Nitya Bhavishya 
ದಿನ ಭವಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಶ್ರಮಕ್ಕೆ ತಕ್ಕ ಫಲ ಸಿಗಲಿದೆ

ಮೇಷ: ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಇಂದು ಪೂರ್ಣಗೊಳ್ಳಲಿವೆ. ಹಳೆಯ ಸ್ನೇಹಿತರ ಭೇಟಿಯಿಂದ ಮನೋಲ್ಲಾಸ. ಶುಭಸಂಖ್ಯೆ: 5
ವೃಷಭ: ಕುಟುಂಬದವರೊಂದಿಗೆ ಸಮಯ ಕಳೆಯುವಿರಿ. ಮನೆಯ ಸ್ವಚ್ಛತೆ ಅಥವಾ ಅಲಂಕಾರದ ಕೆಲಸಗಳಲ್ಲಿ ಹಣ ವ್ಯಯವಾಗಲಿದೆ.ಶುಭಸಂಖ್ಯೆ:6
ಮಿಥುನ: ಅನಿರೀಕ್ಷಿತ ಉಡುಗೊರೆ ಸಾಧ್ಯತೆ ಇದೆ. ಕೆಲಸದ ನಿಮಿತ್ತ ಪ್ರವಾಸ ಮಾಡುವಿರಿ. ಪಾಲುದಾರಿಕೆಯಲ್ಲಿ ಅಸಮಾಧಾನ ಬೇಡ. ಶುಭಸಂಖ್ಯೆ:1
ಕಟಕ: ಆರೋಗ್ಯದ ಕಾಳಜಿ ವಹಿಸಿ. ಕೋಪದ ನಿಯಂತ್ರಣವಿರಲಿ. ದೈವಿಕ ಪ್ರಾರ್ಥನೆ ಮತ್ತು ಸ್ತೋತ್ರ ಪಠಣದಿಂದ ನೆಮ್ಮದಿ ಸಿಗಲಿದೆ. ಶುಭಸಂಖ್ಯೆ:4
ಸಿಂಹ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ದಾಂಪತ್ಯ ಜೀವನದಲ್ಲಿ ಸಾಮರಸ್ಯವಿರಲಿದೆ. ಪ್ರಭಾವಿ ವ್ಯಕ್ತಿಗಳ ಪರಿಚಯವಾಗುವುದು. ಶುಭಸಂಖ್ಯೆ:6
ಕನ್ಯಾ: ವೃತ್ತಿ ಜೀವನದಲ್ಲಿ ಶುಭ ಫಲಗಳು ದೊರೆಯಲಿವೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸಹೋದರರೊಂದಿಗೆ ವಾಗ್ವಾದ ಬೇಡ. ಶುಭಸಂಖ್ಯೆ:1
ತುಲಾ: ಕಚೇರಿಯಲ್ಲಿ ಸಂವಹನದಲ್ಲಿ ಸ್ಪಷ್ಟತೆ ಇರಲಿ. ಹೊಸ ಕೆಲಸಕ್ಕೆ ಚಾಲನೆ ನೀಡಲು ಸೂಕ್ತ ಸಮಯ. ಪ್ರಯಾಣದ ವೇಳೆ ಹುಷಾರು. ಶುಭಸಂಖ್ಯೆ: 3
ವೃಶ್ಚಿಕ: ಆರ್ಥಿಕ ಲಾಭದ ಸಾಧ್ಯತೆ. ನಿಮ್ಮ ಮಾತಿನಿಂದ ಇತರರ ಮನ ಗೆಲ್ಲುವಿರಿ. ಹಿತಶತ್ರುಗಳ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು. ಶುಭಸಂಖ್ಯೆ: 8
ಧನಸ್ಸು: ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಮಾಜದಲ್ಲಿ ಗೌರವ ದೊರೆಯುವುದು. ಬರಬೇಕಾದ ಬಾಕಿ ಹಣ ಕೈ ಸೇರುವ ಸಾಧ್ಯತೆ ಇದೆ.ಶುಭಸಂಖ್ಯೆ: 8
ಮಕರ: ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವಿದೇಶಿ ವ್ಯವಹಾರಗಳಲ್ಲಿ ಯಶಸ್ಸು. ಖರ್ಚಿನ ಮೇಲೆ ಹಿಡಿತವಿರಲಿ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 4
ಕುಂಭ: ಮನೆಯಲ್ಲಿ ಶುಭ ಕಾರ್ಯಗಳಿಗೆ ನಾಂದಿ. ಮಹಿಳಾ ಉದ್ಯಮದಾರರಿಗೆ ಅದೃಷ್ಟ ಒಲಿಯಲಿದೆ. ಚಿನ್ನದ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:5
ಮೀನಾ: ದೈವ ಭಕ್ತಿ ಹೆಚ್ಚಾಗಲಿದೆ. ಕೆಲಸದಲ್ಲಿ ಸವಾಲುಗಳಿದ್ದರೂ ಧೈರ್ಯದಿಂದ ಎದುರಿಸುವಿರಿ. ಸಂಗಾತಿಯ ಆರೋಗ್ಯ ಸುಧಾರಿಸಲಿದೆ.ಶುಭಸಂಖ್ಯೆ: 7