪ್ರೇಮಿಗಳ ಕನಸು ನನಸಾಗಲಿದೆ. ಶುಭಸಂಖ್ಯೆ: 3
ಕುಂಭ: ಪ್ರಭಾವಿ ಗಣ್ಯರ ಸಂಪರ್ಕ. ಧಾರ್ಮಿಕ ಕಾರ್ಯಗಳಲ್ಲಿ ಮನಶ್ಶಾಂತಿ ಕಾಣುವಿರಿ. ನಿಂತ ಕಾರ್ಯಗಳು ಮುಂದುವರಿಯುವವು. ಶುಭಸಂಖ್ಯೆ: 2
ಮೀನ: ಸ್ನೇಹಿತರೊಂದಿಗೆ ಪ್ರವಾಸ ಯೋಗವಿದೆ. ಬಂಧುಗಳ ಆಗಮನದಿಂದ ಸಂತಸ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಶುಭಸಂಖ್ಯೆ: 3