ಮೇಷ: ಕುಟುಂಬದಲ್ಲಿ ಸಂತಸದ ವಾತಾವರಣ. ಸಂಗಾತಿಯ ಬೆಂಬಲ. ಪಾಲುದಾರಿಕೆಯಲ್ಲಿ ಸಕಾರಾತ್ಮಕ ದಿನ. ಹಣ ತಿರುಗಿಬರುತ್ತದೆ. ಶುಭಸಂಖ್ಯೆ: 9
ವೃಷಭ: ಕಠಿಣ ಪರಿಶ್ರಮಕ್ಕೆ ಫಲ ಸಿಗಲಿದೆ. ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿ. ಬಾಕಿ ಉಳಿದಿರುವ ಕೆಲಸ ಪೂರ್ತಿಯಾಗಲಿದೆ.ಶುಭಸಂಖ್ಯೆ: 9
ಮಿಥುನ: ಸಹೋದ್ಯೋಗಿ ಜತೆ ಸೈದ್ಧಾಂತಿಕ ಭಿನ್ನಾಭಿಪ್ರಾಯ. ಕುರುಡಾಗಿ ಯಾರನ್ನೂ ನಂಬಬೇಡಿ. ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಶುಭಸಂಖ್ಯೆ: 6
ಕಟಕ: ಹಣಕಾಸಿನ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ಪ್ರಯಾಣದಲ್ಲಿ ವಸ್ತುಗಳ ಬಗ್ಗೆ ಜಾಗ್ರತೆ ಇರಲಿ. ಕೌಟುಂಬಿಕವಾಗಿ ಸಂತೋಷ. ಶುಭಸಂಖ್ಯೆ: 1
ಸಿಂಹ: ಸಂಗಾತಿಯೊಂದಿಗೆ ಉಂಟಾಗಿರುವ ತಪ್ಪುತಿಳಿವಳಿಕೆ ಪರಿಹರಿಸಿಕೊಳ್ಳಿ. ಕಲಹದಿಂದ ದೂರವಿರಿ. ಆಸ್ತಿ ಖರೀದಿ ಮುಂದೂಡಿ. ಶುಭಸಂಖ್ಯೆ:8
ಕನ್ಯಾ: ಪೂಜಾ ಕಾರ್ಯದಿಂದ ಮನಃಶಾಂತಿ. ಷೇರು ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಲಾಭ. ಹೊಸ ವ್ಯವಹಾರಕ್ಕೆ ತಜ್ಞರ ಸಲಹೆ ಅಗತ್ಯ. ಶುಭಸಂಖ್ಯೆ: 6
ತುಲಾ: ವೃತ್ತಿಜೀವನದಲ್ಲಿ ಪ್ರಗತಿ. ಸಮರ್ಪಣಾ ಬುದ್ಧಿಯಿಂದ ದುರ್ಬಲರ ಸೇವೆ ಮಾಡುವಿರಿ. ವ್ಯವಹಾರದಲ್ಲಿ ಜಯ ನಿಮ್ಮದಾಗಲಿದೆ. ಶುಭಸಂಖ್ಯೆ: 6
ವೃಶ್ಚಿಕ: ನಾಟ್ಯರಂಗದವರಿಗೆ ವಿಶೇಷ ವೇದಿಕೆ ಲಭ್ಯ. ವಾದ ವಿವಾದಗಳಿಂದ ದೂರವಿರಿ. ಖಿನ್ನತೆಯಿಂದ ಹೊರಬರುವ ದಾರಿ ಸಿಗಲಿದೆ. ಶುಭಸಂಖ್ಯೆ:2
ಧನಸ್ಸು: ಸ್ತ್ರೀಯರ ಕಾರ್ಯಕ್ಷಮತೆಗೆ ಗೌರವ ಸಿಗಲಿದೆ. ವಿದೇಶದಲ್ಲಿರುವ ಮಕ್ಕಳಿಂದ ಒಳ್ಳೆಯ ಸುದ್ದಿ. ಅನಿರೀಕ್ಷಿತ ಅತಿಥಿಗಳ ಆಗಮನ. ಶುಭಸಂಖ್ಯೆ:1
ಮಕರ: ಐಟಿ ಉದ್ಯೋಗಿಗಳು ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ. ಹೊಸಯೋಜನೆ ಸದ್ಯ ಬೇಡ. ದವಸ ಧಾನ್ಯವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:9
ಕುಂಭ: ಸಾಮಾಜಿಕವಾಗಿ ಸ್ಥಾನಮಾನ ಹೆಚ್ಚಾಗಲಿದೆ. ಪಾಲುದಾರಿಕೆಯಲ್ಲಿ ಲಾಭ. ಸಂಗೀತ ಕಲಾವಿದರಿಗೆ ಅಪಾರ ಯಶಸ್ಸು ಸಿಗಲಿದೆ. ಶುಭಸಂಖ್ಯೆ:4
ಮೀನ: ಕಿರುಚಿತ್ರ ನಿರ್ದೇಶಕರಿಗೆ ಲಾಭ. ವೈದ್ಯ ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ. ಗುತ್ತಿಗೆ ಕಾರ್ವಿುಕರಿಗೆ ಸರ್ಕಾರದಿಂದ ಹಣ ಸಿಗಲಿದೆ. ಶುಭಸಂಖ್ಯೆ:7