ನಿತ್ಯಭವಿಷ್ಯ; ಈ ರಾಶಿಯ ಮಹಿಳೆಯರಿಗೆ ಅನಿರೀಕ್ಷಿತ ಧನಲಾಭ
ಮೇಷ: ಆಟೋಮೊಬೈಲ್ಸ್ ಅಂಗಡಿಯವರಿಗೆ ಧನಲಾಭ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಕೃಷಿ ಜಮೀನು ಖರೀದಿಗೆ ನಿರ್ಧಾರ. ಶುಭಸಂಖ್ಯೆ: 9
ವೃಷಭ: ಪುಸ್ತಕ ವ್ಯಾಪಾರಿಗಳಿಗೆ ಗಳಿಸುವ ಅವಕಾಶ. ಸಾಂಪ್ರದಾಯಿಕ ವಸ್ತ್ರ ಮಾರಾಟದಲ್ಲಿ ಅಭಿವೃದ್ಧಿ. ಹೋಟೆಲ್ ಪ್ರಾರಂಭಕ್ಕೆ ಶುಭದಿನ. ಶುಭಸಂಖ್ಯೆ: 1
ಮಿಥುನ: ಲಾಭದಲ್ಲಿರುವ ರವಿಯಿಂದ ಅಯಾಚಿತ ಪದವಿ ಪ್ರಾಪ್ತಿ. ಮಗಳ ಮದುವೆ ಸಿದ್ಧತೆ. ಆನ್‌ಲೈನ್ ವ್ಯವಹಾರದಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 5
ಕಟಕ: ಚಿನ್ನ-ಬೆಳ್ಳಿ ಮಳಿಗೆಯವರಿಗೆ ಲಾಭ. ವಿದೇಶಕ್ಕೆ ಹೋಗುವ ಸಾಧ್ಯತೆ. ರಾಜಕೀಯದವರಿಗೆ ಪ್ರಭಾವಿ ವ್ಯಕ್ತಿಗಳಿಂದ ಪದವಿಪ್ರಾಪ್ತಿ. ಶುಭಸಂಖ್ಯೆ: 8
ಸಿಂಹ: ಸಮರ್ಥ ನಾಯಕತ್ವಕ್ಕೆ ಅಧಿಕಾರ ಹುಡುಕಿ ಬರಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ದೂರದ ಊರಿಗೆ ವರ್ಗಾವಣೆ. ಶುಭಸಂಖ್ಯೆ: 2
ಕನ್ಯಾ: ಶಿಕ್ಷಕ ವೃತ್ತಿಯವರಿಗೆ ಬಡ್ತಿ. ಸ್ವಂತ ಉದ್ಯೋಗದ ಮಹಿಳೆಯರಿಗೆ ಅನಿರೀಕ್ಷಿತ ಧನಲಾಭ. ವಸ್ತ್ರವಿನ್ಯಾಸಕಾರರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 6
ತುಲಾ: ಪ್ರೇಮದ ಸುಳಿಯಿಂದ ಹೊರಬರುವುದಕ್ಕೆ ಪ್ರಯತ್ನಿಸಿ. ಧಾರ್ಮಿಕ ವೃತ್ತಿಪರರಿಗೆ ಲಾಭ. ಬಾಹ್ಯಾಕಾಶ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 7
ವೃಶ್ಚಿಕ: ತಾಂತ್ರಿಕ, ವಾಣಿಜ್ಯ ಕ್ಷೇತ್ರದ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಫಲ. ಷೇರು ವ್ಯವಹಾರದಲ್ಲಿ ಅಲ್ಪಗಳಿಕೆ. ಉದ್ಯಮ ಸ್ಥಾಪನೆಗೆ ನಿರ್ಧಾರ. ಶುಭಸಂಖ್ಯೆ: 4
ಧನುಸ್ಸು: ಕುಟುಂಬದೊಂದಿಗೆ ತೀರ್ಥಕ್ಷೇತ್ರ ಸಂದರ್ಶನ. ಚಲನಚಿತ್ರ ಕ್ಷೇತ್ರದವರಿಗೆ ಅವಕಾಶ ಸಿಗಲಿದೆ. ಶತ್ರುಗಳಿಂದಲೂ ಸಹಾಯ ಸಿಗಲಿದೆ. ಶುಭಸಂಖ್ಯೆ: 5
ಮಕರ: ನೃತ್ಯ ಸಂಯೋಜಕರಿಗೆ ಬೇಡಿಕೆಯಿದೆ. ಮಗನ ವಿವಾಹ ನಿಶ್ಚಯ. ಮಾತುಕತೆಯಿಂದ ಆಸ್ತಿ ಸಮಸ್ಯೆ ಇತ್ಯರ್ಥ. ದೂರ ಪ್ರಯಾಣ. ಶುಭಸಂಖ್ಯೆ: 3
ಕುಂಭ: ಆಸ್ತಿ ವಿವಾದದಲ್ಲಿ ಸಿಲುಕಿಕೊಳ್ಳುವಿರಿ. ಗೃಹ ನಿರ್ಮಾಣ ಸಾಮಗ್ರಿಗಳ ಮಾರಾಟದಲ್ಲಿ ಅಧಿಕ ಲಾಭ. ಕನಸಿನ ನಿವೇಶನ ಸಿಗಲಿದೆ. ಶುಭಸಂಖ್ಯೆ: 9
ಮೀನ: ಸಂಗಾತಿಯ ಅನಾರೋಗ್ಯ ನಿವಾರಣೆ. ಕೇಂದ್ರದ ಸೇವಾ ಕ್ಷೇತ್ರದಲ್ಲಿ ಪ್ರವೇಶ ಸಿಗಲಿದೆ. ವೈಮಾನಿಕ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 2