Nitya Bhavishya 
ದಿನ ಭವಿಷ್ಯ

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ನೂತನ ನಿವೇಶನ ಖರೀದಿಗೆ ಸೂಕ್ತ ಸಮಯ

ಮಣಿಕಂಠ ಪಾ ಹಿರೇಮಠ
ಮೇಷ: ಅಲಂಕಾರಿಕ ವಸ್ತುಗಳ ಮಾರಾಟದಲ್ಲಿ ಲಾಭ. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿ. ಉದ್ಯೋಗದ ಪ್ರಯತ್ನ ಸಫಲವಾಗಲಿದೆ. ಶುಭಸಂಖ್ಯೆ: 8
ವೃಷಭ: ಆಟೋಟ ಸ್ಪರ್ಧೆಗಳಲ್ಲಿ ಮಕ್ಕಳ ಸಾಧನೆಗೆ ಹೆಮ್ಮೆ. ರೆಸ್ಟೋರೆಂಟ್​ ವ್ಯಾಪಾರದಲ್ಲಿ ಗಳಿಕೆ. ವಾಹನ ದುರಸ್ತಿಗಾಗಿ ಖರ್ಚು ಸಾಧ್ಯತೆ. ಶುಭಸಂಖ್ಯೆ: 4
ಮಿಥುನ: ಮನೆ ಬದಲಾವಣೆಗೆ ಇದು ಸೂಕ್ತ ಕಾಲ. ಸಾವಯವ ಕೃಷಿಯಿಂದ ಕೀರ್ತಿ. ಸ್ನೇಹಿತನ ನೆರವಿಂದ ಆರ್ಥಿಕ ಮುಗ್ಗಟ್ಟು ನಿವಾರಣೆ. ಶುಭಸಂಖ್ಯೆ: 3
ಕಟಕ: ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ. ವಾಣಿಜ್ಯ ಉದ್ದೇಶದ ಭೂ ವಿವಾದ ಇತ್ಯರ್ಥ. ಖಾದಿ ವಸ್ತ್ರ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 5
ಸಿಂಹ: ನ್ಯಾಯಾಲಯದಲ್ಲಿ ನಿಮ್ಮ ಪರ ತೀರ್ಪು. ಸಂಗೀತ, ನೃತ್ಯ ಶಿಕ್ಷಕರಿಗೆ ಲಾಭ. ಸುಗಮಸಂಗೀತದ ಗಾಯಕರಿಗೆ ವಿಶೇಷ ವೇದಿಕೆ ಲಭ್ಯ. ಶುಭಸಂಖ್ಯೆ: 7
ಕನ್ಯಾ: ಅಂತರಿಕ್ಷಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ವಿದೇಶದಿಂದ ಹಣ. ರಾಜಕಾರಣಿಗಳಿಗೆ ಶುಭದಿನ. ಕ್ರೀಡಾ ಸಾಧನೆಗೆ ಸನ್ಮಾನ. ಶುಭಸಂಖ್ಯೆ: 8
ತುಲಾ: ಎಲೆಕ್ಟ್ರಾನಿಕ್ಸ್​ ವಸ್ತುಗಳ ಮಾರಾಟದಲ್ಲಿ ಲಾಭ ಬರಲಿದೆ. ಸ್ವಂತ ಕ್ಲಿನಿಕ್​ ಸ್ಥಾಪನೆಗೆ ನಿರ್ಧಾರ. ವ್ಯವಹಾರದಲ್ಲಿ ಹೆಚ್ಚು ಹಣ ಗಳಿಸುವಿರಿ. ಶುಭಸಂಖ್ಯೆ: 2
ವೃಶ್ಚಿಕ: ಆಸ್ತಿ ನೋಂದಣಿ ನಿರ್ಧಾರಕ್ಕೆ ಶುಭದಿನ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಹಾಲಿನ ಉತ್ಪನ್ನಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 3
ಧನಸ್ಸು: ಮನೆ ಮಾಲೀಕರಿಗೆ ಬಾಡಿಗೆದಾರರಿಂದ ಒತ್ತಡ. ನೂತನ ನಿವೇಶನ ಖರೀದಿಗೆ ಸೂಕ್ತ ಸಮಯ. ತೋಟಗಾರಿಕೆಯವರಿಗೆ ಅಭಿವೃದ್ಧಿ. ಶುಭಸಂಖ್ಯೆ: 9
ಮಕರ: ವೈಮಾನಿಕ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ. ವಿದೇಶದಲ್ಲಿ ವೇದಿಕೆ ಲಭ್ಯ. ವೀಸಾ ಸಮಸ್ಯೆಗೆ ಪರಿಹಾರ ಸಿಗಲಿದೆ. ಶುಭಸಂಖ್ಯೆ: 9
ಕುಂಭ: ಗೃಹ ನಿರ್ಮಾಣಕ್ಕೆ ಚಾಲನೆ. ನನೆಗುದಿಗೆ ಬಿದ್ದ ಸರ್ಕಾರಿ ಕೆಲಸ ವೇಗ ಪಡೆದುಕೊಳ್ಳಲಿದೆ. ಹಿತಶತ್ರುಗಳಿಂದ ಪದವಿ ಕೈತಪ್ಪೀತು. ಶುಭಸಂಖ್ಯೆ: 9
ಮೀನ: ಪಂಚಮದ ಗುರುವಿನಿಂದ ಆರ್ಥಿಕ ಪ್ರಗತಿ. ತಾಯಿಯ ಆರೋಗ್ಯ ಸುಧಾರಣೆ. ಬಾಲ್ಯ ಸ್ನೇಹಿತನ ಭೇಟಿ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 1