Nitya Bhavishya | ನಿತ್ಯಭವಿಷ್ಯ 
ದಿನ ಭವಿಷ್ಯ

ನಿತ್ಯಭವಿಷ್ಯ : ಈ ರಾಶಿಯವರಿಗಿಂದು ಶ್ರಮಕ್ಕೆ ಫಲ ದೊರೆಯುವ ದಿನ

ಮೇಷ: ಮನಸ್ಸಿಗೆ ಹೊಸ ಉತ್ಸಾಹ ತರುವ ಘಟನೆ ಸಂಭವಿಸಲಿದೆ. ಉದ್ಯೋಗಸ್ಥ ಮಹಿಳೆಯರಿಗೆ ಮೇಲಧಿಕಾರಿಗಳಿಂದ ಮೆಚ್ಚುಗೆ. ಶುಭಸಂಖ್ಯೆ:1
ವೃಷಭ: ಹಣಕಾಸು ವಿಚಾರದಲ್ಲಿ ಎಚ್ಚರ. ಅನಗತ್ಯ ವೆಚ್ಚಗಳು ತಲೆ ಎತ್ತದಂತೆ ನೋಡಿಕೊಳ್ಳಿ. ಒತ್ತಡದ ನಡುವೆಯೂ ಯಶಸ್ವಿಯಾಗುವಿರಿ. ಶುಭಸಂಖ್ಯೆ:3
ಮಿಥುನ: ಹೊಸ ಅವಕಾಶಗಳು ಸಿಗಲಿವೆ. ಸ್ನೇಹಿತರ ಮಾತುಗಳಿಂದ ಪ್ರೇರಣೆ ಸಿಗುತ್ತದೆ. ಆರೋಗ್ಯದ ಕಡೆ ಗಮನ ಹರಿಸುವುದು ಮುಖ್ಯ. ಶುಭಸಂಖ್ಯೆ:7
ಕಟಕ: ಹಣದ ವ್ಯವಹಾರದಲ್ಲಿ ಜಾಗ್ರತೆ ವಹಿಸಿ. ಸಗಟು ವ್ಯಾಪಾರದಲ್ಲಿ ಲಾಭವಾಗುವುದು. ಐಟಿ ಉದ್ಯೋಗ ಬದಲಾವಣೆಗೆ ನಿರ್ಧಾರ. ಶುಭಸಂಖ್ಯೆ:2
ಸಿಂಹ: ಶ್ರಮಕ್ಕೆ ಫಲ ದೊರೆಯುವ ದಿನ. ಕಲಾವಿದರಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪ್ರಯಾಣದ ಯೋಜನೆ ಇದ್ದರೆ ಅದರಲ್ಲಿ ಲಾಭ ಇದೆ. ಶುಭಸಂಖ್ಯೆ:8
ಕನ್ಯಾ: ಸರ್ಕಾರಿ ನೌಕರರಿಗೆ ಜವಾಬ್ದಾರಿ ಹೆಚ್ಚುವ ಸಾಧ್ಯತೆ. ಸಾಲ ತೀರಿಸಲು ಆತ್ಮೀಯರಿಂದ ಸಹಾಯ. ಸ್ವಲ್ಪ ದಣಿವು ಕಂಡುಬರುತ್ತದೆ.ಶುಭಸಂಖ್ಯೆ: 6
ತುಲಾ: ಹಳೇ ಕೆಲಸ ಮುಗಿಸಲು ಉತ್ತಮ ದಿನ. ಮನೆ ಪರಿಸರದಲ್ಲಿ ಸಂತಸದ ವಾತಾವರಣ. ಕಟ್ಟಡಗಳ ಮಾರಾಟದಲ್ಲಿ ಹಣ ಬರುತ್ತದೆ.ಶುಭಸಂಖ್ಯೆ:3
ವೃಶ್ಚಿಕ: ಕಚೇರಿಯಲ್ಲಿ ಭಾವನೆಗಳನ್ನು ನಿಯಂತ್ರಿಸಿ. ಆಸ್ತಿ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಿ.ಸಂಜೆ ಶುಭಸುದ್ದಿ ಬರುವ ಸೂಚನೆಗಳಿವೆ.ಶುಭಸಂಖ್ಯೆ:1
ಧನಸ್ಸು: ಧೈರ್ಯದಿಂದ ಹೊಸ ಅವಕಾಶ ಸ್ವೀಕರಿಸಿ. ಗೃಹ ನಿರ್ಮಾಣ ಕೆಲಸಕ್ಕೆ ಒಳ್ಳೆಯ ದಿನ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಶುಭಸಂಖ್ಯೆ:3
ಮಕರ: ಕಚೇರಿಯಲ್ಲಿ ಕೆಲಸದ ಗಡಿಬಿಡಿ ಹೆಚ್ಚಾಗಲಿದೆ. ನಿರ್ಮಾಣ ವ್ಯವಹಾರಸ್ಥರಿಗೆ ಸಂಜೆ ವೇಳೆಗೆ ಲಾಭದ ಸುದ್ದಿ. ಹಣಕಾಸಿನಲ್ಲಿ ಸ್ಥಿರತೆ. ಶುಭಸಂಖ್ಯೆ:4
ಕುಂಭ: ಸ್ವ&ಉದ್ಯೋಗಸ್ಥ ಮಹಿಳೆಯರು ತಾಳ್ಮೆ ಕಳೆದು ಕೊಳ್ಳುವ ಸಂಭವ. ನಿವೇಶನ ಖರೀದಿಯ ನಿರ್ಧಾರ ಮುಂದೂಡುವುದು ಉತ್ತಮ.ಶುಭಸಂಖ್ಯೆ: 2
ಮೀನ: ಮನಸ್ಸು ಸೃಜನಶೀಲ ಚಟುವಟಿಕೆಗಳತ್ತ ತಿರುಗುತ್ತದೆ. ನಿಮ್ಮ ಕಲ್ಪನೆಗೆ ಕಚೇರಿಯಲ್ಲಿ ಮುಕ್ತ ಪ್ರಶಂಸೆ. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 8