Nitya Bhavishya 
ದಿನ ಭವಿಷ್ಯ

ನಿತ್ಯಭವಿಷ್ಯ; ಈ ರಾಶಿಯ ಅವಿವಾಹಿತರಿಗೆ ವಿವಾಹ ಸಿದ್ಧಿ

ಮೇಷ: ಸಾರ್ವಜನಿಕ ಮಾಧ್ಯಮದಲ್ಲಿ ಸುದ್ದಿಯಾಗುವಿರಿ. ವಾಣಿಜ್ಯ ಉದ್ದೇಶಕ್ಕೆ ಬಳಸಲು ನಿವೇಶನ ಖರೀದಿ. ಔಷಧ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 4
ವೃಷಭ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ವೈಮಾನಿಕ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗಾವಣೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಕೀರ್ತಿ. ಶುಭಸಂಖ್ಯೆ: 3
ಮಿಥುನ: ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಲಲಿತ ಕಲಾ ವಿಭಾಗದಲ್ಲಿ ಪದವಿ ಪ್ರಾಪ್ತಿ. ಸರ್ಕಾರಿ ಟೆಂಡರ್ ನಿರೀಕ್ಷಿಸಿದಂತೆಯೇ ದೊರಕಲಿದೆ. ಶುಭಸಂಖ್ಯೆ: 2
ಕಟಕ: ಕುಟುಂಬದಲ್ಲಿ ಸಂಭ್ರಮದ ಕ್ಷಣ. ಆಸ್ತಿ ನೋಂದಣಿ ವಿಳಂಬ. ಕೊಟ್ಟ ಹಣ ಬರಲಿದೆ. ಉನ್ನತ ವಿದ್ಯಾಭ್ಯಾಸಕ್ಕೆ ಆಯ್ಕೆಯಾಗಲಿದ್ದೀರಿ. ಶುಭಸಂಖ್ಯೆ: 2
ಸಿಂಹ: ಕೃಷಿ ಜಮೀನು ಖರೀದಿಗೆ ನಿರ್ಧಾರ. ಅನವಶ್ಯಕ ಖರ್ಚುಗಳನ್ನು ನಿಯಂತ್ರಿಸಿ. ಹೊಸ ಪರಿಚಯ ಪ್ರಯೋಜನಕ್ಕೆ ಬರಲಿದೆ. ಶುಭಸಂಖ್ಯೆ: 6
ಕನ್ಯಾ: ಶಿಕ್ಷಕ ವೃತ್ತಿಯವರಿಗೆ ಶುಭದಿನ. ಸಹಕಾರಿ ಸಂಸ್ಥೆಯ ಪದವಿ ಪ್ರಾಪ್ತಿ. ಸಂಗೀತ ಕಲಾವಿದರಿಗೆ ವಿದೇಶದಿಂದ ಆಹ್ವಾನ ಬರಲಿದೆ. ಶುಭಸಂಖ್ಯೆ: 2
ತುಲಾ: ವೈದ್ಯಕೀಯ ಉಪಕರಣ ಮಾರಾಟದಲ್ಲಿ ಲಾಭ. ಕಾನೂನು ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಲಾಭ. ಅವಿವಾಹಿತರಿಗೆ ವಿವಾಹ ಸಿದ್ಧಿ. ಶುಭಸಂಖ್ಯೆ: 7
ವೃಶ್ಚಿಕ: ಐಟಿ ಉದ್ಯೋಗ ಬದಲಾವಣೆಗೆ ನಿರ್ಧಾರ. ಗೃಹ ನಿರ್ಮಾಣಕ್ಕೆ ಸಾಲ ಮಂಜೂರು. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 4
ಧನಸ್ಸು: ತೀರ್ಥಯಾತ್ರೆಯ ಅವಕಾಶ ದೊರೆಯಲಿದೆ. ಕಾರ್ಮಿಕ ಕ್ಷೇತ್ರದಲ್ಲಿ ಪದವಿ ಪ್ರಾಪ್ತಿಯಾಗುವುದು. ಅಪರಿಚಿತರಿಂದ ದೂರವಿರಿ. ಶುಭಸಂಖ್ಯೆ: 3
ಮಕರ: ಹಣದ ವ್ಯವಹಾರದಲ್ಲಿ ಎಚ್ಚರ. ವೃತ್ತಿಯಲ್ಲಿ ಹೊಸ ಜವಾಬ್ದಾರಿ ಹೆಗಲೇರಲಿದೆ. ಸಾಂಸ್ಕೃತಿಕ ಸಂಜೆ ಆಯೋಜಕರಿಗೆ ಲಾಭ. ಶುಭಸಂಖ್ಯೆ: 8
ಕುಂಭ: ಅಮೂಲ್ಯ ವಸ್ತು ಖರೀದಿ. ಹೈನುಗಾರಿಕೆಯಲ್ಲಿ ಗಳಿಕೆ. ತಂದೆಯ ಆರೋಗ್ಯದಲ್ಲಿ ಚೇತರಿಕೆ. ಕಾನೂನು ವಿದ್ಯಾರ್ಥಿಗಳಿಗೆ ಶುಭದಿನ. ಶುಭಸಂಖ್ಯೆ: 1
ಮೀನ: ಸಾಂಬಾರ ಪದಾರ್ಥ ವ್ಯಾಪಾರದಲ್ಲಿ ಲಾಭ ಬರಲಿದೆ. ಕುಟುಂಬದೊಂದಿಗೆ ಸಂಭ್ರಮದ ಕ್ಷಣ. ಸಾಲ ತೀರಿಸಲು ಸಹಾಯ ಲಭ್ಯ. ಶುಭಸಂಖ್ಯೆ: 8