Nitya Bhavishya 
ದಿನ ಭವಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗೆ ಅಪರಿಚಿತರಿಂದ ಕಷ್ಟಕಾಲದಲ್ಲಿ ಸಹಾಯ ಸಿಗಲಿದೆ

ಮೇಷ: ವಾಹನ ಖರೀದಿಗೆ ಹಣಕಾಸಿನ ಅನುಕೂಲ. ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ವರ್ಗಾವಣೆ. ಸಿನಿಮಾ ನಿರ್ದೇಶಕರಿಗೆ ಮಹತ್ವದ ದಿನ. ಶುಭ ಸಂಖ್ಯೆ: 9
ವೃಷಭ: ವೈದ್ಯರಿಗೆ ಸಮಾಜದಲ್ಲಿ ಸನ್ಮಾನ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಾಧಾನ. ಅಥ್ಲೀಟ್​ಗಳಿಗೆ ವಿದೇಶ ಪ್ರಯಾಣ. ಶುಭ ಸಂಖ್ಯೆ: 6
ಮಿಥುನ: ಸಹೋದರರೊಂದಿಗೆ ಇದ್ದ ಮನಸ್ತಾಪ ಬಗೆಹರಿಯಲಿದೆ. ಖಾದಿ ವಸ್ತ್ರಗಳ ಮಾರಾಟದಲ್ಲಿ ಲಾಭ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಶುಭ ಸಂಖ್ಯೆ: 2
ಕಟಕ: ವಿಚ್ಛೇದಿತರಿಗೆ ಮರುವಿವಾಹ ಸಾಧ್ಯತೆ. ಉನ್ನತ ವಿದ್ಯಾಭ್ಯಾಸದ ಆಸೆ ಈಡೇರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಶುಭ ಸಂಖ್ಯೆ: 5
ಸಿಂಹ: ಅಪರಿಚಿತರಿಂದ ಕಷ್ಟಕಾಲದಲ್ಲಿ ಸಹಾಯ ಸಿಗಲಿದೆ. ಸ್ನೇಹಿತರೊಂದಿಗೆ ದೂರ ಪ್ರಯಾಣ. ಕೃಷಿ ಜಮೀನಿನ ಮಾರಾಟದಲ್ಲಿ ಲಾಭ. ಶುಭ ಸಂಖ್ಯೆ: 1
ಕನ್ಯಾ: ಕೆಮಿಕಲ್ಸ್ ಕಾರ್ಖಾನೆ ಮಾಲೀಕರಿಗೆ ಲಾಭ. ಗೃಹ ನಿರ್ಮಾಣ ಪ್ರಾರಂಭ. ರೇಷ್ಮೆ, ಜೇನು ಕೃಷಿಕರಿಗೆ ಸರ್ಕಾರದಿಂದ ಪುರಸ್ಕಾರ. ಶುಭ ಸಂಖ್ಯೆ: 8
ತುಲಾ: ದುಬಾರಿ ವಸ್ತು ಖರೀದಿಗೆ ವೆಚ್ಚ. ಬ್ಯಾಂಕಿಂಗ್ ನೌಕರರಿಗೆ ಕೆಲಸದ ಒತ್ತಡ. ಐಟಿ ಉದ್ಯೋಗಿಗಳಿಗೆ ಹೊಸ ಪ್ರಾಜೆಕ್ಟ್ ಸಿಗಲಿದೆ. ಶುಭ ಸಂಖ್ಯೆ: 6
ವೃಶ್ಚಿಕ: ಲೆಕ್ಕಪರಿಶೋಧಕ ವೃತ್ತಿಯಲ್ಲಿ ಹಣ ಗಳಿಸುವಿರಿ. ಧಾರ್ಮಿಕ ವ್ಯಕ್ತಿಗಳ ಮಾರ್ಗದರ್ಶನ. ಶಿಕ್ಷಣ ಸಂಸ್ಥೆಗಳ ನೇತಾರರಿಗೆ ಶುಭದಿನ. ಶುಭ ಸಂಖ್ಯೆ: 3
ಧನಸ್ಸು: ಭೂ ವ್ಯವಹಾರದಲ್ಲಿ ದ್ವಿಗುಣ ಲಾಭ. ಸಂಗಾತಿಯ ಮಾರ್ಗದರ್ಶನದಲ್ಲಿ ನೂತನ ಮನೆ ಖರೀದಿ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭ ಸಂಖ್ಯೆ: 7
ಮಕರ: ಕುಟುಂಬದೊಂದಿಗೆ ಪುಣ್ಯಕ್ಷೇತ್ರ ಸಂದರ್ಶಿಸುವಿರಿ. ಐಷಾರಾಮಿ ಜೀವನಕ್ಕೆ ಹಣ ಖರ್ಚು. ಷೇರು ಹೂಡಿಕೆಗೆ ಸೂಕ್ತ ಸಮಯ. ಶುಭ ಸಂಖ್ಯೆ: 9
ಕುಂಭ: ಕೊಟ್ಟ ಸಾಲ ಬರಲಿದೆ. ಸಂಶೋಧಕ ವೃತ್ತಿಯಲ್ಲಿ ಪ್ರಗತಿ. ಗೃಹ ನಿರ್ಮಾಣಕ್ಕಿದ್ದ ಅಡ್ಡಿ ನಿವಾರಣೆ. ರಾಜಕೀಯದವರಿಗೆ ಅಧಿಕಾರ. ಶುಭ ಸಂಖ್ಯೆ: 8
ಮೀನ: ಆಮದು ಮತ್ತು ರಫ್ತು ವ್ಯವಹಾರದಲ್ಲಿ ಲಾಭ. ಸ್ತ್ರೀಯರಿಗೆ ಸಹೋದ್ಯೋಗಿಗಳ ನೆರವು. ನನೆಗುದಿಯಲ್ಲಿದ್ದ ಕೆಲಸಕ್ಕೆ ಮರುಚಾಲನೆ. ಶುಭ ಸಂಖ್ಯೆ: 7