nitya-bhavishya | ನಿತ್ಯ ಭವಿಷ್ಯ
ಮೇಷ: ನನೆಗುದಿಗೆ ಬಿದ್ದ ಕೆಲಸಕ್ಕೆ ವೇಗ ಸಿಗಲಿದೆ. ಉನ್ನತ ವಿದ್ಯಾಭ್ಯಾಸದ ಕನಸಿನ ಸಾಕಾರ. ಕೃಷಿ ಜಮೀನು ಖರೀದಿಗೆ ಸೂಕ್ತ ಸಮಯ. ಶುಭಸಂಖ್ಯೆ:6
ವೃಷಭ: ವಿದ್ಯುತ್ ಇಲಾಖೆ ನೌಕರರಿಗೆ ವರ್ಗಾವಣೆ. ವಿಚ್ಛೇದಿತರಿಗೆ ವಿವಾಹ ಯೋಗ. ನ್ಯಾಯಾಲಯದ ತೀರ್ಪು ನಿಮ್ಮ ಪರವಾಗಿರಲಿದೆ. ಶುಭಸಂಖ್ಯೆ: 9
ಮಿಥನ: ಮಹಿಳೆಯರಿಗೆ ಕಚೇರಿಯಲ್ಲಿ ಉನ್ನತ ಹುದ್ದೆ. ಆರಕ್ಷಕ ವೃತ್ತಿಗೆ ಆಯ್ಕೆ. ನಾಟ್ಯ&ಸಂಗೀತ ಕಲಾವಿದರಿಗೆ ಉತ್ತಮ ವೇದಿಕೆ ಲಭ್ಯ. ಶುಭಸಂಖ್ಯೆ: 5
ಕಟಕ: ಶತ್ರುಗಳೆಲ್ಲ ಮಿತ್ರರಾಗುವರು. ಕುಟುಂಬದೊಂದಿಗೆ ಸಂತೋಷಕೂಟ. ತಾಂತ್ರಿಕ ಮತ್ತು ವೈದ್ಯಕಿಯ ವಿದ್ಯಾರ್ಥಿಗಳಿಗೆ ಶುಭದಿನ. ಶುಭಸಂಖ್ಯೆ:2
ಸಿಂಹ: ನಿಮ್ಮ ಪ್ರತಿಭೆಗೆ ಸೂಕ್ತ ಪುರಸ್ಕಾರ. ಪ್ರಭಾವಿಗಳ ಸಹಾಯದಿಂದ ಉದ್ಯೋಗ ಪಡೆಯುವಿರಿ. ರಾಜಕೀಯ ನೇತಾರರಿಗೆ ಕೀರ್ತಿ. ಶುಭಸಂಖ್ಯೆ:2
ಕನ್ಯಾ: ಹೊಸ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ. ಕ್ರಿಕೆಟ್ ತರಬೇತಿ ಸಂಸ್ಥೆಯ ಮಾಲೀಕರಿಗೆ ಲಾಭ. ವೀಸಾ ಸಮಸ್ಯೆ ನಿವಾರಣೆ. ಶುಭಸಂಖ್ಯೆ:1
ತುಲಾ: ಐಟಿ ಉದ್ಯೋಗಿಗಳಿಗೆ ಒತ್ತಡ. ಕೇಂದ್ರ ಸರ್ಕಾರಿ ನೌಕರರಿಗೆ ಬದಲಾವಣೆ ಸಾಧ್ಯತೆ. ಸಾರಿಗೆ ಸಂಸ್ಥೆ ಉದ್ಯೋಗಿಗಳಿಗೆ ಧನ ಲಾಭ. ಶುಭಸಂಖ್ಯೆ: 4
ವೃಶ್ಚಿಕ: ಸಾರ್ವಜನಿಕವಾಗಿ ಗೌರವ ಸಿಗಲಿದೆ. ಕಿರು ಚಿತ್ರ ನಿರ್ದೇಶಕರಿಗೆ ಧನಲಾಭ. ಹಾಲಿನ ಉತ್ಪನ್ನಗಳ ವ್ಯಾಪಾರದಲ್ಲಿ ಆದಾಯ. ಶುಭಸಂಖ್ಯೆ: 7
ಧನಸ್ಸು: ಕುಶಲಕರ್ಮಿಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಇವೆಂಟ್ ಮ್ಯಾನೇಜ್ಮೆಂಟ್ನಿಂದ ಉತ್ತಮ ಆದಾಯ. ಧಾರ್ಮಿಕ ವೃತ್ತಿಯವರಿಗೆ ಲಾಭ. ಶುಭಸಂಖ್ಯೆ: 2
ಮಕರ: ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ. ಮಕ್ಕಳ ಪ್ರಗತಿಯಿಂದ ಸಂತಸವಾಗುವುದು. ವಿಚ್ಛೇದನ ಕಟ್ಟಳೆ ಇತ್ಯರ್ಥವಾಗಲಿದೆ. ಶುಭಸಂಖ್ಯೆ:3
ಕುಂಭ: ಪ್ರಭಾವಿ ಆಧ್ಯಾತ್ಮ ಗುರುಗಳ ಭೇಟಿ. ಬಹುದಿನಗಳ ಪರಿಶ್ರಮಕ್ಕೆ ಫಲ ಸಿಗುವ ದಿನ. ದಿನದ ಅಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ:6
ಮೀನ: ಕುಟುಂಬದ ಆಸ್ತಿ ವಿವಾದ ಅಂತ್ಯ. ಸಂಗಾತಿಯ ಆರೋಗ್ಯ ಸುಧಾರಣೆಯಾಗಲಿದೆ. ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಶುಭಸಂಖ್ಯೆ:5