ಮೇಷ: ಆಧ್ಯಾತ್ಮಿಕ ಚಿಂತನೆಯತ್ತ ಮನಸ್ಸು, ಉನ್ನತ ವಿದ್ಯಾಭ್ಯಾಸದ ಹಂಬಲ ಈಡೇರಲಿದೆ. ಪಾಲುದಾರಿಕೆಯಲ್ಲಿ ಅನುಕೂಲವಿದೆ. ಶುಭಸಂಖ್ಯೆ: 9
ವೃಷಭ: ಸರಕು ಸಾಗಾಟದಲ್ಲಿ ಲಾಭ. ಸ್ತ್ರೀಯರಿಗೆ ಆಕಸ್ಮಿಕ ಧನಾಗಮನ. ಸ್ವಯಂಕೃತ ಅಪರಾಧದಿಂದ ಸಂಕಷ್ಟ, ಅನಾರೋಗ್ಯ ನಿವಾರಣೆ. ಶುಭಸಂಖ್ಯೆ: 7
ಮಿಥುನ: ಪ್ರೀತಿಯಲ್ಲಿ ಯಶ. ಭಾವನಾತ್ಮಕ ಚಿಂತನೆಯಿಂದ ಶಾಂತಿ. ಕುಟುಂಬಸ್ಥರಿಂದ ಸಹಾಯ. ಆಹಾರಪದಾರ್ಥ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 3
ಕಟಕ: ಪೆಟ್ರೋಲ್, ಡೀಸೆಲ್ ವ್ಯವಹಾರದಲ್ಲಿ ಲಾಭ. ಸ್ಥಿರಾಸ್ತಿ ಖರೀದಿಗೆ ಉತ್ತಮ ಅವಕಾಶ. ಅನಗತ್ಯ ಸಂಬಂಧಗಳನ್ನು ದೂರವಿಡಿ. ಶುಭಸಂಖ್ಯೆ: 3
ಸಿಂಹ: ವಿದೇಶದಲ್ಲಿರುವ ಮಗಳಿಂದ ಅನುಕೂಲ. ಉದ್ಯೋಗದಲ್ಲಿ ಹೊಸ ಆಯ್ಕೆಗಳಿಗೆ ಅವಕಾಶ. ಸ್ಪರ್ಧಾತ್ಮಕ ವಿಷಯಗಳ ಕಡೆ ಆಸಕ್ತಿ. ಶುಭಸಂಖ್ಯೆ: 8
ಕನ್ಯಾ: ಕೋರ್ಟ್ ಕೇಸುಗಳಲ್ಲಿ ವಿಳಂಬ. ವಿದೇಶ ಪ್ರಯಾಣದಲ್ಲಿ ಅನುಕೂಲ. ಪತ್ರಿಕೋದ್ಯಮ ವಿದ್ಯಾಭ್ಯಾಸದ ಕನಸು ನನಸಾಗಲಿದೆ. ಶುಭಸಂಖ್ಯೆ: 5
ತುಲಾ: ಕೃಷಿ ವ್ಯವಹಾರದಲ್ಲಿ ಅನುಕೂಲ. ಆಕಸ್ಮಿಕ ವಿದೇಶ ಪ್ರಯಾಣ. ಪತ್ರ ವ್ಯವಹಾರದಲ್ಲಿ ಯಶಸ್ಸು. ಗಂಟು ನೋವು ವಾಸಿಯಾಗಲಿದೆ. ಶುಭಸಂಖ್ಯೆ: 3
ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ. ಸಂಗಾತಿಯಿಂದ ಆರ್ಥಿಕ ಅನುಕೂಲ. ಶುಭ ಕಾರ್ಯದಲ್ಲಿ ಯಶಸ್ಸು. ರತ್ನಾಭರಣ ಖರೀದಿ. ಶುಭಸಂಖ್ಯೆ: 7
ಧನುಸ್ಸು: ರಾಜಕೀಯ ರಂಗದವರಿಗೆ ಅಧಿಕಾರ ಪ್ರಾಪ್ತಿ. ಸಂಗಾತಿಯ ಅನಾರೋಗ್ಯದಿಂದ ಮುಕ್ತಿ. ಉನ್ನತ ಅಧಿಕಾರಿಗಳ ಜೊತೆ ಚರ್ಚೆ. ಶುಭಸಂಖ್ಯೆ: 7
ಮಕರ: ಶಿಕ್ಷಣ ಕ್ಷೇತ್ರದಲ್ಲಿ ಸೋಲು. ಪ್ರೇಮದಲ್ಲಿ ಹಿನ್ನಡೆ. ಪತ್ರಕರ್ತರಿಗೆ ದೂರ ಪ್ರಯಾಣ ಸಾಧ್ಯತೆ. ದೂರ ಪ್ರದೇಶದಲ್ಲಿ ಉದ್ಯೋಗ ಲಾಭ. ಶುಭಸಂಖ್ಯೆ: 5
ಕುಂಭ: ಸ್ಥಿರಾಸ್ತಿ ಖರೀದಿ ಯೋಗ. ತಾಯಿಯ ಸಲಹೆಯಿಂದ ಅಭಿವೃದ್ಧಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ತಂದೆಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 8
ಮೀನ: ಅಡಿಕೆ, ಕಾಳುಮೆಣಸು ಕೃಷಿಕರಿಗೆ ನಿರೀಕ್ಷಿತ ಲಾಭ ಪ್ರಮಾಣದಲ್ಲಿ ಏರಿಕೆ. ಸಿಹಿತಿನಿಸು, ಬೇಕರಿ ಉತ್ಪನ್ನಗಳ ವ್ಯವಹಾರದಲ್ಲಿ ಹಿನ್ನಡೆ. ಶುಭಸಂಖ್ಯೆ: 4