Nitya Bhavishya 
ದಿನ ಭವಿಷ್ಯ

ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಮಕ್ಕಳ ಸಾಧನೆಯಿಂದ ಹೆಮ್ಮೆ

ಮೇಷ: ಸಾಮಾಜಿಕ ಕೆಲಸಗಳಿಂದ ಅನುಕೂಲ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮ. ಆತ್ಮಗೌರವಕ್ಕಾಗಿ ಸ್ನೇಹಿತರಿಂದ ದೂರ. ಶುಭಸಂಖ್ಯೆ: 5
ವೃಷಭ: ಬಂಧುಗಳೊಂದಿಗೆ ಪ್ರವಾಸ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆಯಾಗುವುದು. ವೀಸಾ ಸಮಸ್ಯೆ ಪರಿಹಾರವಾಗಲಿದೆ. ಶುಭಸಂಖ್ಯೆ: 9
ಮಿಥುನ: ನಿರೀಕ್ಷಿತ ಪ್ರಯಾಣದ ವೇಳೆ ವಿಘ್ನ. ಪ್ರೀತಿ-ಪ್ರೇಮದ ವಿಷಯಗಳ ಪ್ರಸ್ತಾಪ. ಮಕ್ಕಳ ಆರೋಗ್ಯದಲ್ಲಿ ಸುಧಾರಣೆಯಾಗುವುದು. ಶುಭಸಂಖ್ಯೆ: 7
ಕಟಕ: ಆರ್ಥಿಕವಾಗಿ ಸದೃಢರಾಗುವಿರಿ. ಭೂಮಿ, ವಾಹನ ಖರೀದಿಯಲ್ಲಿ ಆಸಕ್ತಿ ತಾಳುವಿರಿ. ಸಹೋದರಿಯ ಜೀವನದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 1
ಸಿಂಹ: ಅನಿರೀಕ್ಷಿತ ಪ್ರಯಾಣ. ಛಾಯಾಗ್ರಾಹಕರ ಆದಾಯ ವೃದ್ಧಿ. ಪ್ರೇಮ ಸಂಬಂಧಿ ಚಿಂತೆ. ಸಂಗಾತಿಯ ನೆರವಿಂದ ಸಾಲ ತೀರಿಸುವಿರಿ. ಶುಭಸಂಖ್ಯೆ: 6
ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಕಟ್ಟಡ ಸಾಮಗ್ರಿಗಳ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 4
ತುಲಾ: ಶತ್ರುಗಳು ಮಿತ್ರರಾಗಿ ಬದಲಾಗುವರು. ಆತ್ಮಗೌರವಕ್ಕೆ ಪದವಿ ತ್ಯಜಿಸುವಿರಿ. ಕಲಾವಿದರಿಗೆ ಉತ್ತಮ ಅವಕಾಶ ದೊರೆಯಲಿದೆ. ಶುಭಸಂಖ್ಯೆ: 9
ವೃಶ್ಚಿಕ: ನಿಮ್ಮ ನಿರ್ಧಾರ ಲಾಭದಾಯಕವಾಗಲಿದೆ. ಉದ್ಯೋಗ ಸ್ಥಳದಲ್ಲಿ ಹಣ ಗಳಿಸುವಿರಿ. ಧಾರ್ಮಿಕ ನಾಯಕರಿಗೆ ವಿಶೇಷ ಗೌರವ. ಶುಭಸಂಖ್ಯೆ: 7
ಧನಸ್ಸು: ಆತ್ಮೀಯರಿಂದ ಸಾಲದ ಸಹಾಯ ಲಭ್ಯ. ದೇವತಾ ಕಾರ್ಯಗಳಲ್ಲಿ ಆಸಕ್ತಿ ತಾಳುವಿರಿ. ಬಟ್ಟೆ ವ್ಯಾಪಾರಸ್ಥರಿಗೆ ಅಧಿಕ ಹಣ ಗಳಿಕೆ. ಶುಭಸಂಖ್ಯೆ: 3
ಮಕರ: ಮಕ್ಕಳ ಸಾಧನೆಯಿಂದ ಹೆಮ್ಮೆ. ಆರ್ಥಿಕ ಸಮಸ್ಯೆಗಳು ಪರಿಹಾರವಾಗಲಿವೆ. ಪ್ರೀತಿಪಾತ್ರರ ಭೇಟಿ. ಭಾವನೆಗಳಿಗೆ ಧಕ್ಕೆಯಾದೀತು. ಶುಭಸಂಖ್ಯೆ: 5
ಕುಂಭ: ಅವಿವಾಹಿತರಿಗೆ ಕಂಕಣ ಬಲ. ಭವಿಷ್ಯದ ಚಿಂತನೆಗಳು ಕಾರ್ಯರೂಪಕ್ಕೆ ಬರಲಿದೆ. ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ. ಶುಭಸಂಖ್ಯೆ: 2
ಮೀನ: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಬರಹಗಾರರಿಗೆ ಪುರಸ್ಕಾರ. ಕೃಷಿಕರಿಗೆ ಸೂಕ್ತ ಲಾಭ. ಸಿದ್ಧ ಉಡುಪು ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 6